ಗುರುವಾರ , ಫೆಬ್ರವರಿ 20, 2020
30 °C

ತಲೈವಿ ಜಯಲಲಿತಾ: ಎಂಜಿಆರ್‌ ಆಗಿ ಪರಕಾಯ ಪ್ರವೇಶ ಮಾಡಿದ ಅರವಿಂದ ಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಹಿರಿಯ ನಟ ಎಂಜಿಆರ್‌ ಹುಟ್ಟುಹಬ್ಬದಂದು ‘ತಲೈವಿ’ ಚಿತ್ರತಂಡ ಎಂಜಿಆರ್ ಪಾತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದೆ.

ಕಂಗನಾ ರನೋಟ್‌ ಜಯಲಲಿತಾ ಪಾತ್ರದಲ್ಲಿ ನಟಿಸಿರುವ 'ತಲೈವಿ' ಚಿತ್ರದಲ್ಲಿ ಎಂಜಿಆರ್ ಪಾತ್ರವನ್ನು ಹ್ಯಾಂಡ್‌ಸಮ್‌ ನಟ ಅರವಿಂದ ಸ್ವಾಮಿ ಮಾಡಲಿದ್ದಾರೆ. ಅರವಿಂದ ಸ್ವಾಮಿ, ಎಂಜಿಆರ್‌ ಲುಕ್‌ನಲ್ಲಿರುವ ಮೊದಲ ಪೋಸ್ಟರ್‌ ಕುತೂಹಲ ಹೆಚ್ಚಿಸಿದೆ.

60 ದಶಕದಲ್ಲಿಯ ಯೌವ್ವನದ ದಿನಗಳಲ್ಲಿ ಎಂಜಿಆರ್ ಹೇಗೆ ಕಾಣಿಸುತ್ತಿದ್ದರೋ ಅದೇ ರೀತಿ ಕೇಶವಿನ್ಯಾಸ, ಪೋಷಾಕಿನಲ್ಲಿ ಅರವಿಂದ ಸ್ವಾಮಿ, ಎಂಜಿಆರ್‌ ಪ್ರತಿಬಿಂಬದಂತೆ ಕಾಣುತ್ತಿದ್ದಾರೆ.

60 ಮತ್ತು 70ರ ದಶಕದಲ್ಲಿ ಎಂಜಿಆರ್ ಮತ್ತು ಜಯಲಲಿತಾ ಜೋಡಿ ತೆರೆಯ ಮೇಲೆ ಮೋಡಿ ಮಾಡಿತ್ತು. ಈ ಜೋಡಿ 28ಕ್ಕೂ ಹೆಚ್ಚು ಹಿಟ್‌ ಚಿತ್ರಗಳನ್ನು ನೀಡಿದೆ. ಸಿನಿಮಾ ಮತ್ತು ರಾಜಕೀಯ ರಂಗದಲ್ಲಿ ಜಯಲಲಿತಾ ಅವರಿಗೆ ಗಾಡ್‌ಫಾದರ್‌ ಆಗಿದ್ದ ಎಂಜಿಆರ್ ಪಾತ್ರ ಈ ಸಿನಿಮಾದ ಪ್ರಮುಖ ಆಕರ್ಷಣೆಯಾಗಲಿದೆ.

ಹಿಂದಿ, ತಮಿಳು ಮತ್ತು ತೆಲುಗಿನಲ್ಲೂ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಎ.ಎಲ್. ವಿಜಯ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ವಿಷ್ಣುವರ್ಧನ್ ಇಂದುರಿ ನಿರ್ಮಿಸುತ್ತಿದ್ದಾರೆ. ಜೂನ್ 26 ರಂದು ತಲೈವಿ ಸಿನಿಮಾ ಬಿಡುಗಡೆಯಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು