ಗುರುವಾರ , ಮಾರ್ಚ್ 30, 2023
32 °C

ಜನ್ಮದಿನದ ಪ್ರಯುಕ್ತ ನಟಿ ಅನುಷ್ಕಾ ಶೆಟ್ಟಿ ಹೊಸ ಚಿತ್ರ ಘೋಷಣೆ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಹೈದರಾಬಾದ್: ನಟಿ ಅನುಷ್ಕಾ ಶೆಟ್ಟಿ ಅವರು ಇಂದು (ನ.7) 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆ ಹಿನ್ನೆಲೆಯಲ್ಲಿ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಇನ್ನೊಂದೆಡೆ ಅನುಷ್ಕಾ ಅವರ 48 ನೇ ಚಿತ್ರ ಘೋಷಣೆಯಾಗಿದ್ದು, ಸದ್ಯಕ್ಕೆ ಪ್ರಾಜೆಕ್ಟ್‌ಗೆ ಅನುಷ್ಕಾ48 ಎಂದು ಹೇಳಲಾಗಿದೆ. ಯುವಿ ಕ್ರಿಯೇಷನ್ಸ್ ಅಡಿ ಚಿತ್ರ ನಿರ್ಮಾಣವಾಗುತ್ತಿದ್ದು, ಮಹೇಶ್‌ ಬಾಬು ಪಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಯುವಿ ಕ್ರಿಯೇಷನ್ಸ್ ಅನುಷ್ಕಾ ಶೆಟ್ಟಿಗೆ ಶುಭಾಶಯ ಕೋರಿ, ಹೊಸ ಸಿನಿಮಾ ಘೋಷಣೆ ಮಾಡಿದೆ.

ಸಾಹೊ ಸಿನಿಮಾಕ್ಕೆ ದೊಡ್ಡ ಬಜೆಟ್ ತೊಡಗಿಸಿ ಗಮನ ಸೆಳೆದಿದ್ದ ಯುವಿ ಕ್ರಿಯೇಷನ್ಸ್ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಜೊತೆಯಾಗಿಸಿ ರಾಧೆ ಶ್ಯಾಮ್ ತೆರೆಗೆ ತರಲು ಸಜ್ಜಾಗಿದೆ.

 

2020ರಲ್ಲಿ ಅಮೆಜಾನ್‌ ಪ್ರೈಮ್‌ನಲ್ಲಿ ತೆರೆಕಂಡ ‘ನಿಶಬ್ದಂ’ ಸಿನಿಮಾ ಬಳಿಕ ಅನುಷ್ಕಾ ಬೇರೆ ಯಾವುದೇ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಆದರೆ, ಹುಟ್ಟುಹಬ್ಬದ ಅಂಗವಾಗಿ ಅವರು ಹೊಸ ಚಿತ್ರವನ್ನು ಘೋಷಣೆ ಮಾಡುವ ನಿರೀಕ್ಷೆಯಲ್ಲಿದ್ದರು.

ಸೂಕ್ತ ಕಥೆ ಸಿಕ್ಕಿದರೆ ಕನ್ನಡದಲ್ಲೂ ಅಭಿನಯಿಸುತ್ತೇನೆ ಎಂದಿರುವ ಅನುಷ್ಕಾ ಅವರ ಕನ್ನಡ ಸಿನಿಮಾ ಕನಸು ಇನ್ನೂ ನನಸಾಗಿಲ್ಲ. ಆದರೂ ಕನ್ನಡ ಭಾಷೆಯ ಮೇಲಿನ ಪ್ರೀತಿಯನ್ನು ಅವರು ಮರೆತಿಲ್ಲ ಎನ್ನುವುದಕ್ಕೆ ಅವರ ಪೋಸ್ಟ್‌ಗಳು ನಿದರ್ಶನ ಎನ್ನುವುದು ನೆಟ್ಟಿಗರ ಅಭಿಪ್ರಾಯ.

ನಟ ಪ್ರಭಾಸ್‌ –ಅನುಷ್ಕಾ ವಿವಾಹವಾಗಲಿದ್ದಾರೆ ಎಂಬ ವದಂತಿಗಳು ಹಲವು ಬಾರಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಆದರೆ, ಈ ವಿಚಾರವಾಗಿ ಇಬ್ಬರೂ ಇದುವರೆಗೆ ಸ್ಪಷ್ಟನೆ ನೀಡಿಲ್ಲ.

ಇದನ್ನೂ ಓದಿ: ‘ಜೈ ಭೀಮ್‘ ಸಿನಿಮಾ ವಿವಾದದ ಬಗ್ಗೆ ಮಾತನಾಡಿದ ನಟ ಪ್ರಕಾಶ್ ರಾಜ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು