ಶನಿವಾರ, ಏಪ್ರಿಲ್ 4, 2020
19 °C

ಚಿತ್ರರಂಗದಲ್ಲಿ ಎಲ್ಲರೂ ಲೀಡರ್ಸ್‌: ಶಿವರಾಜ್‌ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಕನ್ನಡ ಸಿನಿಮಾ ರಂಗದಲ್ಲಿ ಎಲ್ಲರೂ ಲೀಡರ್‌. ಈ ಕ್ಷೇತ್ರದಲ್ಲಿ ನನಗಿಂತ ಹಿರಿಯರಾದ ಅನಂತನಾಗ್‌, ರವಿಚಂದ್ರನ್‌ ಇದ್ದಾರೆ. ಸಿನಿಮಾ ನಗರಿ ನಿರ್ಮಾಣ ಸೇರಿದಂತೆ ಉತ್ತಮ ಕೆಲಸಕ್ಕೆ ನನ್ನ ಬೆಂಬಲವಿದೆ. ನಾನೂ ಕೈ ಜೋಡಿಸುತ್ತೇನೆ’ ಎಂದು ನಟ ಶಿವರಾಜ್‌ಕುಮಾರ್‌ ಮಂಗಳವಾರ ಇಲ್ಲಿಗೆ ಸಮೀಪದ ನಗುವನಹಳ್ಳಿಯಲ್ಲಿ ಹೇಳಿದರು.

‘ಸಿನಿಮಾ ನಗರಿ ನಿರ್ಮಾಣಕ್ಕೆ ಮುಂದಾಗಿರುವುದು ಸಂತಸದ ವಿಚಾರ. ಉತ್ತಮ ಸ್ಥಳದಲ್ಲಿ, ಸರಿಯಾದ ವಿಧಾನದಲ್ಲಿ ಆಗಬೇಕು. ಅವಸರಪಡಬಾರದು. ಇದು ವಿಶ್ವದಲ್ಲೇ ಅತ್ಯುತ್ತಮ ಸಿನಿಮಾ ನಗರಿ ಎನಿಸಿಕೊಳ್ಳಬೇಕು. ಅದಕ್ಕೆ ನಾವು ಕೂಡ ಸಲಹೆ ನೀಡುತ್ತೇವೆ. ಸಿನಿಮಾ ರಂಗಕ್ಕೆ ಹಾಗೂ ಜನರಿಗೆ ಉಪಯೋಗವಾಗುವಂತಿರಬೇಕು’ ಎಂದರು.

ರಾಗಿ ತಿನ್ನುತ್ತೇವೆ: ‘ಭಾರತದ ಜನರಿಗೆ ರೋಗನಿರೋಧಕ ಶಕ್ತಿ ಹೆಚ್ಚು. ಇನ್ನು ಕರ್ನಾಟಕದಲ್ಲಿ ನಾವು ಹೆಚ್ಚು ರಾಗಿ ತಿನ್ನುತ್ತೇವೆ. ಆದರೂ ಕೋವಿಡ್‌–19 ಸೋಂಕಿನ ಬಗ್ಗೆ ಎಚ್ಚರದಿಂದ ಇರಬೇಕು’ ಎಂದು ಸಲಹೆ ನೀಡಿದರು.

‘ಸಿನಿಮಾ ಶೂಟಿಂಗ್‌ ಮುಂದುವರಿದಿದೆ. ಭಾನುವಾರ ಶಬರಿಮಲೆಗೆ ಹೋಗುತ್ತಿದ್ದೇನೆ. ನನಗೆ ಯಾವುದೇ ಆತಂಕವಿಲ್ಲ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು