ಸಾಮಾಜಿಕ ಜಾಲತಾಣದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮಾಡಿದ ತಪ್ಪು ಲೆಕ್ಕಾಚಾರ ಈಗ ತಮಾಷೆಯ ವಸ್ತುವಾಗಿದೆ!

ಅಮಿತಾಭ್ ಅವರನ್ನು ಟ್ವಿಟ್ಟರ್ನಲ್ಲಿ ಫಾಲೋ ಮಾಡುವವರಿಗೆ ಒಂದು ಸಂಗತಿ ಗೊತ್ತಿರುತ್ತದೆ. ಮನಸ್ಸಿನ ಭಾವನೆಗಳನ್ನು ಟ್ವೀಟ್ ಮೂಲಕ ಹಂಚಿಕೊಳ್ಳಲು ಇಷ್ಟ ಪಡುವ ಅವರು,ಟ್ವೀಟ್ ಮಾಡುವಾಗದಿನಾಂಕ ಅಥವಾ ಘಟನೆಗೆ ಸಂಬಂಧಿಸಿದಂತೆ ಅನುಕ್ರಮದಲ್ಲಿಯೇ ಟ್ವೀಟ್ ಮಾಡುತ್ತಾರೆ. ಹಾಗೆಯೇ ಟ್ವೀಟ್ ಮುಂದೆ ಅದು ಅವರು ಮಾಡುತ್ತಿರುವ ಎಷ್ಟನೇ ಟ್ವೀಟ್ ಎಂಬುದನ್ನು ಸಂಖ್ಯೆಯಲ್ಲಿ ನಮೂದಿಸಿ, ಅದರ ಹಿಂದೆ ‘ಟಿ’ ಎಂದು ಇಂಗ್ಲಿಷ್ ಅಕ್ಷರದಲ್ಲಿ ಬರೆದಿರುತ್ತಾರೆ.

ಈಚೆಗೆ ಅವರು ಈ ಟ್ವೀಟ್ ಸಂಖ್ಯೆಯನ್ನು ಗೊಂದಲ ಮಾಡಿಕೊಂಡು ತಪ್ಪಾಗಿ ಬರೆದಿದ್ದರು. ನಂತರ ಆ ತಪ್ಪನ್ನು ಟ್ವಿಟ್ಟರ್ನಲ್ಲಿಯೇ ಸರಿ ಮಾಡಿಕೊಂಡಿದ್ದರು. ಆದರೆ ಅಮಿತಾಭ್ ಅವರ ಈ ಸ್ಪಷ್ಟನೆಯೇ ಈಗ ವೈರಲ್ ಆಗಿದೆ. ಟ್ವೀಟ್ಗೆ ಓದಿದ ಜನರತಮಾಷೆ ಪ್ರತಿಕ್ರಿಯೆಗಳು, ಹಾಸ್ಯ, ಕೀಟಲೆ ಮಾತುಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಅಮಿತಾಭ್ ಬಚ್ಚನ್ ಸ್ಪಷ್ಟನೆ ನೀಡಿದ ಟ್ವೀಟ್ ಹೀಗಿದೆ: ‘ಟಿ– 3556– ಈ ಹಿಂದಿನ ಟ್ವೀಟ್ ಟಿ 3554ನ್ನು ಟಿ 3555 ಎಂದು ಓದಿಕೊಳ್ಳಿ’. (T 3556 - Tweet T 3554 previously to be read as T 3555 !).

ಈ ಟ್ವೀಟ್ನಲ್ಲಿ ಅವರು ಸಂಖ್ಯೆಗಳನ್ನು ಬಳಸಿರುವುದು, ಹಾಗೂ ಅಮಿತಾಭ್ ಬಚ್ಚನ್ ಅವರು ಟ್ವೀಟ್ ಸಂಖ್ಯೆ ಬಗ್ಗೆಯೂ ತಲೆಕೆಡಿಸಿಕೊಂಡಿರುವುದನ್ನು ಅವರ ಫಾಲೋವರ್ಸ್ ತಮಾಷೆ ಮಾತುಗಳ ಮೂಲಕ ಮೆಚ್ಚಿಕೊಂಡಿದ್ದಾರೆ.

ಅಮಿತಾಭ್ ಬಚ್ಚನ್ ಅವರನ್ನು 4.2 ಕೋಟಿ ಜನರು ಟ್ವೀಟರ್ನಲ್ಲಿ ಫಾಲೋ ಮಾಡುತ್ತಿದ್ದಾರೆ. ಅಮಿತಾಭ್ ಅವರು ಟ್ವೀಟ್ ಮಾಡಿದ ಕೆಲ ಕ್ಷಣಗಳಲ್ಲೇ ಅವರ ಟ್ವೀಟ್ಗೆ ಸಾವಿರಾರು ಪ್ರತಿಕ್ರಿಯೆಗಳು ಹರಿದುಬಂದಿವೆ.

‘ಸರ್, ಇಂತಹ ತಪ್ಪುಗಳನ್ನು ಮಾಡಬೇಡಿ. ನಾನು ನಿಮ್ಮ ಟ್ವೀಟ್ಗಳ ಟ್ರ್ಯಾಕ್ ಮೆಂಟೇನ್ ಮಾಡುವ ಎಕ್ಸೆಲ್ ಶೀಟ್ ಹಾಗೂ ಫೈಲ್ಗಳಲ್ಲಿ ಈಗ ತಪ್ಪನ್ನು ಸರಿಪಡಿಸಬೇಕಿದೆ’, ಟಟಿ–3556 ಟ್ವೀಟ್ ಒಂದು ವೇಸ್ಟ್ ಮಾಡಿದ್ರಿ, ದೇಶಕ್ಕಾಗಿ ನೀವು ಇಂತಹ ದೊಡ್ಡ ತ್ಯಾಗ ಮಾಡಿದ್ರಿ’ ಎಂಬ ಸಾವಿರಾರು ಪ್ರತಿಕ್ರಿಯೆಗಳು ನಗು ತರಿಸುತ್ತವೆ. ಹಾಗೆಯೇ ಬಿಗ್ ಬಿ ಲೆಕ್ಕಾಚಾರ ನೋಡಿ ತಲೆ ಕೆರೆದುಕೊಳ್ಳುತ್ತಿರುವ, ತಲೆ ಸುತ್ತುತ್ತಿರುವ ಮೀಮ್ಗಳ ಮೂಲಕ ನೆಟಿಜನ್ನರು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.