ಗುರುವಾರ , ಜುಲೈ 16, 2020
24 °C
ನಿಂದನಾತ್ಮಕ ಪದ ಬಳಕೆ: ಗೂರ್ಖಾ ಸಮುದಾಯದ ಕ್ಷಮೆಯಾಚನೆಗೆ ಒತ್ತಾಯ

ಅನುಷ್ಕಾ ಶರ್ಮಾ ವಿರುದ್ಧ ದೂರು ದಾಖಲು

ಪಿಟಿಐ Updated:

ಅಕ್ಷರ ಗಾತ್ರ : | |

ಇಟಾನಗರ: ‘ಪಾತಾಲ್ ಲೋಕ್‌’ ವೆಬ್ ಸರಣಿಯಲ್ಲಿ ಗುರ್ಖಾ ಸಮುದಾಯದ ವಿರುದ್ಧ ನಿಂದನಾತ್ಮಕ ಪದ ಬಳಸಲಾಗಿದೆ ಎಂದು ಆರೋಪಿಸಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ವಿರುದ್ಧ ಅರುಣಾಚಲ ಪ್ರದೇಶದ ಗೂರ್ಖಾ ಸಂಘಟನೆಯು ಮಾನವ ಹಕ್ಕುಗಳ ರಾಷ್ಟ್ರೀಯ ಆಯೋಗಕ್ಕೆ (ಎನ್‌ಎಚ್‌ಆರ್‌ಸಿ) ದೂರು ನೀಡಿದೆ. 

‘ಪಾತಾಲ್ ಲೋಕ್’ ವೆಬ್‌ ಸರಣಿಗೆ ಅನುಷ್ಕಾ ನಿರ್ಮಾಪಕಿಯಾಗಿದ್ದಾರೆ. ಅರುಣಾಚಲ ಪ್ರದೇಶ ಗೂರ್ಖಾ ಯುವ ಸಂಘಟನೆಯ  (ಎಎಪಿಜಿವೈಎ) ನಮ್ಸಾಯಿ ಘಟಕದ ಅಧ್ಯಕ್ಷ ಬಿಕಾಸ್ ಭಟ್ಟಾರೈ ಈಚೆಗೆ ಆಯೋಗಕ್ಕೆ ದೂರು ನೀಡಿದ್ದಾರೆ. 

ವೆಬ್‌ಸರಣಿಯ ಎರಡನೇ ಸಂಚಿಕೆಯಲ್ಲಿ ಮಹಿಳಾ ಪಾತ್ರವೊಂದಕ್ಕೆ ‘ಸೆಕ್ಸಿಯಸ್ಟ್‌ ಸ್ಲರ್‌’ ಎನ್ನುವ ಪದ ಬಳಸಲಾಗಿದ್ದು, ಇದು ನೇಪಾಳಿ ಭಾಷೆ ಮಾತನಾಡುವ ಜನರಿಗೆ ನೇರ ಅವಮಾನ ಮಾಡುತ್ತದೆ. ಈ ಪದ ಗೂರ್ಖಾ ಸಮುದಾಯದ ಜನರ ಭಾವನೆಗಳಿಗೂ ಘಾಸಿ ತರುವಂತಿದೆ ಎಂದು ಸಂಘಟನೆ ದೂರಿನಲ್ಲಿ ಆರೋಪಿಸಿದೆ. 

‘ಪಾತಾಲ್ ಲೋಕ್’ ತಂಡವು ವೆಬ್ ಸರಣಿಯ ಪ್ರಸಾರ ನಿಲ್ಲಿಸಬೇಕು ಇಲ್ಲವೇ ಗೂರ್ಖಾ ಸಮುದಾಯದ ಕ್ಷಮೆ ಯಾಚಿಸಬೇಕು ಎಂದೂ ಸಂಘಟನೆ ಆಗ್ರಹಿಸಿದೆ. 

‘ಅಮೆಜಾನ್’ ಈ ಸಂಭಾಷಣೆಯನ್ನು ಮ್ಯೂಟ್ ಮಾಡಬೇಕು, ಉಪ ಶೀರ್ಷಿಕೆಗಳನ್ನು ಮಸುಕುಗೊಳಿಸಬೇಕು. ಕ್ಷಮೆಯಾಚಿಸಿರುವ ಪರಿಷ್ಕೃತ ವಿಡಿಯೊವನ್ನು ಅಪ್‌ಲೋಡ್ ಮಾಡಬೇಕು’ ಎಂದು ಒತ್ತಾಯಿಸಿ ಭಾರತೀಯ ಗೂರ್ಖಾ ಯುವ ಪರಿಸಂಘ ಆನ್‌ಲೈನ್ ಆಂದೋಲನವನ್ನೂ ಆರಂಭಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು