ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಳಿ ಮಾತೆ ನಂತರ ಶಿವ, ಪಾರ್ವತಿ ವೇಷಧಾರಿಗಳು ಧೂಮಪಾನ ಮಾಡುವ ಫೋಟೊ ಹಂಚಿಕೊಂಡ ಲೀನಾ

ಅಕ್ಷರ ಗಾತ್ರ

ಬೆಂಗಳೂರು: ‘ಕಾಳಿ‘ ಸಾಕ್ಷ್ಯಚಿತ್ರದ ವಿವಾದಿತ ಪೋಸ್ಟರ್‌ ಬಳಿಕ ನಟಿ, ನಿರ್ದೇಶಕಿ ಲೀನಾ ಮಣಿಮೇಕಲೈ ಮತ್ತೊಂದು ಫೋಟೊ ಹಂಚಿಕೊಂಡು ವಿವಾದಕ್ಕೆ ಗುರಿಯಾಗಿದ್ದಾರೆ.

ಶಿವ, ಪಾರ್ವತಿ ವೇಷಧಾರಿಗಳು ಧೂಮಪಾನ ಮಾಡುತ್ತಿರುವ ಫೋಟೊವನ್ನು ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ ಕೂಡ ಹಿಂದೂಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಂಶಗಳನ್ನು ಹೊಂದಿದೆ ಎಂದು ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.

‘ನೀನುದ್ವೇಷವನ್ನು ಹರಡುತ್ತಿದ್ದು, ಧರ್ಮವನ್ನು ಅವಮಾನಿಸುವ ಕೆಲಸ ಮಾಡುವುತ್ತಿದ್ದಿಯಾ, ಇದನ್ನು ನಿಲ್ಲಿಸಬೇಕು‘ ಎಂದು ನೂರಾರು ಜನರು ಕಾಮೆಂಟ್‌ ಹಾಕುತ್ತಿದ್ದಾರೆ.

ಈ ಹಿಂದೆ ಲೀನಾ ‘ಕಾಳಿ‘ ಎಂಬ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ ಪೋಸ್ಟರ್‌ ಹಂಚಿಕೊಂಡಿದ್ದರು. ಅದರಲ್ಲಿ ಹಿಂದೂ ದೇವತೆ ಕಾಳಿ ಮಾತೆಯು ಸಿಗರೇಟ್ ಸೇದುತ್ತಿರುವ ಹಾಗೂ ಕೈಯಲ್ಲಿ ಎಲ್‌ಜಿಬಿಟಿಕ್ಯೂ(LGBTQ) ಸಮುದಾಯದ ಧ್ವಜವನ್ನು ಹಿಡಿದಿರುವ ಅವತಾರದಲ್ಲಿ ತೋರಿಸಿದ್ದರು.ಈ ಪೋಸ್ಟರ್‌ ಹಾಗೂ ಲೀನಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ನಂತರ ಕೆನಡಾದ ಆಗಾ ಖಾನ್‌ ಮ್ಯೂಸಿಯಂ ಈ ಘಟನೆ ಬಗ್ಗೆ ಕ್ಷಮೆ ಕೋರಿತ್ತು. ಹಾಗೇ ಟ್ವಿಟ್ಟರ್ ಕೂಡ ಆ ಪೋಟೊವನ್ನು ಡಿಲೀಟ್‌ ಮಾಡಿತ್ತು. ಈ ಬೆನ್ನಲೇ ಲೀನಾ ಶಿವ, ಪಾರ್ವತಿ ವೇಷದಾರಿಗಳು ಧೂಮಪಾನ ಮಾಡುವ ಫೋಟೊ ಶೇರ್‌ ಮಾಡಿದ್ದಾರೆ. ಇದಕ್ಕೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT