ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮ್ಮದೇ ನಿರ್ಮಾಣ ಸಂಸ್ಥೆಯಿಂದ ಹೊರಬಂದ ನಟಿ ಅನುಷ್ಕಾ ಶರ್ಮಾ

Last Updated 20 ಮಾರ್ಚ್ 2022, 12:01 IST
ಅಕ್ಷರ ಗಾತ್ರ

ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಅವರು ಸ್ಥಾಪಿಸಿದ್ದ ‘ಕ್ಲೀನ್​ ಸ್ಲೇಟ್​ ಫಿಲ್ಮ್ಸ್​​’ ಬ್ಯಾನರ್‌ ಸಂಸ್ಥೆಯಿಂದ ಹೊರ ಬಂದಿದ್ದಾರೆ.

ಮಗುವಿನ ಆರೈಕೆಯಲ್ಲಿ ಬ್ಯುಸಿ ಆಗಿದ್ದ ಅನುಷ್ಕಾ ಇದೀಗ ನಟನೆಗೆ ಕಂಬ್ಯಾಕ್​ ಮಾಡೋಕೆ ರೆಡಿ ಆಗಿದ್ದಾರೆ. ಹಾಗಾಗಿ ಚಿತ್ರ ನಿರ್ಮಾಣದ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗದ ಕಾರಣ ಅವರು ತಮ್ಮ ಸಂಸ್ಥೆಯಿಂದ ಹೊರ ಬಂದಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಸದ್ಯ ‘ಕ್ಲೀನ್​ ಸ್ಲೇಟ್​ ಫಿಲ್ಮ್ಸ್​​’ ಸಂಸ್ಥೆಯನ್ನು ಅವರ ಸಹೋದರ ಕರ್ಣೇಶ್​​ ಶರ್ಮಾ ನೋಡಿಕೊಳ್ಳುತ್ತಿದ್ದಾರೆ. ಈ ಬ್ಯಾನರ್​ ಅಡಿಯಲ್ಲಿ ಹಲವು ಸಿನಿಮಾ ಹಾಗೂ ವೆಬ್​ ಸೀರೀಸ್‌ಗಳನ್ನು ನಿರ್ಮಾಣ ಮಾಡಿದ್ದಾರೆ. ಇವುಗಳಲ್ಲಿ ‘ಪಾತಾಳ್​ ಲೋಕ್​’ ವೆಬ್​ ಸರಣಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. .

ಅನುಷ್ಕಾ ಹಾಗೂ ಕರ್ಣೇಶ್​​ ಶರ್ಮಾ ಇಬ್ಬರೂ ಒಟ್ಟಾಗಿ 2013ರಲ್ಲಿ ‘ಕ್ಲೀನ್​ ಸ್ಲೇಟ್​ ಫಿಲ್ಮ್ಸ್’ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿದ್ದರು.

2018ರಲ್ಲಿ ತೆರೆಗೆ ಬಂದ ‘ಝೀರೋ’ ಚಿತ್ರದ ಬಳಿಕ ಅನುಷ್ಕಾ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಈಗ ಅವರು ಮಹಿಳಾ ಕ್ರಿಕೆಟರ್‌ ಜೂಲನ್ ಗೋಸ್ವಾಮಿ ಜೀವನಾಧಾರಿತ 'ಚಕ್ಡಾ ಎಕ್ಸ್‌ಪ್ರೆಸ್' ಸಿನಿಮಾಗೆ ಬಣ್ಣ ಹಚ್ಚುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT