ಮಂಗಳವಾರ, ಫೆಬ್ರವರಿ 18, 2020
16 °C

ಸೋಲಿನಿಂದ ಕಂಗೆಟ್ಟಿದ್ದ ಅಲ್ಲರಿ ನರೇಶ್‌ಗೆ ನಗ್ನತೆಯ 'ನಾಂದಿ' ಕೈಹಿಡಿಯುವುದೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ನವರಸಗಳಲ್ಲೂ ಸೈ ಅನಿಸಿಕೊಂಡಿದ್ದ ನಟ ಅಲ್ಲರಿ ನರೇಶ್ ಹಲವು ಹಿಟ್‌ ಸಿನಿಮಾಗಳನ್ನು ಕೊಟ್ಟು ನಂತರ ಸಾಲುಸಾಲು ಸೋಲಿನಿಂದ ಕಂಗೆಟ್ಟಿದ್ದರು. ಈ ಬಾರಿ  ಸೋಲಿನಿಂದ ಹೊರಬರುವ ಪ್ರಯತ್ನ ಅವರ ಹೊಸ ಸಿನಿಮಾ ‘ನಾಂದಿ’ ಪೋಸ್ಟರ್‌ನಲ್ಲಿ ಕಾಣುತ್ತಿದೆ.

ಅಲ್ಲರಿ ನರೇಶ್‌ ನಗ್ನವಾಗಿ ಕಾಣಿಸಿಕೊಂಡಿರುವ ಪೋಸ್ಟರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನರೇಶ್ ಅವರನ್ನು ಬೆತ್ತಲೆಯಾಗಿಸಿ ಸರಪಳಿಯಿಂದ ಬಂಧಿಸಿ ತಲೆಕೆಳಗಾಗಿ ನೇತು ಹಾಕಿರುವ ದೃಶ್ಯ ಚಿತ್ರದ ಫಸ್ಟ್ ಲುಕ್‌ನಲ್ಲಿದೆ. 

ಟಾಲಿವುಡ್‌ನಲ್ಲಿ ದೊಡ್ಡ ಸುದ್ದಿ ಮಾಡುತ್ತಿದ್ದು, ಈ ಪೋಸ್ಟರ್‌ ಸಿನಿಮಾದ ಬಗ್ಗೆ ಇದ್ದ ಕುತೂಹಲವನ್ನು ಹೆಚ್ಚಿಸಿದೆ. ಅಷ್ಟರ ಮಟ್ಟಿಗೆ ನರೇಶ್‌ ಮೊದಲ ಯತ್ನದಲ್ಲಿ ಜನರ ಗಮನ ಸೆಳೆಯಲು ಯಶಸ್ವಿಯಾಗಿದ್ದಾರೆ. 

ಮೊದಲ ಸಿನಿಮಾ ‘ಅಲ್ಲರಿ’ ಸೂಪರ್‌ ಹಿಟ್‌ ಆದ ನಂತರ ನರೇಶ್ ಹಲವು ಯಶಸ್ವಿ ಸಿನಿಮಾಗಳನ್ನು ನೀಡಿದರು. ನಂತರ ‘ಜ್ಯೂನಿಯರ್’, ‘ನೇನು’, ‘ರೂಂಮೇಟ್ಸ್‌’, ‘ಲಡ್ಡುಬಾಬು’ ನಂತಹ ಸಾಲುಸಾಲು ಸಿನಿಮಾಗಳು ತೋಪಾದವು.

ಸತತ ಸೋಲಿನಿಂದ ಸ್ವಲ್ಪ ಸಮಯ ಸಿನಿಮಾದಿಂದ ಬ್ರೇಕ್‌ ತೆಗೆದುಕೊಂಡಿದ್ದ ನರೇಶ್‌, ಕಳೆದ ವರ್ಷ ಮಹೇಶ್ ಬಾಬು ಅಭಿನಯದ ‘ಮಹರ್ಷಿ’ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಮಾಡಿದ್ದರು. ಈ ಪಾತ್ರಕ್ಕೆ ಮೆಚ್ಚುಗೆಗೂ ವ್ಯಕ್ತವಾಗಿತ್ತು. ಈ ಸಿನಿಮಾದ ಮೂಲಕ ಕಳೆದು ಹೋಗಿದ್ದ ನರೇಶ್ ಮತ್ತೆ ಟಾಲಿವುಡ್ ಪ್ರೇಕ್ಷಕರ ಗಮನ ಸೆಳೆದಿದ್ದರು. ಈಗ ‘ನಾಂದಿ’ ಸಿನಿಮಾ ಪೋಸ್ಟರ್ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ.

‘ನಾಂದಿ’ ನರೇಶ್ ಅವರಿಗೆ 57ನೇ ಸಿನಿಮಾ. ಈ ಸಿನಿಮಾದ ಸಹ ನಿರ್ಮಾಪಕರಾಗಿ ನರೇಶ್ ಕೆಲಸ ಮಾಡುತ್ತಿದ್ದಾರೆ. ಈ ತಿಂಗಳ ಅಂತ್ಯದಿಂದ ಸಿನಿಮಾ ಚಿತ್ರೀಕರಣ  ಆರಂಭವಾಗಿದೆ. ವಿಜಯ್ ಕನಕಮೆಡ್ಲಾ ‘ನಾಂದಿ’ ಸಿನಿಮಾದ ಚಿತ್ರಕಥೆ ಮಾಡಿ ನಿರ್ದೇಶನ ಮಾಡುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು