ಮಂಗಳವಾರ, ಮೇ 17, 2022
29 °C

ಮಗಳ ಹೆಸರನ್ನು ಪ್ರಕಟಿಸಿದ ವಿರಾಟ್ ಕೊಹ್ಲಿ–ಅನುಷ್ಕಾ ಶರ್ಮಾ ದಂಪತಿ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ಸೋಮವಾರ ತ‌ಮ್ಮ ಮಗಳಿಗೆ ‘ವಮಿಕಾ‘ ಎಂದು ನಾಮಕರಣ ಮಾಡಿರುವುದಾಗಿ ಹೇಳಿದ್ದಾರೆ.‌

ಮಗಳಿಗೆ ವಮಿಕಾ ಎಂದು ಹೆಸರಿಟ್ಟಿರುವ ವಿಷಯವನ್ನು ಅನುಷ್ಕಾ ಶರ್ಮಾ ತಮ್ಮ ಇನ್‌ಸ್ಟಾಗ್ರಾಂ ಖಾತೆ ಮೂಲಕ ಹಂಚಿಕೊಂಡಿದ್ದಾರೆ. ‘ವಮಿಕಾ ನಮ್ಮ ಕುಟುಂಬಕ್ಕೆ ಖುಷಿ ತಂದಿದ್ದಾಳೆ‘ ಎಂದು ಹೇಳಿಕೊಂಡಿದ್ದಾರೆ.

‘ನಾವು ಪರಸ್ಪರ ಒಬ್ಬರನ್ನೊಬ್ಬರು ಗೌರವಿಸುತ್ತಾ, ನಂಬಿಕೆ, ವಿಶ್ವಾಸ, ಪ್ರೀತಿಯೊಂದಿಗೆ ಜೀವಿಸುತ್ತಿದ್ದೇವೆ. ಈ ಪುಟ್ಟ ವಮಿಕಾ ಅದನ್ನು ಮತ್ತಷ್ಟು ಎತ್ತರಿಸಿದ್ದಾಳೆ. ಅವಳನ್ನು ನೋಡುತ್ತಾ ಕ್ಷಣಕಾಲ ಭಾವೋದ್ವೇಗದಿಂದ ಕಣ್ಣಂಚಲ್ಲಿ ನೀರಾಡಿದೆ. ಒಮ್ಮೊಮ್ಮೆ ನಗೆ ತರಿಸುತ್ತದೆ. ಮನದಲ್ಲಿ ಆನಂದ ಮೂಡುತ್ತದೆ. ಇವೆಲ್ಲ ನಿಮಿಷದಲ್ಲಿ ಅನುಭವಿಸಿದ ಭಾವನೆಗಳು‘ ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ. ಮಗುವನ್ನು ಕೈಯಲ್ಲಿ ಹಿಡಿದುಕೊಂಡು, ಕೊಹ್ಲಿ ಪಕ್ಕದಲ್ಲಿ ನಿಂತಿರುವ ಫೋಟೊವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಮಗಳು ಹುಟ್ಟಿದಾಗಿನಿಂದ ನಿದ್ರೆ ಎನ್ನುವುದು ಅಸ್ಪಷ್ಟವಾಗಿದೆ, ಆದರೆ, ನಮ್ಮ ಹೃದಯ ತುಂಬಿ ಬಂದಿದೆ. ನಿಮ್ಮ ಶುಭಾಶಯಗಳು, ಪ್ರಾರ್ಥನೆಗಳು ನಮ್ಮೆಲ್ಲರಿಗೂ ಶಕ್ತಿ ತುಂಬಿವೆ. ನಿಮಗೆ ಧನ್ಯವಾದಗಳು‘ ಎಂದು ಹೇಳಿದ್ದಾರೆ.

ಕಳೆದ ವರ್ಷದ ಆಗಸ್ಟ್‌ ತಿಂಗಳಲ್ಲಿ ಈ ದಂಪತಿ ತಮ್ಮ ಮನೆಗೆ ಹೊಸ ಸದಸ್ಯರ ಬರಲಿದ್ದಾರೆ ಎಂದು ತಿಳಿಸಿದ್ದರು. ಈ ವರ್ಷದ ಜನವರಿ 11ರಂದು ಮಗಳು ಹುಟ್ಟಿರುವುದಾಗಿ ತಾರಾ ದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದರು. ಈ ದಂಪತಿ 2017ರ ಡಿಸೆಂಬರ್ 11 ರಂದು ಇಟಲಿಯಲ್ಲಿ ಮದುವೆಯಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು