ಬಳುಕು ತಾರೆ ಆ್ಯಮಿ ಜಾಕ್ಸನ್ ಗರ್ಭವತಿ. ಈ ಸಂಗತಿಯನ್ನು ಸಂಗಾತಿ ಜೊತೆಗೆ ಅವರು ಬಹಿರಂಗಪಡಿಸಿದ್ದಾಗಿದೆ. ಆ್ಯಮಿಗೆ ಈಗ ಜಗತ್ತು ಅತ್ಯಂತ ಸುಂದರವಾಗಿ, ತಾನು ಆ ಸ್ವಪ‍್ನ ಲೋಕದ ರಾಣಿಯಾಗಿ ವಿಹರಿಸುತ್ತಿರುವ ಕನಸು, ಕಲ್ಪನೆ ಆವರಿಸಿಕೊಂಡಿದೆಯಂತೆ.

ಮಾಡೆಲಿಂಗ್ ಮತ್ತು ನಟನಾ ಕ್ಷೇತ್ರದಲ್ಲಿ ತನ್ನ ಮಾದಕ ಸೌಂದರ್ಯ ಹಾಗೂ ಪ್ರತಿಭೆಯಿಂದ ಬಹುಬೇಗನೆ ಖ್ಯಾತಿ ಗಳಿಸಿದ ಈ ಬ್ರಿಟಿಷ್ ಚೆಲುವೆಗೆ ಈಗ 27ರ ಹರೆಯ.

ಆ್ಯಮಿ ಸದಾ ಒಂದಿಲ್ಲೊಂದು ದೇಶಕ್ಕೆ ಪ್ರವಾಸ ಕೈಗೊಳ್ಳುತ್ತಲೇ ಇರುತ್ತಾರೆ.ತಾಯಿಯಾಗುತ್ತಿರುವುದನ್ನು ವೈದ್ಯಕೀಯವಾಗಿ ಖಚಿತಪಡಿಸಿಕೊಳ್ಳುವವರೆಗೂ ಅವರು ಪ್ರವಾಸದಲ್ಲೇ ಇರುತ್ತಿದ್ದರಂತೆ. ಆದರೆ ಈಗ ಸ್ವಲ್ಪ ಹುಷಾರಾಗಿ ಓಡಾಡುತ್ತಾರಂತೆ. ವಿಮಾನ ಯಾನದ ವೇಳೆಯಂತೂ ಮಗುವಿಗೆ ಯಾವುದೇ ಕಿರಿಕಿರಿಯಾಗದಂತೆ ಕಾಳಜಿ ವಹಿಸುತ್ತಾರಂತೆ.

ಆ್ಯಮಿಗೆ ತಾಯ್ತನದ ಕನಸು ಕಾಣುವುದೇ ಒಂದು ಸುಂದರ ಅನುಭೂತಿ. ’ನಾನು ಪ್ರವಾಸಪ್ರಿಯೆ. ನನ್ನ ವೃತ್ತಿಯಲ್ಲಿ ಅದು ಅನಿವಾರ್ಯ ಕೂಡಾ. ಹಾಗಾಗಿ ಮಗುವನ್ನೂ ನಾನು ಹೋದಲ್ಲೆಲ್ಲಾ ಕರೆದೊಯ್ಯಲು ಬಯಸುತ್ತೇನೆ. ಮಗು ಗಂಡೋ, ಹೆಣ್ಣೋ ಅನ್ನೋದು ನನಗೆ ಮುಖ್ಯವಲ್ಲ. ಮಗು ಯಾವುದಾದರೂ ಅದು ನಮ್ಮದೇ ಅನ್ನೋದು ಮುಖ್ಯ. ಹಾಗಾಗಿ ಅವನನ್ನು/ಅವಳನ್ನು ಬಿಟ್ಟು ನಾನು ಎಲ್ಲೂ ಹೋಗಲಾರೆ. ಜೊತೆಯಲ್ಲೇ ಇರಿಸಿಕೊಂಡರೆ ತಾಯ್ತನದ ಸುಖವನ್ನೂ ಅನುಭವಿಸಬಹುದು, ಮಗುವಿಗೂ ತಾಯಿಯ ಪ್ರೀತಿಯನ್ನು ಪರಿಪೂರ್ಣವಾಗಿ ನೀಡಬಹುದು‘ ಎಂದು ಆ್ಯಮಿ ಹೇಳುತ್ತಾರೆ.

ಹೀಗೆ, ಆ್ಯಮಿ ಎಂಬ ಮಾದಕ ಚೆಲುವೆ ಮಗುವಿನ ನಿರೀಕ್ಷೆಯಲ್ಲಿ ಸುಂದರ ಸ್ವಪ್ನಗಳನ್ನು ಹೆಣೆಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.