ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ಮೂಲದ ತಮಿಳು ನಟಿಗೆ ಪ್ರಿಯಕರನಿಂದ ಚಿತ್ರಹಿಂಸೆ: ಆರೋಪ

Published : 6 ಮಾರ್ಚ್ 2023, 16:14 IST
ಫಾಲೋ ಮಾಡಿ
Comments

ಚೆನ್ನೈ: ಬೆಂಗಳೂರು ಮೂಲದ ತಮಿಳು ನಟಿಯೊಬ್ಬರಿಗೆ ಆಕೆಯ ಪ್ರಿಯಕರ ದೈಹಿಕವಾಗಿ ಹಾಗೂ ಮಾನಸಿಕವಾಗಿ ಚಿತ್ರಹಿಂಸೆ ಕೊಟ್ಟಿರುವ ಆರೋಪ ಕೇಳಿ ಬಂದಿದೆ.

ಅನಿಕಾ ವಿಕ್ರಮನ್ ಎಂಬ ನಟಿ ಈ ಕುರಿತು ಫೇಸ್‌ಬುಕ್‌ನಲ್ಲಿ ದುಃಖ ತೋಡಿಕೊಂಡಿದ್ದಾರೆ.

‘ಅನೂಪ್ ಪಿಳ್ಳೈ ಎಂಬಾತನೊಂದಿಗೆ ನಾನು ಕೆಲ ವರ್ಷಗಳಿಂದ ಪ್ರೀತಿಯಲ್ಲಿದ್ದೆ. ಆದರೆ, ನನಗೆ ಆತ ಇತ್ತೀಚೆಗೆ ತೀವ್ರ ದೈಹಿಕ ಹಿಂಸೆ ಹಾಗೂ ಮಾನಸಿಕ ಹಿಂಸೆ ಕೊಡಲು ಪ್ರಾರಂಭಿಸಿದ್ದ. ನಂತರ ಚೆನ್ನೈ ಪೊಲೀಸರಿಗೆ ಈ ವಿಷಯ ತಿಳಿಸಿದ್ದೆ. ಅದಾದ ನಂತರ ನನ್ನೆದುರು ಅತ್ತು ಕರೆದು ಬೇಡಿಕೊಂಡಿದ್ದ. ಆದರೂ ಕೂಡ ಇತ್ತೀಚಿಗೆ ನನ್ನನ್ನು ಭೇಟಿಯಾಗಲು ಬಂದಾಗ ದೈಹಿಕ ಹಲ್ಲೆ ಮಾಡಿದ್ದಾನೆ. ಇದರಿಂದ ನನಗೆ ತುಂಬಾ ಭಯವಾಗಿದೆ. ಈ ಕುರಿತು ಬೆಂಗಳೂರು ಪೊಲೀಸರಿಗೂ ದೂರು ನೀಡಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ಈ ಕುರಿತು ಪಿಂಕ್ ವಿಲ್ಲಾ ವೆಬ್‌ಸೈಟ್ ವರದಿ ಮಾಡಿದೆ.

‘ನನ್ನ ಜೀವನದಲ್ಲಿ ನಾನು ಅಂತಹ ವ್ಯಕ್ತಿಯನ್ನು ನೋಡಿಲ್ಲ. ಅವನು ಹೀಗೆ ಮಾಡುತ್ತಾನೆ ಎಂದು ನಾನೆಂದೂ ಭಾವಿಸಿರಲಿಲ್ಲ. ಸದ್ಯ ನಾನು ಗಾಯಗಳಿಂದ ಚೇತರಿಸಿಕೊಂಡಿದ್ದು ಹುಶಾರಾಗಿದ್ದೇನೆ ’ ಎಂದು ನೋವು ತೋಡಿಕೊಂಡಿದ್ದಾರೆ. ಈ ಕುರಿತು ಅವರು ಸ್ಕ್ರಿನ್ ಶಾಟ್‌ಗಳನ್ನು ಹಾಕಿಕೊಂಡಿದ್ದಾರೆ.

ಅನಿಕಾ ವಿಕ್ರಮನ್ ಅವರು ವಿಷಮಕರನ್ (2022), IKK (2021) ಮತ್ತು ಎಂಗಾ ಪಟ್ಟನ್ ಸೋತು (2021) ಎಂಬ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT