ಗುರುವಾರ , ಜನವರಿ 27, 2022
20 °C

ಬಾಲಿವುಡ್ ನಟಿ ಅನನ್ಯಾ ಪಾಂಡೆಯ ಕುತೂಹಲದ ಪೋಸ್ಟ್‌ಗೆ ನಟ ಶಾಹಿದ್ ಕಪೂರ್ ಕಾಮೆಂಟ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬಾಲಿವುಡ್ ನಟಿ ಅನನ್ಯಾ ಪಾಂಡೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅವರ ಇತ್ತೀಚಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ದೊಡ್ಡದಾದ ನೀಲಿ ಬಣ್ಣದ ಟೋಪಿಯನ್ನು ಧರಿಸಿರುವ ಅವರು 'ಹ್ಯಾಟರ್ಸ್ ಗೊನಾ ಹ್ಯಾಟ್' (Hatters gonna hat) ಎಂದು ಬರೆದಿದ್ದಾರೆ. ಅನನ್ಯಾ ಪಾಂಡೆಯವರ ಈ ಪೋಸ್ಟ್‌ಗೆ ಶಾಹಿದ್ ಕಪೂರ್ ಕೂಡ ಕಾಮೆಂಟ್ ಮಾಡಿದ್ದಾರೆ.

ಅನನ್ಯ ಪಾಂಡೆ ಅವರಿಗೆ ಕ್ಯಾಮೆರಾ ಅವರ ಅತ್ಯುತ್ತಮ ಸ್ನೇಹಿತ. ಇತ್ತೀಚೆಗೆ, ಅವರು ಸೆಲೆಬ್ರಿಟಿ ಛಾಯಾಗ್ರಾಹಕ ರೋಹನ್ ಶ್ರೇಷ್ಠಾ ಅವರಿಗೆ ಪೋಸ್ ನೀಡಿದ್ದರು ಮತ್ತು ಆ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಇದೀಗ ಅನನ್ಯಾ, ದೊಡ್ಡದಾದ ನೀಲಿ ಬಣ್ಣದ ಟೋಪಿಯೊಂದಿಗೆ ಜೋಡಿಯಾಗಿ ಪರಿಪೂರ್ಣ ಬೇಸಿಗೆ ಉಡುಪಿನಲ್ಲಿ ಕಾಣಬಹುದು.

ಅನನ್ಯಾ ಅವರು ತಮ್ಮ ಪೋಸ್ಟ್‌ಗೆ 'ಹ್ಯಾಟರ್ಸ್ ಗೊನಾ ಹ್ಯಾಟ್' ಎಂದಿದ್ದು, ಇದು 'ಹೇಟರ್ಸ್ ಗೊನಾ ಹೇಟ್' (ದ್ವೇಷಿಸುವವರು ನಮ್ಮನ್ನು ದ್ವೇಷಿಸುತ್ತಲೇ ಇರುತ್ತಾರೆ) ಎನ್ನುವುದರ ತಿರುಚಿದ ಸಾಲಾಗಿದೆ. 

ಶಾಹಿದ್ ಕಪೂರ್, ಅನನ್ಯಾ ಅವರ ಪೋಸ್ಟ್‌ಗೆ ಕಾಮೆಂಟ್‌ ಮಾಡಿದ್ದು, 'ಪೋಸರ್ಸ್ ಗೊನಾ ಪೋಸ್' (ಪೋಸ್ ನೀಡುವವರು ನೀಡುತ್ತಲೇ ಇರುತ್ತಾರೆ) ಎಂದಿದ್ದಾರೆ.

ಸದ್ಯ ಅನನ್ಯಾ ಪಾಂಡೆ 'ಗೆಹ್ರೈಯಾನ್' ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಸಿದ್ಧಾಂತ್ ಚತುರ್ವೇದಿ ನಟಿಸಿರುವ ಈ ಚಿತ್ರವು ಫೆಬ್ರವರಿ 11 ರಂದು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ. ಶಕುನ್ ಬಾತ್ರಾ ನಿರ್ದೇಶಿಸಿದ್ದು, ಕರಣ್ ಜೋಹರ್ ನಿರ್ಮಿಸಿದ್ದಾರೆ. ಗೆಹ್ರೈಯಾನ್ ಸಿನಿಮಾವು ಆಧುನಿಕ ಸಂಕೀರ್ಣ ಸಂಬಂಧಗಳನ್ನು ಕುರಿತಾದ ಚಿತ್ರವಾಗಿದೆ. ಅನನ್ಯಾ, ವಿಜಯ್ ದೇವರಕೊಂಡ ಜೊತೆ ಕೂಡ ಸಿನಿಮಾವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅನನ್ಯಾ ಅವರ ಮೊದಲ ತೆಲುಗು ಚಲನಚಿತ್ರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು