ಮಂಗಳವಾರ, ಫೆಬ್ರವರಿ 25, 2020
19 °C

'ಅಲಾ ವೈಕುಂಠಪುರಮುಲೋ' ಟೀಸರ್‌ ಬಿಡುಗಡೆ: 20 ಗಂಟೆಯಲ್ಲಿ 61 ಲಕ್ಷ ಜನ ವೀಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌:  ತೆಲುಗಿನ ಸ್ಟೈಲಿಶ್‌ಸ್ಟಾರ್‌ ಅಲ್ಲು ಅರ್ಜುನ್ ಅಭಿನಯದ ‘ಅಲಾ ವೈಕುಂಠಪುರಮುಲೋ’ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. 20 ಗಂಟೆಗಳಲ್ಲಿ 61 ಲಕ್ಷ ಜನ ವೀಕ್ಷಣೆ ಮಾಡಿರುವುದು ತೆಲುಗು ಚಿತ್ರರಂಗದಲ್ಲೇ ದಾಖಲೆಯಾಗಿದ್ದು ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದೆ.

ಟಾಲಿವುಡ್‌ ಚಿತ್ರರಂಗದ ‘ಮಾತಿನ ಮಾಂತ್ರಿಕ’ ಎಂದೇ ಖ್ಯಾತರಾಗಿರುವ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್‌ ಅಲಾ ವೈಕುಂಠಪುರಮುಲೋ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಬಾರಿ ನಿರೀಕ್ಷೆ ಹುಟ್ಟುಹಾಕಿರುವ ಈ ಸಿನಿಮಾ ಬರುವ ಸಂಕ್ರಾಂತಿಗೆ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಈ ಹಿಂದೆ ಚಿತ್ರತಂಡ ಸಾಮಜವರಗಮನ ಹಾಡನ್ನು ‘ಪ್ರೊಮೊ ಸಾಂಗ್‌’ ರೂಪದಲ್ಲಿ ಯೂಟ್ಯೂಬ್‌ಗೆ ಸೇರಿಸಿತ್ತು. ಈ ಹಾಡು ಒಂದೇ ದಿನದಲ್ಲಿ ಸುಮಾರು 92 ಲಕ್ಷ ಜನ ವೀಕ್ಷಿಸಿದ್ದು, ಮೂರು ಲಕ್ಷ ಲೈಕ್ಸ್ ಪಡೆದಿರುವುದು ದಾಖಲೆಯಾಗಿತ್ತು. ‘ಸಿರಿವೆನ್ನೆಲ’ ಸೀತಾರಾಮಶಾಸ್ತ್ರಿ ಬರೆದ ಸಾಮಜವರಗಮನ ಹಾಡಿಗೆ ತಮನ್ ಎಸ್‌. ಎಸ್‌. ಸ್ವರ ಸಂಯೋಜನೆ ಮಾಡಿದ್ದು ಗಾಯಕ ಸಿದ್‌ ಶ್ರೀರಾಮ್‌ ಹಾಡಿದ್ದಾರೆ.

ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ಕನ್ನಡದ ಪೂಜಾ ಹೆಗ್ಡೆ ನಟಿಸಿದ್ದಾರೆ. ಇಂದು ಬಿಡುಗಡೆಯಾಗಿರುವ ಟೀಸರ್‌ನಲ್ಲಿ ಅಲ್ಲು ಅರ್ಜುನ್‌ ಮಾಸ್ ಮತ್ತು ಕಾರ್ಪೋರೆಟ್‌ ನೌಕರನ ಲುಕ್‌ನಲ್ಲಿ ಅಭಿಮಾನಿಗಳ ಮನಸೂರೆಗೊಂಡಿದ್ದಾರೆ. ಕಾರ್ಪೋರೆಟ್‌ ದಲ್ಲಾಳಿಗಳು ಮತ್ತು ಗ್ರಾಮೀಣ ಪ್ರದೇಶದ ಮುಗ್ಧ ಜನರ ನಡುವಿನ ಕಥ ಹಂದರದ ಎಳೆ ಈ ಟೀಸರ್‌ ನೋಡಿದವರಿಗೆ ಕಾಣಿಸದೇ ಇರದು. 

ಕುಡುಗೋಲಿನಲ್ಲಿ ಸಿಗರೇಟ್‌ ಹೊತ್ತಿಸಿಕೊಂಡು, ಕೈಯಲ್ಲಿ ಕೋಳಿ ಹಿಡಿಯುವ ಗ್ರಾಮೀಣ ಯುವಕರ ಶೈಲಿಯ ಲುಕ್‌ ಅಭಿಮಾನಿಗಳ ಮನಗೆದ್ದಿದ್ದೆ. ನಾಯಕಿ ಪೂಜಾ ಹೆಗ್ಡೆ ಕೂಡ ಸಾಫ್ಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಟಬು, ವೆನ್ನೆಲ ಕಿಶೋರ್‌, ರಾಜೇಂದ್ರ ಪ್ರಸಾದ್‌, ಎನ್‌.ಪೇತುರಾಜ್‌, ಸುನೀಲ್‌, ನವದೀಪ್ ಈ ಚಿತ್ರದಲ್ಲಿ ನಟಿಸಿದ್ದಾರೆ.

ಅಲ್ಲು ಅರ್ಜುನ್‌ ಜೊತೆಗೂಡಿ ಜುಲಾಯಿ, ಸನ್‌ ಆಫ್‌ ಸತ್ಯಮೂರ್ತಿ ಯಂತಹ ಉತ್ತಮ ಚಿತ್ರಗಳನ್ನು ನೀಡಿದ್ದ ತ್ರಿವಿಕ್ರಮ್‌ ಈಗ ಅಲಾ ವೈಕುಂಠಪುರಮುಲೋ ಚಿತ್ರದ ಮೂಲಕ ಮತ್ತೊಂದು ಹಿಟ್ ಚಿತ್ರ ನೀಡಲು ಸಜ್ಜಾಗಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು