ವಾರ ಭವಿಷ್ಯ | ಅಕ್ಟೋಬರ್ 5ರಿಂದ 11ರ ವರೆಗೆ: ಪೂರ್ವಿಕರ ಆಸ್ತಿ ಖರೀದಿಗೆ ತಯಾರಿ
Published 4 ಅಕ್ಟೋಬರ್ 2025, 23:30 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
ಜ್ಯೋತಿಷ್ಯ ವಿಶಾರದ, ಮಾದಾಪುರ
ಸಂಪರ್ಕ ಸಂಖ್ಯೆ: 8197304680
ಮೇಷ
ಕಳ್ಳರ ಹಾವಳಿ ಇರುವುದರಿಂದ ನಿಮ್ಮ ವಸ್ತುಗಳನ್ನು ಹೆಚ್ಚು ಜೋಪಾನವಾಗಿ ನೋಡಿಕೊಳ್ಳಿ. ವಿದ್ಯಾರ್ಥಿಗಳಿಗೆ ಸಾಮಾನ್ಯ ಏಳಿಗೆ ಇರುತ್ತದೆ. ಬರಹಗಾರರಿಗೆ ಸಾಕಷ್ಟು ಪ್ರಾಮುಖ್ಯ ಇರುತ್ತದೆ. ಮಾನಸಿಕ ಚಂಚಲದಿಂದ ಭಯದ ವಾತಾವರಣವನ್ನು ಕಾಣುವಿರಿ. ಶಸ್ತ್ರಾಸ್ತ್ರ ವ್ಯಾಪಾರಿಗಳಿಗೆ ಹೆಚ್ಚಿನ ಪೂರೈಕೆಗಾಗಿ ಹಣ ಸಂದಾಯವಾಗುತ್ತದೆ.
04 ಅಕ್ಟೋಬರ್ 2025, 23:30 IST
ವೃಷಭ
ಕೃಷಿ ಕ್ಷೇತ್ರದಲ್ಲಿ ದುಡಿಯುವವರಿಗೆ ಉತ್ತಮ ಸಹಕಾರ ದೊರೆತು ಆದಾಯ ಹೆಚ್ಚುತ್ತದೆ. ನಿಮ್ಮ ಸ್ವಂತ ಆದಾಯವು ಹೆಚ್ಚುತ್ತದೆ. ನೀವು ಮಾಡಿದ ಕಾರ್ಯದಿಂದ ನಿಮ್ಮ ಸಂಸ್ಥೆಗೆ ಲಾಭವಾಗಿ ಎಲ್ಲರೂ ಪ್ರಶಂಸಿಸುವರು. ಮಹಿಳೆಯರ ಆರೋಗ್ಯದಲ್ಲಿ ವ್ಯತ್ಯಾಸವನ್ನು ಕಾಣಬಹುದು. ಪ್ರೀತಿ ಪ್ರೇಮಗಳಲ್ಲಿ ಸಿಲುಕಿರುವವರಿಗೆ ಶುಭ ಫಲವಿರುತ್ತದೆ. ತಂದೆಯಿಂದ ಕುಲ ವೃತ್ತಿಯನ್ನು ಕಲಿಯಬಹುದು. ಮಕ್ಕಳಿಂದ ನಿಮಗೆ ಗೌರವ ದೊರಕುತ್ತದೆ.
04 ಅಕ್ಟೋಬರ್ 2025, 23:30 IST
ಮಿಥುನ
ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವವರಿಗೆ ಆದಾಯ ಕಡಿಮೆಯಾಗುತ್ತದೆ. ನಿಮಗೆ ಬರಬೇಕಾಗಿದ್ದ ಬಾಕಿ ಹಣ ಈಗ ಬರುವ ಸಾಧ್ಯತೆ ಇದೆ. ಸರ್ಕಾರಿ ಕಚೇರಿಗಳ ವ್ಯವಹಾರಗಳು ಸುಗಮವಾಗಿ ಆಗುತ್ತವೆ. ಹಿರಿಯರ ಅನಾರೋಗ್ಯಕ್ಕೆ ಹೆಚ್ಚು ವೆಚ್ಚವನ್ನು ಭರಿಸಬೇಕಾದೀತು. ನಿಮ್ಮ ವ್ಯವಹಾರಗಳಲ್ಲಿ ಆದಾಯವು ಕಡಿಮೆ ಇರುತ್ತದೆ. ನಿಮ್ಮ ಸಂಗಾತಿಯ ಸಹಕಾರ ಸಾಕಷ್ಟು ದೊರೆಯುತ್ತದೆ. ಪ್ರಿಯವ್ಯಕ್ತಿಗಳ ಆಗಮನದಿಂದ ಸಂತೋಷಪಡುವಿರಿ.
04 ಅಕ್ಟೋಬರ್ 2025, 23:30 IST
ಕರ್ಕಾಟಕ
ನಿಮ್ಮ ಬಗ್ಗೆ ನಿಮಗೆ ಬಲವಾದ ನಂಬಿಕೆ ಇರುತ್ತದೆ. ಆದಾಯವು ಸ್ವಲ್ಪ ಚೇತರಿಕೆ ಹಾದಿಯನ್ನು ಕಾಣುತ್ತದೆ. ವ್ಯಾಪಾರದ ಒಳಗುಟ್ಟುಗಳನ್ನು ಕರಗತ ಮಾಡಿಕೊಳ್ಳುವಿರಿ. ಆರ್ಥಿಕ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸುವಿರಿ. ಕೆಲಸದಲ್ಲಿ ಹೆಚ್ಚು ಜಾಗರೂಕರಾಗಿರುವುದು ಬಹಳ ಉತ್ತಮ. ದಾಂಪತ್ಯದ ಸಮಸ್ಯೆಗಳು ನಿವಾರಣೆಯಾಗಿ ಮನಸ್ಸಿಗೆ ಸಂತೋಷವೆನಿಸುತ್ತದೆ.
04 ಅಕ್ಟೋಬರ್ 2025, 23:30 IST
ಸಿಂಹ
ಮನಸ್ಸಿನಲ್ಲಿ ಸಂತಸವಿದ್ದರೂ ಅದನ್ನು ತೋರಿಸಿಕೊಳ್ಳಲಾಗುವುದಿಲ್ಲ. ಆದಾಯವು ನಿರೀಕ್ಷೆಯ ಹತ್ತಿರ ಬರುತ್ತದೆ. ವಿದ್ಯಾರ್ಥಿಗಳಲ್ಲಿ ಪ್ರಗತಿಯನ್ನು ಕಾಣಬಹುದು. ಮಕ್ಕಳಿಂದ ನಿಮಗೆ ಆರ್ಥಿಕ ಸಹಾಯ ದೊರೆಯುವ ಸಾಧ್ಯತೆ ಇದೆ. ಜನಪ್ರತಿನಿಧಿಗಳಿಗೆ ಮುಜುಗರ ಉಂಟಾಗುವ ಸಂದರ್ಭಗಳು ಎದುರಾಗಬಹುದು. ದೂರಪ್ರಯಾಣದಲ್ಲಿ ಆರೋಗ್ಯ ಸಮಸ್ಯೆ ಕಾಣಿಸಬಹುದು. ಒಂದೆಡೆ ಸಾಲವನ್ನು ಪಡೆದು ಉಳಿದ ಕೈಸಾಲಗಳನ್ನು ತೀರಿಸಬಹುದು.
04 ಅಕ್ಟೋಬರ್ 2025, 23:30 IST
ಕನ್ಯಾ
ನೆರೆಹೊರೆಯವರೊಂದಿಗೆ ಬಾಂಧವ್ಯವನ್ನು ವೃದ್ಧಿಮಾಡಿಕೊಳ್ಳುವಿರಿ. ವ್ಯವಹಾರಗಳಲ್ಲಿ ತಕ್ಕಮಟ್ಟಿನ ಚೇತರಿಕೆಯನ್ನು ಕಾಣಬಹುದು. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಬಗ್ಗೆ ಗೊಂದಲವಾಗಬಹುದು. ವಾಹನ ವಿಷಯದಲ್ಲಿ ಜಾಗರೂಕರಾಗಿರುವುದು ನಿಮಗೆ ಒಳ್ಳೆಯದು. ದೂರದಲ್ಲಿರುವ ಮಿತ್ರರಿಂದ ಈಗ ಸಹಾಯ ದೊರೆಯುತ್ತದೆ.
04 ಅಕ್ಟೋಬರ್ 2025, 23:30 IST
ತುಲಾ
ನಿಮ್ಮ ನಿರ್ಧಾರಗಳಲ್ಲೇ ಸಾಕಷ್ಟು ದ್ವಂದ್ವ ಇರುತ್ತದೆ. ನಿಮ್ಮ ಕೆಲಸ ಕಾರ್ಯಗಳು ನಿರೀಕ್ಷೆಯಂತೆ ನಡೆಯದೆ ಸ್ವಲ್ಪ ಬೇಸರವಾಗಬಹುದು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಆರ್ಥಿಕ ಸಹಾಯ ಲಭಿಸುತ್ತದೆ. ಆದಾಯವು ಸಾಮಾನ್ಯಗತಿಯಲ್ಲಿರುತ್ತದೆ. ಶತ್ರುಗಳ ಯೋಜನೆಗಳನ್ನು ಧ್ವಂಸ ಮಾಡುವಂತಹ ತಂತ್ರಗಳನ್ನು ರೂಪಿಸುವಿರಿ. ರಾಜಕೀಯ ವ್ಯಕ್ತಿಗಳು ತಮ್ಮತನವನ್ನು ಉಳಿಸಿಕೊಂಡಲ್ಲಿ ರಾಜಕೀಯದಲ್ಲಿ ಮುಂದುವರೆಯಲು ಅನುಕೂಲವಾಗುತ್ತದೆ.
04 ಅಕ್ಟೋಬರ್ 2025, 23:30 IST
ವೃಶ್ಚಿಕ
ಉದ್ಯೋಗದಲ್ಲಿ ಒಳ್ಳೆಯ ಹೆಸರನ್ನು ಪಡೆಯುವಿರಿ. ನಿಮ್ಮ ನಡೆ-ನುಡಿಯಿಂದ ಜನರಿಂದ ಗೌರವ ಪಡೆಯುವಿರಿ. ಕೆಲವು ಮಹಿಳೆಯರಿಗೆ ವಸ್ತ್ರಾಭರಣಗಳನ್ನು ಖರೀದಿ ಮಾಡುವ ಯೋಗವಿದೆ. ಹಳೆಯ ಸಾಲಗಳಿಂದ ವಿಮುಕ್ತಿ ಪಡೆಯುವಿರಿ. ರಾಜಕಾರಣಿಗಳಿಗೆ ಯಶಸ್ಸು ಇರುತ್ತದೆ. ಕಳೆದು ಹೋದ ಕೆಲವು ವಸ್ತುಗಳು ನಿಮಗೆ ಮರಳಿ ದೊರಕುತ್ತವೆ. ವಿದ್ಯಾರ್ಥಿಗಳಿಗೆ ಆಟಪಾಠಗಳಲ್ಲಿ ಹೆಚ್ಚಿನ ಪ್ರಗತಿ ಇರುತ್ತದೆ.
04 ಅಕ್ಟೋಬರ್ 2025, 23:30 IST
ಧನು
ನಿಮ್ಮ ಪಾಲಿನ ಕೆಲಸವನ್ನು ಸರಾಗವಾಗಿ ಮಾಡಿ ಮುಗಿಸುತ್ತೀರಿ. ದೂರದೂರುಗಳಿಗೆ ಪ್ರಯಾಣ ಮಾಡುವ ಸಾಧ್ಯತೆಗಳಿವೆ. ಹಣ ಕಡಿಮೆ ಇರುತ್ತದೆ. ಬೇರೆಯವರ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುವಿರಿ. ಬಂಧುಗಳ ವಿರೋಧ ಎದುರಾಗಬಹುದು. ಖರ್ಚುಗಳು ಅನಿರೀಕ್ಷಿತವಾಗಿ ಎದುರಾಗಬಹುದು. ಕೃಷಿಕರ ವರಮಾನದಲ್ಲಿ ಸ್ವಲ್ಪಮಟ್ಟಿಗೆ ಇಳಿಮುಖವಾಗಬಹುದು.
04 ಅಕ್ಟೋಬರ್ 2025, 23:30 IST
ಮಕರ
ಮಕ್ಕಳಿಂದ ಆಗುತ್ತಿದ್ದ ಸಮಸ್ಯೆಗಳು ಕಡಿಮೆಯಾಗುತ್ತವೆ. ಅಧಿಕಾರಸ್ಥ ಮಹಿಳೆಯರಿಗೆ ನೆಮ್ಮದಿ ಕದಡುವ ಸಂದರ್ಭವಿದೆ. ವ್ಯಾಪಾರದಲ್ಲಿ ಸಾಮಾನ್ಯ ಲಾಭ ಇರುತ್ತದೆ. ಔಷಧ ವ್ಯಾಪಾರ ಮಾಡುವವರಿಗೆ ವ್ಯಾಪಾರ ಹೆಚ್ಚಳವಾಗುತ್ತದೆ. ಶತ್ರುಗಳನ್ನು ಮಟ್ಟ ಹಾಕುವ ಅವಕಾಶ ದೊರೆಯುತ್ತದೆ. ಪ್ರಸೂತಿ ವೈದ್ಯರಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆಗಳಿವೆ. ಸಹೋದರರಿಂದ ನಿಮ್ಮ ಕೆಲಸಗಳಿಗೆ ಹೆಚ್ಚಿನ ಸಹಕಾರ ದೊರೆಯುತ್ತದೆ.
04 ಅಕ್ಟೋಬರ್ 2025, 23:30 IST
ಕುಂಭ
ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಹಿತಕರ ಬದಲಾವಣೆಯನ್ನು ಕಾಣಬಹುದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಹುಮ್ಮಸ್ಸು ಬರುತ್ತದೆ. ಆದಾಯವು ಕಡಿಮೆ ಇರುತ್ತದೆ. ಆಮದು ಮತ್ತು ರಫ್ತು ಮಾಡುವವರಿಗೆ ಈಗ ಆದಾಯ ಉತ್ತಮವಾಗಿರುತ್ತದೆ. ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ ವ್ಯಾಪಾರ ಹೆಚ್ಚಾಗಿ ಲಾಭ ಬರುತ್ತದೆ. ಸ್ವಂತ ಉದ್ಯೋಗ ಮಾಡುವವರಿಗೆ ಬೇಕಾದ ಸಾಲ ಸೌಲಭ್ಯಗಳು ದೊರೆಯುತ್ತವೆ.
04 ಅಕ್ಟೋಬರ್ 2025, 23:30 IST
ಮೀನ
ವಾರದ ಆರಂಭದಲ್ಲಿ ಜಡ್ಡುಗಟ್ಟಿದ ವಾತಾವರಣವಿರುತ್ತದೆ. ಆದಾಯವು ಕಡಿಮೆ ಇದ್ದು ಖರ್ಚು ಹೆಚ್ಚಾಗುವ ಸಂಭವವಿದೆ. ಹಿರಿಯರ ಸಹಕಾರ ದೊರೆಯುವುದು ಕಡಿಮೆ. ಆಸ್ತಿ ಖರೀದಿಯ ವಿಷಯದಲ್ಲಿ ಮುನ್ನಡೆ ಇರುತ್ತದೆ. ಬೇರೆಯವರ ಪಾಲಾಗಿದ್ದ ನಿಮ್ಮ ಪೂರ್ವಿಕರ ಆಸ್ತಿಯನ್ನು ಖರೀದಿ ಮಾಡಲು ತಯಾರಿ ನಡೆಸುವಿರಿ.
04 ಅಕ್ಟೋಬರ್ 2025, 23:30 IST