ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ 15ರಂದು ಪ್ರಸಾರವಾಗಲಿದೆ ಅನುಷ್ಕಾ ನಿರ್ಮಾಣದ ‘ಪಾತಾಳ ಲೋಕ’ ವೆಬ್ ಸರಣಿ

Last Updated 25 ಏಪ್ರಿಲ್ 2020, 15:56 IST
ಅಕ್ಷರ ಗಾತ್ರ

ಬಾಲಿವುಡ್ ನಟಿ ಹಾಗೂ ನಿರ್ಮಾಪಕಿ ಅನುಷ್ಕಾ ಶರ್ಮಾ ಅವರು ಅಮೆಜಾನ್‌ ಪ್ರೈಮ್‌ ಒಟಿಟಿಗಾಗಿ ವೆಬ್ ಸರಣಿಯೊಂದನ್ನು ನಿರ್ಮಾಣ ಮಾಡಿದ್ದಾರೆ. ಇದರ ಹೆಸರು ‘ಪಾತಾಳ ಲೋಕ’! ಇದು ಮೇ 15ರಂದು ಪ್ರಸಾರವಾಗಲಿದೆ.

ಅನುಷ್ಕಾ ಅವರ ಈ ವೆಬ್ ಸರಣಿಯ ಪ್ರಸಾರದ ದಿನಾಂಕವನ್ನು ಅಮೆಜಾನ್‌ ಪ್ರೈಮ್‌ ಸಂಸ್ಥೆಯು ಬಹಿರಂಗಪಡಿಸಿದೆ. ನೀರಜ್ ಕಬಿ, ಜೈದೀಪ್ ಅಹ್ಲಾವತ್, ಗುಲ್ ಪನಾಗ್, ಸ್ವಸ್ತಿಕಾ ಮುಖರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ಅವರು ಇದರಲ್ಲಿ ಅಭಿನಯಿಸಲಿದ್ದಾರೆ.

ಸುದೀಪ್ ಶರ್ಮ ಅವರು ಬರೆದ ಕ್ರೈಮ್‌ ಥ್ರಿಲ್ಲರ್ ಪುಸ್ತಕವನ್ನು ಆಧರಿಸಿದ ವೆಬ್ ಸರಣಿ ಇದು. ಶರ್ಮ ಅವರು ಈ ಹಿಂದೆ ‘ಉಡ್ತಾ ಪಂಜಾಬ್‌’ ಚಿತ್ರದಲ್ಲಿಯೂ ಕೆಲಸ ಮಾಡಿದ್ದವರು.

‘ಈ ಸರಣಿಯು ಮನುಷ್ಯತ್ವದ ಕರಾಳ ಆಯಾಮಗಳ ಮೇಲೆ ಬೆಳಕು ಚೆಲ್ಲುತ್ತದೆ. ನಿಗೂಢ, ಕೌತುಕ ಮತ್ತು ನಾಟಕೀಯ ಅಂಶಗಳು ಇದರಲ್ಲಿ ಇವೆ. ಪುರಾಣಗಳಲ್ಲಿ ಹೇಳಿರುವ ಸ್ವರ್ಗಲೋಕ, ಭೂಲೋಕ ಮತ್ತು ಪಾತಾಳ ಲೋಕ ಪರಿಕಲ್ಪನೆಗಳನ್ನು ಬಳಸಿಕೊಂಡಿದೆ. ಈ ವೆಬ್ ಸರಣಿಯು ಪ್ರಜಾತಂತ್ರದ ನಾಲ್ಕು ಆಧಾರಸ್ತಂಭಗಳ ನಡುವಿನ ಸಂಬಂಧದ ಬಗ್ಗೆಯೂ ಮಾತನಾಡುತ್ತದೆ’ ಎಂದು ಅಮೆಜಾನ್‌ ಪ್ರೈಮ್‌ ಹೇಳಿದೆ.

ಈ ಸರಣಿಗೆ ಸಂಬಂಧಿಸಿದ ದೃಶ್ಯದ ತುಣುಕೊಂದನ್ನು ಅಮೆಜಾನ್‌ ಪ್ರೈಮ್‌ ತನ್ನ ಯೂಟ್ಯೂಬ್‌ ಚಾನೆಲ್ ಮೂಲಕ ಹಂಚಿಕೊಂಡಿದ್ದು, ಒಂದೇ ದಿನದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನ ಇದನ್ನು ವೀಕ್ಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT