ಈ ಚಿತ್ರವು ಸೈಬರ್ ಥ್ರಿಲ್ಲರ್ ಕಥಾಹಂದರವನ್ನು ಹೊಂದಿದ್ದು, ಇತ್ತೀಚಿನ ದಿನಗಳಲ್ಲಿ ಜನರು ಹೇಗೆ ಆನ್‌ಲೈನ್ ಮೇಲೆ ಹೆಚ್ಚು ಆಧಾರವಾಗಿರುತ್ತಾರೆ ಆದರಿಂದ ಎದುರಾಗುವ ಸಮಸ್ಯೆಗಳ ಸರಮಾಲೆಯಲ್ಲಿ ಹೇಗೆ ಸಿಲುಕಿಕೊಳ್ಳುತ್ತಾರೆ ಎಂಬುವುದರ ಸುತ್ತ ಚಿತ್ರಕಥೆ ಹೆಣೆಯಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.
‘ಪ್ರಸ್ತುತ ಸಮಾಜದಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರವಹಿಸುತ್ತದೆ. ಎಲ್ಲವೂ ಆಧುನಿಕತೆಗೆ ಹೊಂದಿಕೊಂಡಿರುವುದರಿಂದ ಎಲ್ಲದ್ದಕ್ಕೂ ಆನ್‌ಲೈನ್ ಮೊರೆಹೋಗಿದ್ದೇವೆ. ಆದರೆ ಇದರಿಂದ ಎದುರಾಗುವ ಕೆಲವು ಸಂಕಷ್ಟಗಳ ಕುರಿತು ಚಿತ್ರ ಮೂಡಿ ಬಂದಿದೆ. ಈ ಸಿನಿಮಾವು ಪ್ರೇಕ್ಷಕರ ಮೇಲೆ ಪ್ರಭಾವ ಬೀರಲಿದೆ’ ಎಂದು ನಟಿ ಅನನ್ಯಾ ಪಾಂಡೆ ಹೇಳಿದ್ದಾರೆ.