ಸೋಮವಾರ, ಮಾರ್ಚ್ 27, 2023
32 °C

ಆರ್‌ಜಿವಿಯ ಥ್ರಿಲ್ಲರ್‌ಗೆ ಅಪ್ಸರೆ ಎಂಟ್ರಿ

ಪ್ರಜಾವಾಣಿ ಫೀಚರ್ ಡೆಸ್ಕ್ Updated:

ಅಕ್ಷರ ಗಾತ್ರ : | |

Prajavani

ನಿರ್ದೇಶಕ ರಾಮ್‌ಗೋಪಾಲ್‌ ವರ್ಮಾ ಸಿನಿ ರಸಿಕರು ಈಗ ‘ಥ್ರಿಲ್‌’ ಆಗುವಂತಹ ಮತ್ತೊಂದು ಸುದ್ದಿ ನೀಡಿದ್ದಾರೆ. ಕೊರೊನಾ ಕಾಲದಲ್ಲಿ ಅವರಿಗೆ ಓಟಿಟಿಯಲ್ಲಿ ‘ಕ್ಲೈಮ್ಯಾಕ್ಸ್‌’ ಮತ್ತು ‘ನೇಕೆಡ್‌’ ಚಿತ್ರಗಳು ಸಿಕ್ಕಾಪಟ್ಟೆ ಯಶಸ್ಸು ತಂದುಕೊಟ್ಟಿವೆಯಂತೆ. ಇದೇ ಜೋಷ್‌ನಲ್ಲಿ ಓಟಿಟಿಗೆ ತಮ್ಮ ಮೂರನೇ ಚಿತ್ರ ಘೋಷಣೆ ಮಾಡಿದ್ದಾರೆ.

ಅವರ ಹೊಸ ಚಿತ್ರದ ಹೆಸರು ‘ಥ್ರಿಲ್ಲರ್‌’. ಈ ಚಿತ್ರಕ್ಕೆ ಅಪ್ಸರೆಯಂತಹ ನಾಯಕಿಯನ್ನೂ ಅವರು ಪರಿಚಯಿಸುತ್ತಿದ್ದಾರೆ. ನಾಯಕಿಯ ಹೆಸರು ಕೂಡ ಅಪ್ಸರಾ ರಾಣಿ! ನೋಡಲು ಅಪ್ಸರೆಯಂತೆ ಇದ್ದಾರೆ. ಈ ನಟಿ ಈಗ ‘ಆರ್‌ಜಿವಿ ವರ್ಲ್ಡ್‌ ಥಿಯೇಟರ್‌’ಗೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ‘ಒಳ್ಳೆಯ ಡಾನ್ಸರ್‌ ಮತ್ತು ಅಭಿನೇತ್ರಿಯೂ ಹೌದು’ ಎನ್ನುವ ಪ್ರಶಂಸೆಯ ಮಾತು ಹೇಳಿದ್ದಾರೆ ಆರ್‌ಜಿವಿ.

ಅಪ್ಸರಾ ರಾಣಿ ಮೂಲತಃ ಒಡಿಶಾದವರು. ಬೆಳೆದಿದ್ದರು ಡೆಹರಾಡೂನ್‌ನಲ್ಲಿ. ಸದ್ಯ ನೆಲೆಸಿರುವುದು ಹೈದರಾಬಾದ್‌ನಲ್ಲಿ. ಮಾದಕ ನಯನ ಮತ್ತು ಮೈಮಾಟದ ಈ ಚೆಲುವೆಯನ್ನು ತಮ್ಮ ಬ್ಯಾನರ್‌ನಡಿ ‘ಥ್ರಿಲ್ಲರ್‌’ ಚಿತ್ರದ ಮೂಲಕ ಸಿನಿರಸಿಕರಿಗೆ ಪರಿಚಯಿಸಲು ಆರ್‌ಜಿವಿ ತುಂಬಾ ಉತ್ಸುಕರಾಗಿದ್ದಾರೆ.

ಅಪ್ಸರಾ ರಾಣಿಯ ಮಾದಕ ಭಂಗಿಯ ಫೋಟೊಗಳನ್ನು ಮತ್ತು ಅಪ್ಸರಾ ಜತೆಗೆ ಬಿರಿಯಾನಿ ಮೆಲ್ಲುತ್ತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರಿಂದ ಸಿಗುತ್ತಿರುವ ಪ್ರತಿಕ್ರಿಯೆಗೆ ಆರ್‌ಜಿವಿ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಈ ಚಿತ್ರ ಪ್ರೇಕ್ಷಕರಿಗೆ ಯಾವಾಗ ವೀಕ್ಷಣೆಗೆ ಲಭ್ಯವಾಗಬಹುದು ಎನ್ನುವ ಮಾಹಿತಿಯನ್ನು ವರ್ಮಾ ಇನ್ನೂ ತಿಳಿಸಿಲ್ಲ.

ಕೊರೊನಾ ಲಾಕ್‌ಡೌನ್‌ ವಿರಾಮದಲ್ಲಿ ಒಟಿಟಿಯಲ್ಲಿ ವೀಕ್ಷಿಸುವವರಿಗಾಗಿ ನಿರ್ಮಿಸಿದ ‘ಕ್ಲೈಮ್ಯಾಕ್ಸ್’ ಚಿತ್ರ ಬಿಡುಗಡೆಯಾದ ಒಂದು ದಿನದೊಳಗೆ 1.68 ಲಕ್ಷ ಜನರು ತಲಾ ₹100 ಪಾವತಿಸುವ ಮೂಲಕ ವೀಕ್ಷಣೆ ಮಾಡಿದರು. ಹಾಗೆಯೇ ‘ನೇಕೆಡ್‌’ ಕೂಡ ಅದ್ಭುತ ಯಶಸ್ಸು ನೀಡಿದೆ. ಇನ್ನು ‘ಥ್ರಿಲ್ಲರ್‌’ ಹ್ಯಾಟ್ರಿಕ್‌ ಸಕ್ಸಸ್‌ ತಂದುಕೊಡಲಿದೆ ಎನ್ನುವುದು ವರ್ಮಾ ಲೆಕ್ಕಾಚಾರ.

ವರ್ಮಾ ಸದ್ಯ ಸಮರಕಲೆಯ ಕೇಂದ್ರಿತ ‘ಎಂಟರ್ ದಿ ಗರ್ಲ್ ಡ್ರ್ಯಾಗನ್’ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಈ ಚಿತ್ರದಲ್ಲಿ ಪೂಜಾ ಬಾಲೇಕರ್ ಮುಖ್ಯ ಪಾತ್ರ ನಿಭಾಯಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ಕೆಲವು ದೃಶ್ಯಗಳನ್ನು ಚೀನಾದಲ್ಲಿ ಚಿತ್ರಿಕರಿಸಲು ವರ್ಮಾ ತೀರ್ಮಾನಿಸಿದ್ದರು. ಆದರೆ ಕೊರೊನಾ ಲಾಕ್‌ಡೌನ್‌ ಕಾರಣಕ್ಕೆ ಚೀನಾ ಪ್ರವಾಸ ರದ್ದು ಮಾಡಿ, ಭಾರತದಲ್ಲೇ ಚಿತ್ರೀಕರಿಸುವ ನಿರ್ಧಾರ ತೆಗೆದುಕೊಂಡಿರುವ ಸುದ್ದಿ ಇದೆ.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು