ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೋಚರ್' ವೆಬ್‌ ಸರಣಿಗೆ ಕಾರ್ಯಕಾರಿ ನಿರ್ಮಾಪಕಿ ಅಲಿಯಾ ಭಟ್

Published 6 ಫೆಬ್ರುವರಿ 2024, 10:12 IST
Last Updated 6 ಫೆಬ್ರುವರಿ 2024, 10:12 IST
ಅಕ್ಷರ ಗಾತ್ರ

ನವದೆಹಲಿ: ಎಮ್ಮಿ(emmy) ಪ್ರಶಸ್ತಿ ವಿಜೇತ, ‘ದೆಹಲಿ ಕ್ರೈಮ್‌‘ ಖ್ಯಾತಿಯ ರಿಚಿ ಮೆಹ್ತಾ ನಿರ್ದೇಶನದ 'ಪೋಚರ್' ವೆಬ್‌ ಸರಣಿಗೆ ನಟಿ ಅಲಿಯಾ ಭಟ್‌ ಕಾರ್ಯಕಾರಿ ನಿರ್ಮಾಪಕಿಯಾಗಿದ್ದಾರೆಂದು ಅಮೆಜಾನ್‌ ಒಟಿಟಿ ವೇದಿಕೆ ಮಾಹಿತಿ ಹಂಚಿಕೊಂಡಿದೆ. ‌

ಈ ಸಂಬಂಧ ಅಮೆಜಾನ್‌ ಪ್ರೈಮ್‌ ವಿಡಿಯೊ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದೆ.

'ಪೋಚರ್'(Poacher) ವೆಬ್‌ ಸರಣಿಯು ನೈಜ ಘಟನೆಗಳ ಆಧಾರಿತ ಕಥೆಯಾಗಿದ್ದು, ಕ್ಯೂಸಿ ಎಂಟರ್‌ಟೈನ್‌ಮೆಂಟ್ ನಿರ್ಮಾಣ ಸಂಸ್ಥೆ ನಿರ್ಮಿಸಿದೆ.

‘ಪೋಚರ್‘ ವೆಬ್‌ ಸರಣಿಯು ಅತ್ಯುತ್ತಮವಾಗಿ ಮೂಡಿ ಬಂದಿದೆ ಎಂಬ ವಿಶ್ವಾಸವಿದೆ. ಕ್ಯೂಸಿ ಎಂಟರ್‌ಟೈನ್‌ಮೆಂಟ್ ನಿರ್ಮಾಣ ಸಂಸ್ಥೆಯ ನಿರ್ಮಾಣ ಕಾರ್ಯದಲ್ಲಿ ನಾನು ಭಾಗಿಯಾಗಿರುವುದು ನನಗೆ ಖುಷಿಯಾಗಿದೆ ಎಂದು ನಟಿ ಅಲಿಯಾ ಭಟ್‌ ತಿಳಿಸಿದ್ದಾರೆ.

ಮೆಹ್ತಾ ಈ ಸರಣಿಗೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ನಿಮಿಷಾ ಸಜಯನ್, ರೋಷನ್ ಮ್ಯಾಥ್ಯೂ, ದಿಬ್ಯೇಂದು ಭಟ್ಟಾಚಾರ್ಯರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪೋಚರ್ ವೆಬ್‌ ಸರಣಿಯು ಮೊದಲು ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ತೆರೆ ಕಾಣಲಿದ್ದು, ಫೆಬ್ರುವರಿ 23ರಂದು ಪ್ರೈಮ್‌ ವಿಡಿಯೊ ಒಟಿಟಿ ವೇದಿಕೆಯಲ್ಲಿ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT