ಶನಿವಾರ, ಡಿಸೆಂಬರ್ 4, 2021
24 °C

ಜೈಲಿನಿಂದಲೇ ತಂದೆ–ತಾಯಿಗೆ ವಿಡಿಯೊ ಕಾಲ್ ಮಾಡಿದ ಆರ್ಯನ್ ಖಾನ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಅವರ ಮಗ ಆರ್ಯನ್ ಖಾನ್ ಅವರು ಜೈಲಿನಿಂದಲೇ ತಂದೆ, ತಾಯಿ ಜೊತೆ ವಿಡಿಯೊ ಕಾಲ್ ಮೂಲಕ ಮಾತನಾಡಿದ್ಧಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.

ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿರುವ ಆರ್ಯನ್ ಖಾನ್ ಅವರು, ಬಂಧನವಾದ ಬಳಿಕ ಇದೇ ಮೊದಲ ಬಾರಿಗೆ ತಂದೆ ಶಾರುಕ್ ಖಾನ್ ಮತ್ತು ತಾಯಿ ಗೌರಿ ಖಾನ್ ಜೊತೆ ಮಾತನಾಡಿದ್ಧಾರೆ.

ಆರ್ಯನ್ ಖಾನ್ ಜಾಮೀನು ಅರ್ಜಿ ಮೇಲಿನ ಆದೇಶವನ್ನು ಮುಂಬೈನ ವಿಶೇಷ ನ್ಯಾಯಾಲಯವು ಅಕ್ಟೋಬರ್ 20ಕ್ಕೆ ಕಾಯ್ದಿರಿಸಿದೆ.

ಇದನ್ನೂ ಓದಿ.. ಡ್ರಗ್ ಕೇಸ್: ಆರ್ಯನ್ ಬಗ್ಗೆ ಸಿಕ್ಕಿದೆ ಭಾರೀ ಸಾಕ್ಷಿ.. ಎನ್‌ಸಿಬಿ ಹೇಳಿದ್ದೇನು?

ಅಕ್ಟೋಬರ್ 2ರ ರಾತ್ರಿ ಮುಂಬೈ ಸಮೀಪದ ಕಡಲಿನಲ್ಲಿ ಐಷಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್‌ ಪಾರ್ಟಿಯ ಮೇಲೆ ಮಾದಕ ಪದಾರ್ಥ ನಿಯಂತ್ರಣ ಬ್ಯೂರೊ (ಎನ್‌ಸಿಬಿ) ದಾಳಿ ನಡೆಸಿ, ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯನ್ ಖಾನ್ ) ಮತ್ತು ಇತರರನ್ನು ಎನ್‌ಸಿಬಿ ಬಂಧಿಸಿತ್ತು.

ಪ್ರಕರಣವು ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ಅಗಾಥಾ ಕ್ರಿಸ್ಟಿ ಮತ್ತು ಶೆರ್ಲಾಕ್‌ ಹೋಮ್ಸ್‌ ಕಾದಂಬರಿಯಂತಾಗಿದೆ ಎಂದು ಎನ್‌ಸಿಬಿ ಕೋರ್ಟ್‌ಗೆ ಹೇಳಿತ್ತು.

ಇತ್ತೀಚೆಗೆ, ಆರ್ಯನ್ ಖಾನ್ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಿದ್ದ ಎನ್‌ಸಿಬಿ, ಈವರೆಗೆ ನಡೆದಿರುವ ತನಿಖೆಯಲ್ಲಿ ಪಿತೂರಿ, ಕಾನೂನುಬಾಹಿರ ಮಾದಕ ವಸ್ತು ಖರೀದಿ ಮತ್ತು ಡ್ರಗ್ಸ್ ಸೇವನೆ ಕುರಿತಂತೆ ಆರ್ಯನ್ ವಿರುದ್ಧ ಸಾಕ್ಷಿ ಸಿಕ್ಕಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು.

ಡ್ರಗ್ಸ್ ಖರೀದಿಗಾಗಿ ಆರ್ಯನ್ ಖಾನ್ ಕೆಲವು ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದಾನೆ, ಅವರು ಅಂತರರಾಷ್ಟ್ರೀಯ ಡ್ರಗ್ ನೆಟ್‌ವರ್ಕ್‌ನ ಭಾಗವಾಗಿರುವಂತೆ ತೋರುತ್ತಿದೆ ಎಂದು ಎನ್‌ಸಿಬಿ ತನ್ನ ಅಫಿಡವಿಟ್‌ನಲ್ಲಿ ಹೇಳಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು