ಹೈದರಾಬಾದ್: ಮೊದಲ ಸೆಟ್ ಹಿನ್ನಡೆಯಿಂದ ಚೇತರಿಸಿದ ಬೆಂಗಳೂರು ಟಾರ್ಪಿಡೋಸ್ ತಂಡ, ಭಾನುವಾರ ನಡೆದ ಪ್ರೈಮ್ ವಾಲಿಬಾಲ್ ಲೀಗ್ ಪಂದ್ಯದಲ್ಲಿ ಕೋಲ್ಕತ್ತ ಥಂಡರ್ಬೋಲ್ಟ್ಸ್ ತಂಡವನ್ನು 11–14, 15–13, 15–11, 15–11 ರಿಂದ ಸೋಲಿಸಿತು.

ಬೆಂಗಳೂರಿನ ಜೋಯೆಲ್ ಬೆಂಜಮಿನ್ ‘ಪಂದ್ಯದ ಆಟಗಾರ’ ಗೌರವಕ್ಕೆ ಪಾತ್ರರಾದರು.

ಮೊದಲ ಸೆಟ್ನಲ್ಲಿ ಕೋಲ್ಕತ್ತ ರಕ್ಷಣೆಯಲ್ಲಿ ಉತ್ತಮ ಆಟ ಪ್ರದರ್ಶಿಸಿ, ಬೆಂಗಳೂರಿನ ಆಕ್ರಮಣವನ್ನು ನಿಭಾಯಿಸಿತು. ಆದರೆ ಜಲೆನ್ ಪೆನ್ರೋಸ್ ಮತ್ತು ಸೇತು ಎರಡನೇ ಸೆಟ್ನಲ್ಲಿ ಪ್ರತಿದಾಳಿ ನಡೆಸಿದರು. ಜೋಯೆಲ್ ಸಹ ಲಯಕಂಡುಕೊಂಡರು. ಕೋಲ್ಕತ್ತದ ಸೂರ್ಯಾಂಶ್ ತೋಮಾರ್ ಅವರು ಕೆಲವು ಸ್ಪೈಕ್ಗಳು ಗಮನ ಸೆಳೆದರೂ ಟಾರ್ಪಿಡೋಸ್ ಮೇಲುಗೈ ತಡೆಯಲಾಗಲಿಲ್ಲ. ಟಾರ್ಪಿಡೋಸ್ನ ಮುಜೀಬ್ ಸಕಾಲಕ್ಕೆ ಬ್ಲಾಕಿಂಗ್ನಲ್ಲಿ ಮಿಂಚಿದರು. ಪೆನ್ರೋಸ್ ಅವರ ಸೂಪರ್ ಸರ್ವ್ಗಳೂ ತಂಡಕ್ಕೆ ನಿರ್ಣಾಯಕವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.