ಶುಕ್ರವಾರ, ಜನವರಿ 17, 2020
24 °C

ಸುನಿಲ್‌ ಶೆಟ್ಟಿ ಪುತ್ರಿ ಅಥಿಯಾ ಜೊತೆ ಕ್ರಿಕೆಟಿಗ ರಾಹುಲ್‌ ಸುತ್ತಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟ ಸುನಿಲ್‌ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ, ಕ್ರಿಕೆಟಿಗ ಕೆ.ಎಲ್‌.ರಾಹುಲ್‌ ಡೇಟಿಂಗ್‌ ನಡೆಸುತ್ತಿದ್ದಾರೆಯೇ? ಅವರಿಬ್ಬರೂ ಬರೀ ಸ್ನೇಹಿತರಷ್ಟೇ ಅಲ್ಲ ಎಂದು ಬಾಲಿವುಡ್‌ ಅಂಗಳದಲ್ಲಿ ಸುದ್ದಿಯಾಗುತ್ತಿದೆ.

ಅಥಿಯಾ ಶೆಟ್ಟಿ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅಪ್ಪ ಸುನಿಲ್‌ ಶೆಟ್ಟಿ ಹಾಗೂ ಸಹೋದರ ಅಹಾನ್‌ ಶೆಟ್ಟಿ ಶುಭಾಶಯಗಳನ್ನು ತಿಳಿಸಿದ್ದರು. ಆದರೆ ಇದೆಲ್ಲಕ್ಕಿಂತ ವಿಶೇಷವಾಗಿ ಗಮನ ಸೆಳೆದದ್ದು ರಾಹುಲ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಫೋಟೊ ಹಾಗೂ ಸಂದೇಶ. 

ತಾವಿಬ್ಬರು ಕೆಫೆಯೊಂದರಲ್ಲಿ ಜೊತೆಗಿರುವ ಪೋಟೊ ಹಂಚಿಕೊಂಡಿರುವ ರಾಹುಲ್‌, ಅಥಿಯಾಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು.

ಇತ್ತೀಚೆಗೆ ಇವರಿಬ್ಬರೂ ಒಟ್ಟಾಗಿ ಪಾರ್ಟಿ ಹಾಗೂ ಇನ್ನಿತರ ಕಡೆ ಜೊತೆಜೊತೆಯಾಗಿ ಓಡಾಡುತ್ತಿರುವುದು ಟಿ–ಟೌನ್‌ನ ಚರ್ಚಾ ಸುದ್ದಿ. 

ಈ ಜೋಡಿ ತಮ್ಮ ಸಂಬಂಧದ ಬಗ್ಗೆ ಏನೂ ಹೇಳಿಕೊಂಡಿಲ್ಲ. ಆದರೆ ಅವರಿಬ್ಬರೂ ಜೊತೆಜೊತೆಯಾಗಿ ಓಡಾಡುವುದನ್ನು ನೋಡಿದವರು ಅವರಿಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು