ಭಾನುವಾರ, ಮೇ 22, 2022
21 °C

‘ಅರ್ಜುನ್ ಗೌಡ’ನ ಆಟ ನವೆಂಬರ್‌ನಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಜ್ವಲ್ ದೇವರಾಜ್ ಅಭಿನಯದ ‘ಅರ್ಜುನ್ ಗೌಡ’ ಚಿತ್ರದ ಚಿತ್ರೀಕರಣವು ಬಹುತೇಕ ಪೂರ್ಣಗೊಂಡಿದೆ. ಚಿತ್ರದ ಒಂದೆರಡು ದೃಶ್ಯಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಉಳಿದಿರುವ ಭಾಗಗಳ ಚಿತ್ರೀಕರಣ ವಿದೇಶದಲ್ಲಿ ನಡೆಯಲಿದ್ದು, ನವೆಂಬರ್‌ ತಿಂಗಳಲ್ಲಿ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ.

ಇದು ರಾಮು ಅವರು ನಿರ್ಮಿಸುತ್ತಿರುವ ಚಿತ್ರ. ಚಿತ್ರದ ಆ್ಯಕ್ಷನ್‌ ಟೀಸರ್‌ಅನ್ನು ಡೈನಾಮಿಕ್ ಸ್ಟಾರ್ ದೇವರಾಜ್ ಬಿಡುಗಡೆ ಮಾಡಿದ್ದರು. ದೇವರಾಜ್ ಅವರ ಕುಟುಂಬಕ್ಕೂ, ರಾಮು ಅವರಿಗೂ ಒಂದು ನಂಟು ಇದೆ. ಹಿಂದೆ, ರಾಮು ನಿರ್ಮಾಣದ ‘ಲಾಕಪ್‌ ಡೆತ್‌’ ಸಿನಿಮಾದಲ್ಲಿ ದೇವರಾಜ್ ಅಭಿನಯಿಸಿದ್ದರು. ಈಗ ಅವರ ಪುತ್ರ ಪ್ರಜ್ವಲ್ ಅವರು ರಾಮು ನಿರ್ಮಾಣದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಶಂಕರ್ ಅವರು ಈ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಧರ್ಮವಿಶ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಜೈಆನಂದ್ ಅವರ ಛಾಯಾಗ್ರಹಣ ಇದೆ. ಪ್ರಜ್ವಲ್ ದೇವರಾಜ್ ಅವರಲ್ಲದೆ, ಪ್ರಿಯಾಂಕ ತಿಮ್ಮೇಶ್, ಸಾಧು ಕೋಕಿಲ, ರೇಖಾ, ಕಡ್ಡಿಪುಡಿ ಚಂದ್ರು, ಅರವಿಂದ್, ದೀಪಕ್ ಶೆಟ್ಟಿ, ಪ್ರಕಾಶ್, ಯಮುನ ಶ್ರೀನಿಧಿ, ಭಜರಂಗಿ ಚೇತನ್ ತಾರಾಬಳಗದಲ್ಲಿ ಇದ್ದಾರೆ.

ಇದನ್ನೂ ಓದಿ: ‘ಜೆಂಟಲ್‌ಮನ್’ ಆದ ಪ್ರಜ್ವಲ್

‘ಈ ಸಿನಿಮಾದಲ್ಲಿ ಪ್ರಜ್ವಲ್ ಅವರು ಮೂರು ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೊಮ್ಯಾಂಟಿಕ್‌ ಆ್ಯಕ್ಷನ್‌ ಚಿತ್ರ ಇದು. ಸಾಮಾನ್ಯ ಮನುಷ್ಯ ನಾರ್ಮಲ್ ಆಗಿರಬಾರದು. ಬೇರೆ ತರಹವೇ ಇರಬೇಕು ಎಂಬುದೇ ಚಿತ್ರದ ಹೂರಣ’ ಎಂದು ಚಿತ್ರತಂಡ ಈ ಹಿಂದೆಯೇ ತಿಳಿಸಿದೆ.

‘ನನ್ನದು ಒಂಥರಾ ಜಗಮೊಂಡನ ಪಾತ್ರ. ಯಾವುದೇ ಕೆಲಸ ಮಾಡಿದರೂ ಸರಿಯಾಗಿಯೇ ಮಾಡುತ್ತೇನೆ. ಯಾರಿಗೂ ಕೇರ್ ಮಾಡದ ಹುಡುಗ’ ಎಂದು ಪ್ರಜ್ವಲ್ ತಮ್ಮ ಪಾತ್ರದ ಬಗ್ಗೆ ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು