ದಿನ ಭವಿಷ್ಯ: ಈ ರಾಶಿಯವರಿಗೆ ದಾಂಪತ್ಯದಲ್ಲಿ ಬಿರುಕು ಮೂಡಲಿದೆ
Published 4 ಅಕ್ಟೋಬರ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕುಟುಂಬದ ಬಗ್ಗೆ ಯಕ್ಷಪ್ರಶ್ನೆಯೇ ಆಗಿ ಉಳಿದಿದ್ದ ಪ್ರಶ್ನೆಗಳಿಗೆ ಉತ್ತರ ದೊರೆಯುತ್ತದೆ. ಧಾರ್ಮಿಕ ಕ್ಷೇತ್ರಗಳ ಭೇಟಿ, ದೇವರ ದರ್ಶನ ಸಾಧ್ಯವಾಗುತ್ತದೆ. ವಿದ್ಯಾಭ್ಯಾಸದ ಸಮಯದಲ್ಲಿ ಏಕಾಗ್ರತೆ ಮುಖ್ಯವಾಗುತ್ತದೆ.
ವೃಷಭ
ಜನರಿಂದ ಪ್ರಯೋಜನ ಪಡೆದುಕೊಳ್ಳುವ ಸಲುವಾಗಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಮರ ಹತ್ತಿ ಕೆಲಸ ಮಾಡುವವರು, ಎತ್ತರದಲ್ಲಿ ಕೆಲಸ ನಿರ್ವಹಿಸುವವರು ಇಂದು ಹೆಚ್ಚಿನ ಜಾಗ್ರತೆ ವಹಿಸಿ.
ಮಿಥುನ
ಕೆಲಸಕ್ಕಾಗಿ ಕುಟುಂಬದವರನ್ನು ಬಿಟ್ಟು ವಿದೇಶಕ್ಕೆ ಅಥವಾ ಪರಸ್ಥಳಕ್ಕೆ ಹೋಗುವುದು ಅನಿವಾರ್ಯವಾಗಲಿದೆ. ಆಹಾರ ಪಥ್ಯದ ವಿಚಾರದಲ್ಲಿ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಕಷ್ಟಕರವೆನಿಸಲಿದೆ.
ಕರ್ಕಾಟಕ
ನಿಯಮಿತವಾದ ಯೋಗಾಸನ ಹಾಗೂ ಪ್ರಾಣಾಯಾಮದ ಅಭ್ಯಾಸದಿಂದಾಗಿ ಈ ದಿನ ಲವಲವಿಕೆಯಿಂದಿರುವಿರಿ. ನಿರ್ಜಲೀಕರಣದಿಂದ ನಿಮ್ಮ ಚರ್ಮವು ಸುಕ್ಕುಗಟ್ಟಿದಂತಾಗಬಹುದು, ಎಚ್ಚರವಹಿಸಿರಿ.
ಸಿಂಹ
ಕೊಟ್ಟ ಮಾತಿನಂತೆ ನಡೆದುಕೊಳ್ಳಲಾಗದಿರುವುದು ನಿಮ್ಮ ಮನಸ್ಸಿಗೆ ನೋವುಂಟುಮಾಡಬಹುದು. ಸುಸ್ಥಿರವಾಗಿರುವ ನಿಮ್ಮ ಆಸ್ತಿಯ ಮೇಲೆ ಇತರರ ಕಣ್ಣು ಬೀಳದಂತೆ ಎಚ್ಚರವಹಿಸುವುದು ಅಗತ್ಯ.
ಕನ್ಯಾ
ಮಕ್ಕಳ ಸಹಕಾರದಿಂದ ಕೆಲಸಗಳು ಅಚ್ಚುಕಟ್ಟಾಗಿ ಮುಗಿಯುವುದು. ತಂದೆ-ತಾಯಿಯ ಆತ್ಮೀಯತೆಯ ಕೆಲ ಬುದ್ಧಿ ಮಾತುಗಳನ್ನು ತಪ್ಪಾಗಿಅರ್ಥೈಸಿಕೊಳ್ಳುವುದು ಸರಿಯಲ್ಲ. ಹಿರಿಯರನ್ನು ಗೌರವಿಸಿ.
ತುಲಾ
ನಿಮ್ಮ ಆದರ್ಶಗಳನ್ನೆ ದರ್ಪಣದಂತೆ ಅನುಸರಿಸುತ್ತಿರುವ ಸಂತತಿಯನ್ನು ಕಂಡು ಹೆಮ್ಮೆ ಎನಿಸುತ್ತದೆ. ಬಟ್ಟೆ ಅಂಗಡಿಯವರಿಗೆ ಇಂದು ಲಾಭದಾಯಕ ದಿನವಾಗಲಿದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ದೊರಕಿ ಸಂತಸ ಹೊಂದುವಿರಿ.
ವೃಶ್ಚಿಕ
ಸಂಬಂಧಿಕರ ಅಥವಾ ಅಕ್ಕಪಕ್ಕದವರ ಕೆಲವು ಮಾತುಗಳು ನಿಮ್ಮ ದಾಂಪತ್ಯದಲ್ಲಿ ಬಿರುಕನ್ನು ಮೂಡಿಸಲಿದೆ. ಲೇವಾದೇವಿ ವ್ಯವಹಾರದವರಿಗೆ ಸಾಲ ವಸೂಲಿ ಕಾರ್ಯಕ್ರಮಕ್ಕೆ ಹಲವಾರು ಅಡ್ಡಿ ಆತಂಕಗಳು ಎದುರಾಗುತ್ತವೆ.
ಧನು
ವಿದ್ಯಾರ್ಥಿಗಳು ನಿಮ್ಮ ಹಟ ಹಾಗು ಸೋಂಬೇರಿತನವನ್ನು ಬಿಟ್ಟು ಅಧ್ಯಯನವನ್ನು ಮಾಡಿದರೆ ಶ್ರೇಯಸ್ಸು ಸಾಧ್ಯ. ಅಪರಿಚಿತರಿಂದ ಅನಿರೀಕ್ಷಿತ ಉಡುಗೊರೆ ದೊರೆಯುವ ಸಂಭವವಿದೆ.
ಮಕರ
ನಿಮ್ಮ ಸಂತೋಷವನ್ನು ಹೆಚ್ಚಿಸಲು ನಿಮ್ಮ ಸೋದರ ಸಂಬಂಧಿಗಳು ವಿಶೇಷ ಪ್ರಯತ್ನ ಮಾಡುವರು. ನಿಮಗೆ ಎಷ್ಟೇ ಒತ್ತಡವಿದ್ದರು ಸಹ ಮುಖದಲ್ಲಿನ ನಗುವು ಮಾಸದೇ ಇರಲಿ. ವಿಷ ಅನಿಲದ ಭೀತಿ ಇರಬಹುದು.
ಕುಂಭ
ಕುಟುಂಬದ ಹಿರಿಯರ ಮುಖದರ್ಶನ ಮತ್ತು ಆಶೀರ್ವಾದದಿಂದ ನಿಮ್ಮ ಮನಸ್ಸು ಪ್ರಫುಲ್ಲವಾಗುತ್ತದೆ. ನಿಮ್ಮ ಅತಿಯಾದ ನಿರ್ಲಕ್ಷ್ಯತನದ ಬುದ್ದಿಯು ನಿಮ್ಮ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ.
ಮೀನ
ನಿರಂತರವಾಗಿ ನಿಮ್ಮ ಬದುಕಿನಲ್ಲಿ ಆಗುತ್ತಿರುವ ಎಡವಟ್ಟುಗಳು ಸಂಗಾತಿಯ ಮಾತುಗಳನ್ನು ನೆನಪಿಸುತ್ತದೆ. ಸ್ವತ್ತುಗಳ ವಿಚಾರದಲ್ಲಿ ಬಂಧುಗಳು ನೆರವಿಗೆ ಬರಲಿದ್ದು, ತಂದೆಯ ಮಾತಿನಂತೆಯೇ ನಡೆಯಲು ತೀರ್ಮಾನಿಸಿ.