ಬುಧವಾರ, ಡಿಸೆಂಬರ್ 8, 2021
28 °C
‘ರಕ್ಷಾಬಂಧನ್’ ಹೊಸ ಚಿತ್ರ ಘೋಷಣೆ

ಪ್ರೀತಿಯ ತಂಗಿಗಾಗಿ ಹೊಸ ಸಿನಿಮಾ ಒಪ್ಪಿಕೊಂಡ ಅಕ್ಷಯ್‌ ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್ ನಟನೆಯ ‘ಲಕ್ಷ್ಮಿ ಬಾಂಬ್‌’ ಚಿತ್ರ ಒಟಿಟಿಯಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಅವರ ಬಣ್ಣದ ಬುಟ್ಟಿಯಲ್ಲಿ ‘ಸೂರ್ಯವಂಶಿ’, ‘ಪೃಥ್ವಿರಾಜ್’, ‘ಅಟ್ರಂಗಿ ರೆ’ ಹಾಗೂ ‘ಬೆಲ್‌ ಬಾಟಂ’ ಸಿನಿಮಾಗಳಿವೆ. ಈ ನಡುವೆಯೇ ಆನಂದ್ ಎಲ್‌. ರೈ ನಿರ್ದೇಶನದ ಹೊಸ ಚಿತ್ರ ‘ರಕ್ಷಾ ಬಂಧನ್‌’ನಲ್ಲಿ ನಟಿಸುತ್ತಿರುವುದಾಗಿ ಅಕ್ಷಯ್ ಘೋಷಿಸಿದ್ದಾರೆ.

ರಕ್ಷಾ ಬಂಧನದ ದಿನದಂದೇ ಈ ಸಿನಿಮಾ ಘೋಷಿಸಲಾಗಿದೆ. ಇದರಲ್ಲಿ ಅಣ್ಣ ಮತ್ತು ತಂಗಿಯ ಬಾಂಧವ್ಯದ ಸುತ್ತ ಕಥೆ ಹೆಣೆಯಲಾಗಿದೆಯಂತೆ. ಈ ಸಿನಿಮಾವನ್ನು ಅಕ್ಷಯ್‌, ತನ್ನ ತಂಗಿ ಅಲ್ಕಾ ಭಾಟಿಯಾ ಅವರಿಗೆ ಅರ್ಪಿಸುತ್ತಿರುವುದು ವಿಶೇಷ.

‘ನನ್ನ ವೃತ್ತಿಬದುಕಿನಲ್ಲಿಯೇ ವಿಶಿಷ್ಟವಾದ ಸಿನಿಮಾ ಇದು. ಚಿತ್ರದ ಕಥೆಯು ಪ್ರತಿಯೊಬ್ಬರ ಹೃದಯವನ್ನು ತಟ್ಟಲಿದೆ. ಹಾಗಾಗಿಯೇ, ಇದರಲ್ಲಿ ನಟಿಸಲು ಒಪ್ಪಿಕೊಂಡೆ. ನನ್ನ ತಂಗಿ ಕೂಡ ಈ ಚಿತ್ರ ನಿರ್ಮಾಣದ ಭಾಗವಾಗಿದ್ದಾರೆ’ ಎಂದು ಅಕ್ಷಯ್‌ ಟ್ವೀಟ್‌ ಮಾಡಿದ್ದಾರೆ.

ಅಕ್ಷಯ್‌ ಕುಮಾರ್ ನಾಲ್ವರು ತಂಗಿಯರನ್ನು ಅಪ್ಪಿಕೊಂಡಿರುವ ಪೋಸ್ಟರ್‌ ಬಿಡುಗಡೆಯಾಗಿದ್ದು, ಕಥೆಯ ಬಗ್ಗೆ ಕುತೂಹಲ ಹೆಚ್ಚಿಸಿದೆ. ಆನಂದ್‌ ಎಲ್‌. ರೈ ಅವರ ಯಲ್ಲೊ ಫಿಲ್ಮ್ಸ್‌ ಹಾಗೂ ಅಕ್ಷಯ್‌ ಕುಮಾರ್‌ ಅವರ ಕೇಪ್‌ ಆಫ್‌ ಗುಡ್‌ ಫಿಲ್ಮ್ಸ್‌ನಡಿ ಈ ಸಿನಿಮಾ ನಿರ್ಮಾಣವಾಗಲಿದೆ.

‘ಅಕ್ಷಯ್‌ ನಿರ್ದೇಶಕರ ನಟ. ಅವರೊಟ್ಟಿಗೆ ಕೆಲಸ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಅಣ್ಣ–ತಂಗಿಯ ಬಾಂಧವ್ಯದ ಸಂಭ್ರಮ ಕಥೆ ಇದಾಗಿದೆ’ ಎಂದು ಹೇಳಿದ್ದಾರೆ ಆನಂದ್‌ ರೈ.

ಮುಂದಿನ ವರ್ಷ ಇದರ ಶೂಟಿಂಗ್‌ ಶುರುವಾಗುವ ನಿರೀಕ್ಷೆಯಿದೆ. 2021ರ ನವೆಂಬರ್‌ 5ರಂದು ವಿಶ್ವದಾದ್ಯಂತ ಏಕಕಾಲಕ್ಕೆ ಸಿನಿಮಾ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು