ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿಮಲ್‌ ಚಿತ್ರದ ಟೀಸರ್‌ ಬಿಡುಗಡೆ: ಮಾಸ್‌ ಲುಕ್‌ನಲ್ಲಿ ರಣಬೀರ್‌ ಕಪೂರ್‌

Published 28 ಸೆಪ್ಟೆಂಬರ್ 2023, 10:09 IST
Last Updated 28 ಸೆಪ್ಟೆಂಬರ್ 2023, 10:09 IST
ಅಕ್ಷರ ಗಾತ್ರ

ಮುಂಬೈ: ರಣಬೀರ್‌ ಕಪೂರ್‌ ಅವರ 41ನೇ ಹುಟ್ಟುಹಬ್ಬದ ಅಂಗವಾಗಿ ಇಂದು( ಸೆಪ್ಟೆಂಬರ್‌ 28) ’ಅನಿಮಲ್‌’ ಸಿನಿಮಾದ ಟೀಸರ್‌ ಅನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಅರ್ಜುನ್‌ ರೆಡ್ಡಿ ಚಿತ್ರ ಖ್ಯಾತಿಯ ನಿರ್ದೇಶಕ ಸಂದೀಪ್‌ ರೆಡ್ಡಿ ವಂಗಾ ನಿರ್ದೇಶಿಸಿರುವ ಅನಿಮಲ್‌ ಚಿತ್ರದ 2.26 ನಿಮಿಷದ ಟೀಸರ್‌ ಬಿಡುಗಡೆಯಾಗಿದೆ. ವಿಭಿನ್ನವಾಗಿ ಕಾಣಿಸಿಕೊಂಡಿರುವ ರಣಬೀರ್‌ ಕಪೂರ್‌ ಮಾಸ್‌ ಲುಕ್‌ನಲ್ಲಿ ಮಿಂಚಲಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅವರೊಂದಿನ ಸಂಭಾಷಣೆಯ ಮೂಲಕ ಟೀಸರ್‌ನ ದೃಶ್ಯಗಳು ಆರಂಭವಾಗಲಿದೆ.

ಚಿತ್ರದಲ್ಲಿ ರಣಬೀರ್‌ ಕಪೂರ್‌ ಪತ್ನಿಯ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ. ಅನಿಲ್‌ ಕಪೂರ್‌ ರಣಬೀರ್‌ನ ತಂದೆಯ ಪಾತ್ರದಲ್ಲಿ ನಟಿಸಿದ್ದು, ಚಿತ್ರದಲ್ಲಿ ತಂದೆ– ಮಗನ ಸಂಬಂಧ ಸೇರಿದಂತೆ ಅಪರಾಧದ ಕಥಾಹಂದರ ಒಳಗೊಂಡಿದೆ ಎಂದು ಚಿತ್ರತಂಡ ತಿಳಿಸಿದೆ.

ಈ ಚಿತ್ರದಲ್ಲಿ ‘ ಹಿಂದೆ ಎಂದೂ ಕಾಣಿಸಿಕೊಳ್ಳದ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಇದು ಹೊಸತನದ ಅನುಭವ‘ ಎಂದು ನಟ ರಣಬೀರ್‌ ಕಪೂರ್‌ ತಿಳಿಸಿದ್ದರು.

ಚಿತ್ರವನ್ನು ಭುವನ್‌ಕುಮಾರ್‌, ಕೃಷ್ಣಕುಮಾರ್‌ (ಟೀ– ಸೀರಿಸ್‌) ಮುರಡ್‌ ಕೇತನ್‌( ಸಿನಿ ಒನ್‌ ಸ್ಟೋಡಿಯೊ) ನಿರ್ಮಿಸಿದ್ದಾರೆ

ಇದೇ ಡಿಸೆಂಬರ್‌ 1ಕ್ಕೆ ಈ ಚಿತ್ರ ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಕನ್ನಡದಲ್ಲೂ ತೆರೆಯ ಮೇಲೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT