ಬಾಲಿವುಡ್ ಜೋಡಿ ಅಜಯ್ ದೇವಗನ್-ಕಾಜೋಲ್ ವೈವಾಹಿಕ ಜೀವನಕ್ಕೆ ಈಗ 20 ವರ್ಷ! ಈ ವರ್ಷ ಜನವರಿ ತಿಂಗಳಲ್ಲಿ ಈ ದಂಪತಿ ತಮ್ಮ 20ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಈಚೆಗೆ ಅಜಯ್ತಮ್ಮಿಬ್ಬರ ನಡುವಿನ ಅನ್ಯೋನ್ಯ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ.

‘ನಾವಿಬ್ಬರೂ ಬದಲಾಗಿಲ್ಲ, ಹೇಗಿದ್ದೇವೋ ಹಾಗೇ ಇದ್ದೇವೆ, ಇದೇ ನಮ್ಮ ಆನಂದ ಸಂಸಾರದ ಗುಟ್ಟು’ ಎಂದು ಅಜಯ್ ದೇವಗನ್ ಮಾತನಾಡಿದ್ದಾರೆ.ಸಿನಿಮಾದಸೆಟ್ವೊಂದರಲ್ಲಿ ಇವರ ಪ್ರೇಮ ಕಥಾನಕ ಆರಂಭವಾಗಿತ್ತು. ಅನಂತರ ಅವರು ಮದುವೆಯಾಗಲು ನಿರ್ಧರಿಸಿದಾಗ ಅವರ ಆತ್ಮೀಯರು ಬೇಡ ಎಂದಿದ್ದರಂತೆ. ಆದರೆ ‘ನಮ್ಮ ಪ್ರೇಮವು ಆರಂಭದಷ್ಟೇ ಈಗಲೂಗಟ್ಟಿಯಾಗಿದೆ. ಪರಸ್ಪರ ಗೌರವ ನಮ್ಮ ಸಂಬಂಧವನ್ನು ಹಸಿರಾಗಿಟ್ಟಿದೆ’ ಎಂದಿದ್ದಾರೆ.ಈಗ ಬಾಲಿವುಡ್ ತಾರಾ ಜೋಡಿಗಳಲ್ಲಿ ಈ ದಂಪತಿ ಎಲ್ಲರ ಅಚ್ಚುಮೆಚ್ಚು.

ಸ್ವಭಾವದಲ್ಲೂ ಈ ದಂಪತಿ ತದ್ವಿರುದ್ಧ. ಅಜಯ್ ತೀರಾ ಖಾಸಗಿತನವನ್ನು ಇಷ್ಟಪಟ್ಟರೆ, ಕಾಜೊಲ್ ಎಲ್ಲರೊಂದಿಗೆ ಬೆರೆಯುವ ಸೋಷಿಯಲ್ ಹಾಗೂ ಉತ್ಸಾಹಿ ಮಹಿಳೆ. ಆದರೆ ಇಬ್ಬರನ್ನು ಬೆಸೆದ ಆ ಸಂಗತಿ ಯಾವುದು ಎಂಬುದು ಬಿ– ಟೌನ್ ಪ್ರಶ್ನೆಯಂತೆ.ಸಂದರ್ಶನವೊಂದರಲ್ಲಿ ‘ನಾವಿಬ್ಬರೂ ಮದುವೆಯಾದ ನಂತರ ಏನೂ ಬದಲಾಗಿಲ್ಲ. ಆಕೆ ಆಕೆಯಂತೆಯೇ ಇದ್ದಾಳೆ. ನಾನು ನನ್ನಂತೆಯೇ ಇದ್ದೇನೆ’ ಎಂದು ಹೇಳಿದ್ದಾರೆ. ಇತ್ತೀಚೆಗೆ ಯುರೋಪ್ ಪ್ರವಾಸದಿಂದ ಹಿಂತಿರುಗಿದ ಬಳಿಕ ಕಾಜೋಲ್, ಪತಿ ಜೊತೆಗಿನ ಆತ್ಮೀಯತೆ ಸಾರುವ ವಿಡಿಯೊ ಸಂದೇಶವೊಂದನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದರು.

ಅಜಯ್– ಕಾಜೋಲ್ ದಂಪತಿ 12 ವರ್ಷಗಳ ನಂತರ ‘ತಾನಾಜಿ– ದಿ ಅನ್ಸಂಗ್ ವಾರಿಯರ್’ ಎಂಬ ಸಿನಿಮಾದಲ್ಲಿ ಜೋಡಿಯಾಗಿ ನಟಿಸುತ್ತಿದ್ದಾರೆ. ಇದರಲ್ಲಿ ಅಜಯ್ ವೀರ ಮರಾಠ ನಾಯಕ ಸುಬೇದಾರ್ ತಾನಾಜಿ ಮಲುಸರೆ ಪಾತ್ರದಲ್ಲಿ ನಟಿಸಿದರೆ, ಅವರ ಪತ್ನಿ ಪಾತ್ರವನ್ನು ಕಾಜೋಲ್ ನಿರ್ವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.