ಸೋಮವಾರ, ಡಿಸೆಂಬರ್ 5, 2022
24 °C

ರಮ್ಯಾ– ರಾಜ್‌ ಬಿ.ಶೆಟ್ಟಿ ಜೋಡಿ: ಸುರಿಯಲಿದೆ ಸ್ವಾತಿ ಮುತ್ತಿನ ಮಳೆ ಹನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೋಹಕ ತಾರೆ ರಮ್ಯಾ ಅವರ ನಿರ್ಮಾಣ ಸಂಸ್ಥೆ ಆ್ಯಪಲ್‌ ಬಾಕ್ಸ್‌ ಸ್ಟುಡಿಯೋಸ್‌ನ ಮೊದಲ ಚಿತ್ರ ಘೋಷಣೆಯಾಗಿದೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಈ ಚಿತ್ರದ ಹೆಸರು. ಈ ಚಿತ್ರವನ್ನು ಲೈಟರ್‌ ಬುದ್ಧ ಫಿಲ್ಮ್ಸ್‌ ಸಹಯೋಗದಲ್ಲಿ ನಿರ್ಮಿಸಲಾಗುತ್ತಿದೆ. 

ಚಿತ್ರದಲ್ಲಿ ರಾಜ್‌ ಬಿ. ಶೆಟ್ಟಿ ಹಾಗೂ ರಮ್ಯಾ ಪ್ರಧಾನ ಪಾತ್ರದಲ್ಲಿದ್ದಾರೆ. ಕಥೆ, ನಿರ್ದೇಶನ ರಾಜ್‌ ಬಿ. ಶೆಟ್ಟಿ ಅವರದ್ದು. ರಾಜ್‌ ಅವರು ಕಥೆ ಹೇಳಿದ್ದು ರಮ್ಯಾ ಅವರಿಗೆ ಇಷ್ಟವಾಗಿ ಈ ಚಿತ್ರ ನಿರ್ಮಿಸಲು ಮುಂದಾದರಂತೆ. ರಾಜ್‌ ಅವರ ಗರುಡ ಗಮನ ವೃಷಭ ವಾಹನ ಚಿತ್ರದ ತಾಂತ್ರಿಕ ತಂಡವೇ ಇಲ್ಲಿ ಕೆಲಸ ಮಾಡಲಿದೆ. ಮಿಧುನ್‌ ಮುಕುಂದನ್‌ ಅವರ ಸಂಗೀತ, ಪ್ರವೀಣ್‌ ಶ್ರೀಯಾನ್‌ ಅವರ ಸಂಗೀತವಿದೆ. 

ಒಂದು ವಿರಾಮದ ನಂತರ ರಮ್ಯಾ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ಇದು ರಮ್ಯ–ರಾಜ್‌ ಕಾಲ. ಇದೇ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನುತ್ತಿದೆ ಚಿತ್ರತಂಡ. ಸದ್ಯ ಚಿತ್ರ ನಿರ್ಮಾಣ ಪೂರ್ವ ಹಂತದಲ್ಲಿದೆ. ಹೆಚ್ಚಿನ ವಿವರಗಳನ್ನು ಶೀಘ್ರವೇ ತಿಳಿಸುತ್ತೇವೆ ಎಂದಿದ್ದಾರೆ ರಮ್ಯಾ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು