ಭಾನುವಾರ, ಸೆಪ್ಟೆಂಬರ್ 19, 2021
30 °C

21 ವರ್ಷಗಳ ಬಳಿಕ ಜನಪ್ರಿಯ ಹಾಡಿಗೆ ಹೆಜ್ಜೆ ಹಾಕಿದ ಹೃತಿಕ್-ಫರ್ಹಾ ಖಾನ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮುಂಬೈ: 2000ರಲ್ಲಿ ತೆರೆಕಂಡ 'ಕಹೋ ನಾ ಪ್ಯಾರ್ ಹೇ ' ಚಿತ್ರದ ಜನಪ್ರಿಯ 'ಎಕ್ ಪಲ್ ಕಾ ಜೀನಾ ' ಹಾಡಿಗೆ 21 ವರ್ಷಗಳ ಬಳಿಕ ನಟ ಹೃತಿಕ್ ರೋಷನ್ ಹಾಗೂ ನೃತ್ಯ ಸಂಯೋಜಕಿ ಫರ್ಹಾ ಖಾನ್ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದಿದ್ದಾರೆ.

ಈ ಕುರಿತು ನಿರ್ದೇಶಕಿ ಕೂಡಾ ಆಗಿರುವ ಫರ್ಹಾ ಖಾನ್, ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊ ಹಂಚಿದ್ದಾರೆ. 'ಈ ಹೆಜ್ಜೆಗೆ 21 ವರ್ಷಗಳು, ಈಗಲೂ ಪ್ರಬಲವಾಗಿ ಮುಂದಕ್ಕೆ ಸಾಗುತ್ತಿದೆ' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 

ಫರ್ಹಾ ನೃತ್ಯ ಸಂಯೋಜನೆ ಮಾಡಿದ ಈ ಹಾಡು 21ನೇ ಶತಮಾನದ ಆರಂಭದಲ್ಲಿ ಮೋಡಿ ಮಾಡಿತ್ತು. ಬಾಲಿವುಡ್ ಸಿನಿಮಾದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿತ್ತು. ಈ ಚಿತ್ರದ ರೋಮ್ಯಾಂಟಿಕ್ ಹಾಡುಗಳೆಲ್ಲವೂ ಯುವ ಮನಸ್ಕರಲ್ಲಿ ರಾರಾಜಿಸಿದ್ದವು.

ಕಹೋ ನಾ ಪ್ಯಾರ್ ಹೇ ಚಿತ್ರದ ಮೂಲಕ ನಿರ್ದೇಶಕ ರಾಕೇಶ್ ರೋಶನ್, ತನ್ನ ಪುತ್ರ ಹೃತಿಕ್‌ನನ್ನು ಸಿನಿಮಾ ರಂಗಕ್ಕೆ ಪರಿಚಯಿಸಿದ್ದರು. ಅಲ್ಲದೆ ಚೊಚ್ಚಲ ಪ್ರಯತ್ನದಲ್ಲೇ ಹೃತಿಕ್, ಯಶಸ್ಸು ಕಂಡಿದ್ದರಲ್ಲದೆ 'ಅತ್ಯುತ್ತಮ ನಟ' ಹಾಗೂ 'ಪದಾರ್ಪಣೆ ನಟ'ನಿಗಾಗಿ ಫೀಲ್ಮ್‌ಫೇರ್ ಪ್ರಶಸ್ತಿಯನ್ನು ಬಾಚಿಕೊಂಡಿದ್ದರು. ಪ್ರಸ್ತುತ ಚಿತ್ರವು 2000ರಲ್ಲಿ ಗರಿಷ್ಠ ಗಳಿಕೆಯನ್ನು ಪಡೆದಿತ್ತು.

ಅತ್ತ 'ಮೈ ಹೂನ್ ನಾ' ಚಿತ್ರದ ಮೂಲಕ ನಿರ್ದೇಶನಕ್ಕೂ ಕಾಲಿಟ್ಟಿದ್ದ ಫರ್ಹಾ ಖಾನ್, 'ಓಂ ಶಾಂತಿ ಓಂ', 'ತೀರ್ ಮಾರ್ ಖಾನ್', 'ಹ್ಯಾಪಿ ನ್ಯೂ ಇಯರ್' ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು