ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಜ್ ಚೋಪ್ರಾ ಜೀವನಾಧಾರಿತ ಚಿತ್ರದಲ್ಲಿ ಅಕ್ಷಯ್ ಕುಮಾರ್?

Last Updated 9 ಆಗಸ್ಟ್ 2021, 12:54 IST
ಅಕ್ಷರ ಗಾತ್ರ

ಮುಂಬೈ: ಟೋಕಿಯೊ ಒಲಿಂಪಿಕ್ಸ್‌ನ ಜಾವೆಲಿನ್ ಥ್ರೋದಲ್ಲಿ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ಭಾರತದ ನೀರಜ್ ಚೋಪ್ರಾ, ತಾರೆಯಾಗಿ ಹೊರಹೊಮ್ಮಿದ್ದಾರೆ. ಅಲ್ಲದೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಹಿಂದೊಮ್ಮೆ ಸಂದರ್ಶನದಲ್ಲಿ ತಮ್ಮ ಜೀವನಾಧಾರಿತ ಚಿತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟಿಸಲು ಬಯಸುವುದಾಗಿ ನೀರಜ್ ಚೋಪ್ರಾ ಹೇಳಿಕೆ ನೀಡಿದ್ದರು. ಈಗ ಇದಕ್ಕೆ ಸಮಾನವಾದ ಹೇಳಿಕೆಯನ್ನು ಅಕ್ಷಯ್ ಕುಮಾರ್ ನೀಡಿದ್ದಾರೆ.

'ನನ್ನ ಜೀವನಾಧಾರಿತ ಚಿತ್ರ ಮಾಡುವುದಾದರೆ ನೀರಜ್ ಚೋಪ್ರಾ ನಟಿಸಲಿ' ಎಂದು ಅಕ್ಷಯ್ ಹೇಳಿದ್ದಾರೆ. ಈ ಕುರಿತು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಒಲಿಂಪಿಕ್ಸ್‌ನಲ್ಲಿ ನೀರಜ್ ಜೋಪ್ರಾ ಚಿನ್ನದ ಪದಕ ಗೆದ್ದಾಗ ಅಕ್ಷಯ್ ಕುಮಾರ್ ಹಳೆಯ ಚಿತ್ರವೊಂದು ವೈರಲ್ ಆಗಿತ್ತು. ಕೈಯಲ್ಲಿ ಕೋಲು ಹಿಡಿದಿರುವ ಅಕ್ಷಯ್ ಆಗಲೇ ನೀರಜ್ ಚೋಪ್ರಾ ಜೀವನಾಧಾರಿತ ಚಿತ್ರದಲ್ಲಿ ನಟಿಸಲು ತಯಾರಿ ನಡೆಸಿದ್ದರು ಎಂದೆಲ್ಲ ಮೀಮ್ಸ್ ಹರಿದಾಡಿತ್ತು.

ಈ ಕುರಿತು ಪ್ರತ್ರಿಯಿಸಿರುವ ಅಕ್ಷಯ್, 'ಕೈಯಲ್ಲಿ ಕೋಲು ಹಿಡಿದಿರುವ ನನ್ನ ಚಿತ್ರವು ವೈರಲ್ ಆಗಿದೆ. ಇದು ನನ್ನ ಪ್ರಥಮ ಚಿತ್ರ 'ಸೌಗಂಧ್‌' ದೃಶ್ಯವಾಗಿದೆ. ಜನರು ಇದನ್ನು ನೋಡಿ ಆಗಿನಿಂದಲೇ ತಯಾರಿ ಶುರುವಾಗಿದೆ ಎಂದು ಹೇಳುತ್ತಿದ್ದಾರೆ' ಎಂದು ನಗುಮುಖದಿಂದಲೇ ಉತ್ತರಿಸಿದ್ದಾರೆ.

ಏತನ್ಮಧ್ಯೆ ಮನಸ್ಸು ಬದಲಾಯಿಸಿರುವ ನೀರಜ್, ಸದ್ಯಕ್ಕೆ ತಮ್ಮ ಬಯೋಪಿಕ್ ಮಾಡದಂತೆ ವಿನಂತಿಸಿದ್ದಾರೆ. ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಹೇಳಿಕೊಂಡಿದ್ದು, ತಾವಿನ್ನು ಕ್ರೀಡೆಯಲ್ಲಿ ದೇಶಕ್ಕಾಗಿ ಅನೇಕ ಪದಕಗಳನ್ನು ಗೆಲ್ಲಲು ಬಯಸುತ್ತಿದ್ದು, ವೃತ್ತಿಜೀವನ ಮುಗಿಯುವ ವರೆಗೂ ಬಯೋಪಿಕ್ ಮಾಡದಂತೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT