ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡುತ್ತಿವೆ ಅಣ್ಣಾತ್ತೆ, ಸೂರ್ಯವಂಶಿ

Last Updated 6 ನವೆಂಬರ್ 2021, 9:39 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಲಾಕ್‌ಡೌನ್ ನಂತರ ಈ ದೀಪಾವಳಿಗೆ ಬಿಡುಗಡೆಯಾದ ರಜನಿಕಾಂತ್ ಅಭಿನಯದ ‘ಅಣ್ಣಾತ್ತೆ’ಹಾಗೂ ಬಾಲಿವುಡ್‌ನ ‘ಸೂರ್ಯವಂಶಿ’ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡುತ್ತಿವೆ.

ದೇಶದ ಬಹುತೇಕ ಕಡೆ ಪೂರ್ಣಪ್ರಮಾಣದಲ್ಲಿ ಚಿತ್ರಮಂದಿರಗಳನ್ನು ತುಂಬಿಸಲು ಅವಕಾಶ ನೀಡಿರುವುದರಿಂದ ಹಾಗೂ ಸಾಲು ಸಾಲು ರೆಜೆ ಇರುವುದರಿಂದ ಈ ದೊಡ್ಡ ಬಜೆಟ್‌ನ ಸಿನಿಮಾಗಳು ಕೊರೊನಾ ನಂತರ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಸದ್ದು ಮಾಡುತ್ತಿರುವ ಚಿತ್ರಗಳು ಎಂಬ ಮೆಚ್ಚುಗೆ ಗಳಿಸುತ್ತಿವೆ.

ನವೆಂಬರ್ 4 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿರುವ ಕೌಟುಂಬಿಕ ಕಥಾ ಹಂದರವುಳ್ಳ ಅಣ್ಣಾತ್ತೆ ಎರಡೂ ದಿನದ ಕಲೆಕ್ಷನ್ ಅಂದಾಜು ₹100 ಕೋಟಿ ಎನ್ನಲಾಗುತ್ತಿದೆ. ಈ ಚಿತ್ರ ಮೊದಲ ದಿನವೇ ₹70 ಕೋಟಿ ಗಳಿಸಿದೆ ಎಂದು ಹೇಳಲಾಗುತ್ತಿದೆ.

ಈ ಸಿನಿಮಾವನ್ನು ಸನ್‌ ಪಿಕ್ಚರ್ಸ್‌ನ ಕಲಾನಿಧಿ ಮಾರನ್ ನಿರ್ಮಿಸಿದ್ದು, ಶಿವಾ ಅವರು ನಿರ್ದೇಶಿಸಿದ್ದಾರೆ. ನಯನತಾರಾ, ಕೀರ್ತಿ ಸುರೇಶ್, ಖುಷ್ಬೂ, ಮೀನಾ ಹಾಗೂ ಪ್ರಕಾಶ್ ರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ಇನ್ನು ಅಕ್ಷಯ್ ಕುಮಾರ್, ರಣವೀರ್ ಸಿಂಗ್, ಅಜಯ್ ದೇವಗನ್ ಹಾಗೂ ಕತ್ರಿನಾ ಕೈಪ್ ಅಭಿಯನಯದ ರೋಹಿತ್ ಶೆಟ್ಟಿ ನಿರ್ದೇಶನದಕಾಮಿಡಿ, ಆಕ್ಷನ್ ‘ಸೂರ್ಯವಂಶಿ’ ಸಿನಿಮಾ ನವೆಂಬರ್ 5 ರಂದು ಶುಕ್ರವಾರ ಬಿಡುಗಡೆಯಾಗಿದ್ದು, ಮೊದಲ ದಿನವೇ ₹26 ಕೋಟಿ ಗಳಿಸಿದೆ ಎನ್ನಲಾಗಿದೆ. ಅಕ್ಷಯ್ ಕುಮಾರ್ ಅವರ ಮಿಷನ್ ಮಂಗಲ್ ಸಿನಿಮಾ ಹೊರತುಪಡಿಸಿದರೆ ಒಂದು ದಿನದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಇದಾಗಿದೆ.

’ಸೂರ್ಯವಂಶಿ’ಚಿತ್ರವು ಮುಂಬೈನಲ್ಲಿ 1993, 2002, 2006 ಮತ್ತು 2008ರಲ್ಲಿ ನಡೆದ ಸರಣಿ ಉಗ್ರರ ದಾಳಿಗಳ ಘಟನೆ ಆಧಾರಿತ ಸಿನಿಮಾ.ಸೂರ್ಯವಂಶಿ ಚಿತ್ರವನ್ನು ಕರಣ್‌ ಜೋಹರ್‌ ಮತ್ತು ರೋಹಿತ್‌ ಶೆಟ್ಟಿ ನಿರ್ಮಾಣ ಮಾಡಿದ್ದಾರೆ.ಈ ಸಿನಿಮಾ ಬಿಡುಗಡೆಯನ್ನು ಕೋವಿಡ್‌ ಕಾರಣಕ್ಕೆ 2 ಸಲ ಮುಂದೂಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT