ಭಾನುವಾರ, ಏಪ್ರಿಲ್ 11, 2021
27 °C

ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದ ಬಾಲಿವುಡ್‌ ನಟ ಅಮಿತಾಭ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಬಾಲಿವುಡ್‌ ನಟ ಅಮಿತಾಭ್ ಬಚ್ಚನ್ ಅವರು ಕಣ್ಣಿನ ಶಸ್ತ್ರಚಿಕಿತ್ಸೆ ಒಳಗಾಗಿರುವುದಾಗಿ ತಮ್ಮ ಅಧಿಕೃತ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

ತಮ್ಮ ಆರೋಗ್ಯದಲ್ಲಿ ವ್ಯತ್ಯಯವಾಗಿರುವ ಕುರಿತು ಸುಳಿವು ನೀಡಿದ ಎರಡು ದಿನಗಳ ನಂತರ, ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದನ್ನು ಅವರು ಬಹಿರಂಗಪಡಿಸಿದ್ದಾರೆ. 

‘ಶಸ್ತ್ರಚಿಕಿತ್ಸೆಯ ನಂತರ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದೇನೆ. ಟೈಪಿಂಗ್‌ನಲ್ಲಿ ಅಕ್ಷರಗಳಲ್ಲಿ ದೋಷಕಂಡರೆ ಕ್ಷಮಿಸಿ‘ ಎಂದು 78ರ ಹರೆಯದ ಬಿಗ್ ಬಿ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

‘ಈ ವಯಸ್ಸಿನಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಕಷ್ಟ. ಜತೆಗೆ, ನಿಖರವಾದ ನಿರ್ವಹಣೆಯ ಅಗತ್ಯವಿರುತ್ತದೆ. ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ದೃಷ್ಟಿ ಮತ್ತು ಚೇತರಿಕೆ ನಿಧಾನವಾಗಿ ಆಗುತ್ತದೆ. ಈ ಸಂದರ್ಭದಲ್ಲಿ ಟೈಪ್ ಮಾಡುವುದು ಕಷ್ಟ. ಆದ್ದರಿಂದ ದೋಷಗಳಿದ್ದಲ್ಲಿ ಕ್ಷಮಿಸಬೇಕು‘ ಎಂದು ಬಚ್ಚನ್ ಬರೆದಿದ್ದಾರೆ.

‘ಎಲ್ಲರಿಗೂ ನನ್ನ ಪ್ರೀತಿಯ ನಮಸ್ಕಾರಗಳು. ಚೇತರಿಕೆ ನಿಧಾನವಾಗಿದೆ. ಇನ್ನೊಂದು ಕಣ್ಣಿಗೆ ಶಸ್ತ್ರಚಿಕಿತ್ಸೆಯಾಗಬೇಕಿದೆ. ಪರವಾಗಿಲ್ಲ, ಎಲ್ಲವೂ ನಿಗದಿಪಡಿಸಿದ ವೇಳಾಪಟ್ಟಿಯಂತೆ ನಡೆಯುತ್ತಿದೆ. ಚೇತರಿಕೆ ನಂತರ ನಿರ್ದೇಶಕ ವಿಕಾಸ್‌ ಬಹ್ಲಾ ಅವರ ಚಿತ್ರ ‘ಗುಡ್‌ ಬೈ‘ನಲ್ಲಿ ಪಾಲ್ಗೊಳ್ಳುವುದಾಗಿ ಬಿಗ್‌ ಬಿ ಬರೆದುಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು