ಮುಂಬೈ ನಾನಾವತಿ ಆಸ್ಪತ್ರೆಯಲ್ಲಿಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ನ ‘ಬಿಗ್ ಬಿ’ ಅಮಿತಾಭ್ ಬಚ್ಚನ್ ಲವಲವಿಕೆಯಿಂದ ಕಾಲ ಕಳೆಯುತ್ತಿದ್ದಾರೆ. ಚಿಕಿತ್ಸೆಯ ನಡುವೆಯೂ ಎಂದಿನಂತೆ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿದ್ದ ಅವರ ದಿನಚರಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಐಸೊಲೇಷನ್ ವಾರ್ಡ್ನಲ್ಲಿದ್ದರೂ ಅಭಿಮಾನಿಗಳು ಮತ್ತು ಹೊರ ಜಗತ್ತಿನೊಂದಿಗೆ ನಿರಂತರ ಸಂಪರ್ಕದಲ್ಲಿರುವ ಬಚ್ಚನ್, ಟ್ವೀಟ್ ಮಾಡುವುದನ್ನು ಮರೆತಿಲ್ಲ.ಹಲವಾರು ಅಭಿಮಾನಿಗಳಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ತಮ್ಮ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥಿಸಿರುವ ಹಿತೈಷಿಗಳು ಮತ್ತು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

77 ವರ್ಷದ ಸೀನಿಯರ್ ಬಚ್ಚನ್ ಅವರ ಎರಡನೇ ಕೋವಿಡ್–19 ವರದಿ ಕೂಡ ಪಾಸಿಟಿವ್ ಬಂದಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಧೃತಿಗೆಡದ ಅವರು ಭಾನುವಾರ ಗೆಲುವಾಗಿಯೇ ಇದ್ದರು. ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಬ್ಯುಸಿಯಾಗಿದ್ದರು ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.

ಅಮಿತಾಭ್ ಪತ್ನಿ ಜಯಾ ಬಚ್ಚನ್, ಮಗಳು ಶ್ವೇತಾ ನಂದಾ, ಮಕ್ಕಳಾದ ನವ್ಯಾ ನವೇಲಿ ಮತ್ತು ಅಗಸ್ತ್ಯ ನಂದಾ ಅವರ ಕೋವಿಡ್ –19 ವರದಿ ನೆಗೆಟಿವ್ ಬಂದಿದೆ.

ಈ ನಡುವೆ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಸಿಬ್ಬಂದಿ ಬಚ್ಚನ್ ಕುಟುಂಬಕ್ಕೆ ಸೇರಿದ ಜಲ್ಸಾ, ಪ್ರತೀಕ್ಷಾ, ಜನಕ್ ಮತ್ತು ವಾಸ್ತಾ ಈ ನಾಲ್ಕು ಬಂಗಲೆಗಳನ್ನೂ ಸ್ಯಾನಿಟೈಸ್ ಮಾಡಿ, ಸೀಲ್ಡೌನ್ ಮಾಡಿದ್ದಾರೆ. ಬಂಗಲೆ ಸುತ್ತ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದಾರೆ.

ಕಾರು ಚಾಲಕರು, ಆಪ್ತ ಸಹಾಯಕರು, ಅಡುಗೆಯವರು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಬಚ್ಚನ್ ಕುಟುಂಬದ ಒಟ್ಟು 30 ಸಹಾಯಕ ಸಿಬ್ಬಂದಿಯನ್ನು ಕೋವಿಡ್–19 ಪರೀಕ್ಷೆಗೆ ಒಳಪಡಿಸಲಾಗಿದೆ. ಸೋಮವಾರ ವರದಿ ಕೈಸೇರುವ ನಿರೀಕ್ಷೆ ಇದೆ ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.