ಶುಕ್ರವಾರ, ಜುಲೈ 30, 2021
27 °C

ಅಮಲಾ ಪೌಲ್‌ ಬಿಕಿನಿ ಫೋಟೊಗಳು ವೈರಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಅಮಲಾಪೌಲ್‌ ಕೂಡ ಒಬ್ಬರು. ಈ ಬಹುಭಾಷಾ ನಟಿ, ‘ಹೆಬ್ಬುಲಿ’ ಸಿನಿಮಾದಲ್ಲಿ ನಟ ಸುದೀಪ್‌ ಜೊತೆ ಜೋಡಿಯಾಗಿ ನಟಿಸಿದ್ದರು. ಇವರು ತಮಿಳಿನ ‘ಅಡೈ’ ಸಿನಿಮಾದಲ್ಲಿ ಅತ್ಯಾಚಾರಕ್ಕೊಳಗಾದ ಯುವತಿ ಪಾತ್ರಕ್ಕಾಗಿ ಬೆನ್ನಿನ ಭಾಗ ನಗ್ನವಾಗಿ ಕಾಣಿಸಿಕೊಂಡು ಭಾರಿ ಸುದ್ದಿಯಾಗಿದ್ದರು.  

ಈಗ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬಿಕಿನಿ ತೊಟ್ಟಿರುವ ತಮ್ಮ ಫೋಟೊಗಳನ್ನು ಅಮಲಾ ಹಂಚಿಕೊಂಡಿದ್ದು, ವೈರಲ್‌ ಆಗಿವೆ. ಈ ಫೋಟೊಗಳ ಕೆಳಗೆ ‘ಕೆಲ ವ್ಯಕ್ತಿಗಳು ಶಾಂತಿಯಿಂದ ಬದುಕುವ ಬದಲಾಗಿ ಯುದ್ಧ ಮಾಡುತ್ತಾ  ತಮ್ಮ ಅಮೂಲ್ಯ ಕ್ಷಣಗಳನ್ನು ಕಳೆದು ಬಿಡುತ್ತಾರೆ. ಶಾಂತಿಯಿಂದ ಯಾಕೆ ಬದುಕಬಾರದು?’ ಎಂದು ಬರೆದುಕೊಂಡಿದ್ದಾರೆ. ವೈರಲ್‌ ಆದ ಈ ಫೋಟೊಗಳಿಗೆ ನೆಟಿಜನ್ನರಿಂದ ಭಾರಿ ಮೆಚ್ಚುಗೆ, ಪ್ರತಿಕ್ರಿಯೆಗಳು ಬಂದಿವೆ.

ಬಾಲಿವುಡ್‌ನ ಹಿರಿಯ ನಿರ್ದೇಶಕ ಮಹೇಶ್‌ ಭಟ್‌ ಅವರು ನಿರ್ಮಿಸುತ್ತಿರುವ ತಮ್ಮ ಒಂದು ಕಾಲದ ಗೆಳತಿ ಪರ್ವೀನ್ ಬಾಬಿ ಜೀವನ ಕತೆ ಆಧಾರಿತ ವೆಬ್‌ಸಿರೀಸ್‌ನಲ್ಲಿ ಅಮಲಾ ಪೌಲ್‌, ಪರ್ವೀನ್‌ ಬಾಬಿ ಪಾತ್ರ ನಿರ್ವಹಿಸಲಿದ್ದಾರೆ. 

 
 
 
 

 
 
 
 
 
 
 
 
 

Some people spend their valuable years living with war with the sole aim of resting in peace. Why don't you try living in peace? The world could do with some right now! ✌️ #liveinpeace #peaceout #peacebewithyou

Amala Paul 💫 (@amalapaul) ರಿಂದ ಹಂಚಲಾದ ಪೋಸ್ಟ್ ಅವರು ರಂದು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು