ಅರ್ಜುನ್, ಮಲೈಕಾ ಮದ್ವೆ ಯಾವಾಗ?

ಬುಧವಾರ, ಜೂನ್ 26, 2019
28 °C

ಅರ್ಜುನ್, ಮಲೈಕಾ ಮದ್ವೆ ಯಾವಾಗ?

Published:
Updated:
Prajavani

ವಯಸ್ಸಿನ ಅಂತರವಿದ್ದರೂ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಜೋಡಿಯಾಗಿ ವಿಹರಿಸುತ್ತಿರುವುದು ಬಿಟೌನ್‌ನಲ್ಲಿ ಈಗ ಗುಟ್ಟಾಗಿ ಉಳಿದಿಲ್ಲ. ದೇಶವಷ್ಟೇ ಅಲ್ಲ ವಿದೇಶಗಳಿಗೂ ಜೋಡಿಯಾಗಿ ತೆರಳುವ ಈ ಜೋಡಿ ಅಲ್ಲಿ ಕಳೆದ ಸಂತಸದ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದನ್ನು ಮಾತ್ರ ಮರೆಯುವುದಿಲ್ಲ. ಇಷ್ಟೆಲ್ಲಾ ಸುತ್ತಾಡುತ್ತಿರುವ ಈ ಜೋಡಿ ಯಾವಾಗ ಮದುವೆಯಾಗುತ್ತದೆ ಎಂಬುದೇ ಅಭಿಮಾನಿಗಳ ಮಿಲಿಯನ್ ಡಾಲರ್ ಪ್ರಶ್ನೆ. 

ಏಪ್ರಿಲ್ 19ರಂದೇ ಇಬ್ಬರೂ ಮದುವೆಯಾಗುತ್ತಾರೆ ಎಂಬ ಗುಸುಗುಸು ಸುದ್ದಿ ಬಾಲಿವುಡ್‌ನಲ್ಲಿ ಹರಿದಾಡಿತಾದರೂ ಇದಕ್ಕೆ ಖಚಿತತೆ ಸಿಗಲಿಲ್ಲ. ಈ ಬಗ್ಗೆ ಮಲೈಕಾ ಅವರನ್ನು ಕೇಳಿದರೆ, ‘ಇದಕ್ಕೆಲ್ಲಾ ಮಾಧ್ಯಮಗಳೇ ಕಾರಣ. ಅವರೇ ಈ ಸುದ್ದಿಯನ್ನು ಹಬ್ಬಿಸಿದ್ದು. ಇದಕ್ಕೆಲ್ಲಾ ಅವರೇ ಜವಾಬ್ದಾರರು’ ಎಂದರು.

ಈ ನಡುವೆ ಅರ್ಜನ್ ಕಪೂರ್ ಕುಟುಂಬಕ್ಕೆ ಹತ್ತಿರವಾದ ಮಲೈಕಾ, ಅವರ ಕುಟುಂಬದ ಶುಭ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಹಾಜರಾಗುತ್ತಿದ್ದರು. ಅಷ್ಟೇ ಅಲ್ಲ ಅರ್ಜುನ್ ಸಹೋದರಿಯರಾದ ಜಾನ್ವಿ ಕಪೂರ್, ಅನ್ಷುಲಾ ಕಪೂರ್, ಖುಷಿ ಕಪೂರ್ ಜತೆಗೂ ಪಾರ್ಟಿಗಳಿಗೆ ತೆರಳುತ್ತಿದ್ದಾರೆ. 

ಅರ್ಜುನ್ ಕಪೂರ್ ಅವರ ಹೊಸ ಚಿತ್ರ ‘ಇಂಡಿಯಾಸ್‌ ಮೋಸ್ಟ್ ವಾಟೆಂಡ್’ ಸಿನಿಮಾದ ಮೊದಲ ಪ್ರದರ್ಶನವನ್ನು ಇಬ್ಬರೂ ಜೊತೆಯಾಗಿ  ವೀಕ್ಷಿಸಿರುವುದು ಇಬ್ಬರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಈ ಬಗ್ಗೆ ಅರ್ಜುನ್ ಕಪೂರ್ ಅವರನ್ನು ಪ್ರಶ್ನಿಸಿದರೆ, ‘ಮದುವೆ, ಮದುವೆ, ನಾವಿಬ್ಬರೂ ಮದುವೆಯಾಗಲು ಬಯಸುವುದಿಲ್ಲ. ಯಾವಾಗ ಮದುವೆ ಆಗುತ್ತೇವೋ ಆಗ ಖಂಡಿತಾ ನಿಮಗಷ್ಟೇ ಅಲ್ಲ ಎಲ್ಲರಿಗೂ ತಿಳಿಸುತ್ತೇವೆ . ಎಲ್ಲರನ್ನೂ ಮದುವೆಗೆ ಆಹ್ವಾನಿಸುತ್ತೇವೆ. ನೀವು ನಮ್ಮ ಕುಟಂಬದಲ್ಲಿ ನಡೆದ ಇತರ ಮದುವೆಗಳನ್ನು ನೋಡಿಲ್ಲವೇ? ಆ ಮದುವೆಗಳೆಲ್ಲಾ ರಹಸ್ಯಮದುವೆಗಳೇ? ನಾನು ಕದ್ದುಮುಚ್ಚಿ ಮದುವೆಯಾಗುವುದನ್ನು ನಮ್ಮ ಕುಟುಂಬ ಒಪ್ಪಿಕೊಳ್ಳುತ್ತದೆಯೇ?’ ಎಂದು ಮಾಧ್ಯಮಗಳ ವಿರುದ್ಧ ಹರಿಹಾಯುತ್ತಾರೆ. 

‘ನಾನು ನನ್ನ ವೈಯಕ್ತಿಕ ಜೀವನದಲ್ಲಿ ಬಹಳ ಸಂತೋಷದಿಂದ ಇದ್ದೇನೆ. ವೈಯಕ್ತಿಕ ಬದುಕಾಗಲೀ, ಸಿನಿಮಾ ಬದುಕನ್ನಾಗಲೀ ನಾನು ಮುಚ್ಚಿಟ್ಟಿಲ್ಲ. ಮಾತನಾಡುವ ಕಾಲ ಬಂದಾಗ ಖಂಡಿತ ಮಾತನಾಡುತ್ತೇನೆ. ಸದ್ಯಕ್ಕಂತೂ ನಾನು ಮದುವೆಯಾಗುವ ಸ್ಥಿತಿಯಲ್ಲಿಲ್ಲ. ಜಗತ್ತು ನನ್ನ ಬಗ್ಗೆ ಏನೇ ಮಾತನಾಡಿಕೊಳ್ಳಲಿ. ನಾನು ತಲೆಕೆಡಿಸಿ ಕೊಳ್ಳುವುದಿಲ್ಲ’ ಎನ್ನುತ್ತಾರೆ 33ರ ಹರೆಯದ ಅರ್ಜುನ್. 

45 ವರ್ಷದ ಮಲೈಕಾ ಅರೋರ, ‘ವಿ’ ಚಾನೆಲ್ ಮೂಲಕ ತಮ್ಮ ವೃತ್ತಿಬದುಕನ್ನು ಆರಂಭಿಸಿದವರು. ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಕಾಲೂರಿದ ಮೇಲೆ ಅರ್ಬಾಜ್  ಖಾನ್ ಅವರನ್ನು ಇಷ್ಟಪಟ್ಟು  ಮದುವೆಯಾಗಿದ್ದ ಮಲೈಕಾ, 2017ರಲ್ಲಿ ಅವರಿಂದ ವಿಚ್ಛೇದನ ಪಡೆದಿದ್ದರು. 

ವಿಚ್ಛೇದನದ ನಂತರ ಅರ್ಜುನ್ ಕಪೂರ್ ಜತೆಗೆ ಒಡನಾಟ ಹೊಂದಿರುವ ಮಲೈಕಾ, ಇದುವರೆಗೂ ತಮ್ಮ ಖಾಸಗಿ ಜೀವನದ ಕುರಿತು ಎಲ್ಲೂ ಮಾತನಾಡಿಲ್ಲ.

ಯೋಗ ಆ್ಯಪ್ ಮೂಲಕ ಜನಪ್ರಿಯರಾಗಿರುವ ಮಲೈಕಾ, ನಿತ್ಯವೂ ಜಿಮ್‌ನಲ್ಲಿ ಬೆವರು ಹರಿಸುತ್ತಾರೆ. ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಜಿಮ್, ಯೋಗ, ಧ್ಯಾನ ಮತ್ತು ಈಜುತ್ತಿರುವ ಸರಣಿ ಚಿತ್ರಗಳನ್ನೇ ಕಾಣಬಹುದು.

‘ನನ್ನ ಖಾಸಗಿ ಬದುಕಿನ ನಿಮ್ಮ ಯಾವ ಪ್ರಶ್ನೆಗಳಿಗೂ ನನ್ನಲ್ಲಿ ಉತ್ತರಗಳಿಲ್ಲ. ಉತ್ತರಿಸಲೂ ನಾನು ಬಯಸುವುದಿಲ್ಲ’ ಎಂಬುದಷ್ಟೇ ಮಲೈಕಾ ಅವರ ಮಾತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 2

  Frustrated
 • 2

  Angry

Comments:

0 comments

Write the first review for this !