ಪ್ರಯಾಗ್ರಾಜ್: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾಗಿಯಾಗಿ ಸಂಗಮ್ ಘಾಟ್ನಲ್ಲಿ ಇಂದು ಪುಣ್ಯ ಸ್ನಾನ ಮಾಡಿದರು.

ನಂತರ ಪಿಟಿಐ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾಕುಂಭ ಮೇಳಕ್ಕಾಗಿ ಉತ್ತರಪ್ರದೇಶ ಸರ್ಕಾರ ಸ್ಥಾಪಿಸಿರುವ ಸೌಕರ್ಯಗಳ ಬಗ್ಗೆ ಹಾಡಿ ಹೊಗಳಿದರು.

2019 ರಲ್ಲಿ ನಡೆದ ಕುಂಭಮೇಳಕ್ಕೆ ಹೋಲಿಸಿದರೆ ಈ ಸಾರಿಯ ಕುಂಭಮೇಳದ ಸಿದ್ಧತೆ, ಸೌಕರ್ಯಗಳು ಗಮನಾರ್ಹವಾಗಿ ಬದಲಾಗಿವೆ ಎಂದು ಹೇಳಿದರು.

ಇಷ್ಟೊಂದು ದೊಡ್ಡ ಪ್ರಮಾಣದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿರುವ ಉತ್ತರಪ್ರದೇಶ ಸರ್ಕಾರ, ಸಿಎಂ ಯೋಗಿ ಅವರಿಗೆ, ಎಲ್ಲ ಪೊಲೀಸರಿಗೆ, ಅಧಿಕಾರಿಗಳಿಗೆ, ಕಾರ್ಮಿಕರಿಗೆ ನಾನು ಕೈಮುಗಿದು ವಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಕುಂಭಮೇಳದಲ್ಲಿ ನಿನ್ನೆ ನಟಿ ತಮನ್ನಾ ಭಾಟಿಯಾ ಭಾಗಿಯಾಗಿದ್ದರು. ಇಂದು ಕತ್ರಿನಾ ಕೈಫ್, ವಿಕ್ಕಿ ಕೌಶಲ್, ರವೀನಾ ಟಂಡನ್ ಸೇರಿದಂತೆ ಅನೇಕರು ಭಾಗಿಯಾದರು.
.ಕುಂಭಮೇಳದಲ್ಲಿ ತಮನ್ನಾ ಪುಣ್ಯಸ್ನಾನ: ನಟ ವಶಿಷ್ಠ ಸಾಥ್; ಒಡೆಲಾ–2 ಟೀಸರ್ ಬಿಡುಗಡೆ.ಮಹಾಕುಂಭ ಮೇಳ | ಸಂಗಮ ಬಳಿ ಗಂಗೆಯ ನೀರು ಸುರಕ್ಷಿತವಾಗಿಲ್ಲ: CSPCB ಮಾಹಿತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.