ತೆರೆ ಹಂಚಿಕೊಂಡಿದ್ದ ಬೆಸ್ಟ್ ಫ್ರೆಂಡ್ಸ್

ಮಂಗಳವಾರ, ಜೂನ್ 25, 2019
26 °C

ತೆರೆ ಹಂಚಿಕೊಂಡಿದ್ದ ಬೆಸ್ಟ್ ಫ್ರೆಂಡ್ಸ್

Published:
Updated:

ಅನನ್ಯಾ ಪಾಂಡೆ ಅವರು ಕರಣ್ ಜೋಹರ್ ಅವರ ‘ಸ್ಟೂಡೆಂಟ್ ಆಫ್‌ ದಿ ಇಯರ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದ ವಿಷಯ ನಿಮಗೆ ಗೊತ್ತೇ ಇದೆ. ಆದರೆ, ಅನನ್ಯಾ ಪಾಂಡೆ ಹಾಗೂ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಅವರು ಒಟ್ಟಿಗೇ ಬಾಲಿವುಡ್‌ಗೆ ಪ್ರವೇಶ ಪಡೆದಿದ್ದ ವಿಷಯ ನಿಮಗೆ ಗೊತ್ತೇ? 

ಹೌದು, ಸುಹಾನಾ ಹಾಗೂ ತಾವು ಒಟ್ಟಿಗೇ ತೆರೆ ಹಂಚಿಕೊಂಡಿದ್ದ ಸುದ್ದಿಯನ್ನು ಸ್ವತಃ ಅನನ್ಯಾ ಬಹಿರಂಗಪಡಿಸಿದ್ದಾರೆ. ಶಾರುಖ್ ಖಾನ್ ಅವರ ‘ಮೈ ನೇಮ್ ಈಸ್ ಖಾನ್’ ಚಿತ್ರದ ಸೆಟ್‌ಗೆ ಸುಹಾನಾ ಹಾಗೂ ಅನನ್ಯಾ ಹೋಗಿದ್ದರು. ಇವರನ್ನು ಕಂಡ ನಿರ್ದೇಶಕ ಕರಣ್ ಜೋಹರ್, ‘ಜನಗಳ ಮಧ್ಯೆ ಒಂದು ಸುತ್ತು ನಡೆದುಬನ್ನಿ’ ಎಂದು ಸೂಚಿಸಿದರಂತೆ. ಇಬ್ಬರೂ ಸಿಕ್ಕಾಪಟ್ಟೆ ಖುಷಿಯಿಂದಲೇ ರಿಹರ್ಸಲ್ ಮಾಡಿದರು. ಆದರೆ ಈ ದೃಶ್ಯವನ್ನು ಚಿತ್ರದಲ್ಲಿ ತೋರಿಸಲಿಲ್ಲ ಅಷ್ಟೇ!

‘ಕರಣ್ ಜೋಹರ್ ಅವರಿಗೆ ಅವರಿಗೆ ಒಂದಿಷ್ಟು ಜನರ ಅಗತ್ಯವಿತ್ತು. ನಮಗೆ ಹೇಳಿದಾಗ, ತುಂಬಾ ಖುಷಿಯಾಗಿತ್ತು. ಅಂದು ನಾನು ಗುಲಾಬಿ ಬಣ್ಣದ ಜಾಕೆಟ್ ತೊಟ್ಟಿದ್ದೆ. ಬ್ಯಾಕ್‌ಗ್ರೌಂಡ್‌ನಲ್ಲಿ ಓಡಾಡುವ 8 ಶಾಟ್‌ಗಳನ್ನು ತೆಗೆದರು. ಅಂತಿಮವಾಗಿ ನಮ್ಮ ಸೀನ್ ಬರುವುದನ್ನೇ ಎದುರು ನೋಡುತ್ತಾ ಕಾದು ಕುಳಿತೆವು. ಆದರೆ ಅದೇ ದೃಶ್ಯಕ್ಕೆ ಕತ್ತರಿ ಹಾಕಲಾಗಿತ್ತು. ಇದರಿಂದ ಭಾರಿ ಬೇಸರವೂ ಆಗಿತ್ತು’ ಅಂತಾ ಅನನ್ಯಾ ಪಟಪಟನೇ ಮಾತು ಉದುರಿಸಿದರು. 

‘ಮುಂದೊಂದು ದಿನ ನನ್ನ ಬೆಸ್ಟ್ ಫ್ರೆಂಡ್ ಜೊತೆ ನಟಿಸುತ್ತೇನೆ’ ಎಂದು ಅವರು ಭರವಸೆ ವ್ಯಕ್ತಪಡಿಸಿದರು.  

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !