ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಷೇಕ್‌ಗೆ ಮಹೇಶ್‌ ಆ್ಯಕ್ಷನ್‌ ಕಟ್‌

Last Updated 29 ಮೇ 2022, 10:14 IST
ಅಕ್ಷರ ಗಾತ್ರ

‘ಅಯೋಗ್ಯ’, ‘ಮದಗಜ’ ಸಿನಿಮಾ ಯಶಸ್ಸಿನ ಬಳಿಕ ನಿರ್ದೇಶಕ ಎಸ್‌. ಮಹೇಶ್‌ ಕುಮಾರ್‌ ಯಂಗ್‌ ರೆಬೆಲ್‌ ಸ್ಟಾರ್‌ ಅಭಿಷೇಕ್‌ ಅಂಬರೀಶ್‌ ಅವರಿಗೆ ಆ್ಯಕ್ಷನ್‌ ಕಟ್‌ ಹೇಳಲು ಸಜ್ಜಾಗಿದ್ದಾರೆ.

ನಟ, ದಿವಂಗತ ಅಂಬರೀಶ್‌ ಅವರ 70ನೇ ಜನ್ಮದಿನದ ಸಂದರ್ಭದಲ್ಲೇ ಅಭಿಷೇಕ್‌ ಅಂಬರೀಶ್‌ ಅವರ ಜೊತೆಗಿನ ತಮ್ಮ ಹೊಸ ಪ್ರೊಜೆಕ್ಟ್‌ ಅನ್ನು ಮಹೇಶ್‌ ಘೋಷಿಸಿದ್ದಾರೆ. ಇದು ಆ್ಯಕ್ಷನ್‌, ಮಾಸ್‌ ಸಿನಿಮಾ ಎನ್ನುವುದು ಫಸ್ಟ್‌ಲುಕ್‌ ಪೋಸ್ಟರ್‌ನಿಂದ ಸ್ಪಷ್ಟ. ಚಿತ್ರದ ಕಥೆಯೂ ಮಹೇಶ್‌ ಅವರದ್ದು. ಚಿತ್ರದ ಶೀರ್ಷಿಕೆಯನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ.

ಇದು ಅಭಿಷೇಕ್‌ ಅವರ ನಾಲ್ಕನೇ ಚಿತ್ರವಾಗಿದೆ. ‘ಅಮರ್‌’ ಚಿತ್ರದ ಮುಖಾಂತರ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದ ಅಭಿಷೇಕ್‌, ಸದ್ಯ ಸೂರಿ ನಿರ್ದೇಶನದ ‘ಬ್ಯಾಡ್‌ ಮ್ಯಾನರ್ಸ್‌’ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ನಿರ್ದೇಶಕ ಕೃಷ್ಣ ಅವರ ಹೊಸ ಸಿನಿಮಾ ‘ಕಾಳಿ’ಯಲ್ಲೂ ಜೂನಿಯರ್‌ ರೆಬೆಲ್‌ ಬಣ್ಣಹಚ್ಚಲಿದ್ದಾರೆ. ಸದ್ಯಕ್ಕೆ ಮಹೇಶ್‌ ನಿರ್ದೇಶನದ ಹೊಸ ಸಿನಿಮಾಗೆ ‘ಎಎ 4’, ಎಂದರೆ ಅಭಿಷೇಕ್‌ ಅಂಬರೀಶ್ ನಾಲ್ಕನೇ ಚಿತ್ರ ಎಂದಷ್ಟೇ ಕರೆಯಲಾಗಿದೆ.

‘ಮದಗಜ’ದ ಯಶಸ್ಸಿನ ಬಳಿಕ ‘ಮಲ್ಟಿಸ್ಟಾರ್‌ ಸಿನಿಮಾವೊಂದನ್ನು ಕೈಗೆತ್ತಿಕೊಳ್ಳಲಿದ್ದೇನೆ’ ಎಂದು ಮಹೇಶ್‌ ತಿಳಿಸಿದ್ದರು. ಮಹೇಶ್‌ ಉಲ್ಲೇಖಿಸಿದ ಆ ಪ್ರೊಜೆಕ್ಟ್‌ ಈ ಸಿನಿಮಾವೇ ಎನ್ನುವ ಪ್ರಶ್ನೆ ಇದೀಗ ಮೂಡಿದೆ. ಈ ಪ್ರೊಜೆಕ್ಟ್‌ ಬಳಿಕ ಶ್ರೀಮುರಳಿ, ಮಹೇಶ್‌ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಅವರ ‘ಮದಗಜ’ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT