ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದೇಶನದತ್ತ ಅಮಿರ್‌ ಪುತ್ರಿ

Last Updated 27 ಆಗಸ್ಟ್ 2019, 9:41 IST
ಅಕ್ಷರ ಗಾತ್ರ

ಬಾಲಿವುಡ್‌ನಲ್ಲಿ ಈಗ ಸ್ಟಾರ್‌ ಮಕ್ಕಳ ಹವಾ ಕಾಣುತ್ತಿದೆ. ಈಚೆಗೆಒಬ್ಬೊಬ್ಬರಂತೆ ನಟ ನಟಿಯರ ಮಕ್ಕಳು ನಾಯಕ ಅಥವಾ ನಾಯಕಿಯಾಗಿ ಕಾಲಿಡುತ್ತಿದ್ದಾರೆ.ಅಮಿರ್‌ ಖಾನ್‌ ಅವರ ಮಗಳು ಇರಾ ಕೊಂಚ ಭಿನ್ನ. ನಿರ್ದೇಶನದ ಮೂಲಕ ಬಣ್ಣದ ಲೋಕಕ್ಕೆ ಪರಿಚಯವಾಗುತ್ತಿದ್ದಾರೆ.

ಅಮೀರ್‌ ಖಾನ್‌ ಮಗಳು ಪೌರಾಣಿಕ ನಾಟಕವೊಂದನ್ನು ನಿರ್ದೇಶನ ಮಾಡುತ್ತಿದ್ದಾರೆ. ಕತೆ ಹೇಳುವುದು, ಕೇಳುವುದು ಅವರ ಆಸಕ್ತಿಯ ವಿಷಯವಂತೆ. ಈಗ ಪ್ರಾಚೀನ ಗ್ರೀಕ್‌ ನಾಟಕವನ್ನು ನಿರ್ದೇಶಿಸುತ್ತಿದ್ದಾರೆ. ಇದು ಡಿಸೆಂಬರ್‌ ತಿಂಗಳಲ್ಲಿ ಪ್ರದರ್ಶನವಾಗಲಿದೆ.

‘ನಾನು ನಾಟಕ ನಿರ್ದೇಶನದ ಮೂಲಕ ಅಭಿನಯ ಲೋಕಕ್ಕೆ ಕಾಲಿಡುವುದರ ಹಿಂದೆ ಕಾರಣವೂ ಇದೆ. ನನಗೆ ರಂಗಭೂಮಿ ಆಸಕ್ತಿಯ ಕ್ಷೇತ್ರ. ಇದೊಂದು ಮಾಂತ್ರಿಕ ಲೋಕ’ ಎಂದು ಹೇಳಿಕೊಂಡಿದ್ದಾರೆ. ಇರಾ ಅವರ ಸಹೋದರ ಜುನೈದ್‌ ಸಹ ಈ ಹಿಂದೆ ನಾಟಕವೊಂದನ್ನು ನಿರ್ದೇಶನ ಮಾಡಿದ್ದರು.

ಈ ಹಿಂದೆ ಇರಾ ನಾಯಕಿಯಾಗಿ ಬಾಲಿವುಡ್‌ಗೆ ಕಾಲಿಡಲಿದ್ದಾರೆ ಎಂದೆಲ್ಲ ವರದಿಗಳು ಹರಿದಾಡಿದ್ದವು. ಆದರೆ ಇದೆಲ್ಲವನ್ನೂ ಇರಾ ತಳ್ಳಿ ಹಾಕಿದ್ದು, ನನಗೆ ನಿರ್ದೇಶನ ಇಷ್ಟ ಎಂದು ಹೇಳಿದ್ದಾರೆ.ಹಾಗಾಗಿ ಅಮಿರ್‌ ಖಾನ್‌ನ ಇಬ್ಬರು ಮಕ್ಕಳು ನಿರ್ದೇಶಕರಾಗಿ ಬಾಲಿವುಡ್‌ಗೆ ಬರಲಿದ್ದಾರೆ ಎಂಬ ಮಾತು ಬಿ–ಟೌನ್‌ನದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT