ಸೋಮವಾರ, ಮಾರ್ಚ್ 1, 2021
28 °C

ಆಡಿಯೊ ವೈರಲ್‌: ನಟ ಜಗ್ಗೇಶ್‌ಗೆ ದರ್ಶನ್‌ ಅಭಿಮಾನಿಗಳ ಮುತ್ತಿಗೆ: ಕ್ಷಮೆಗೆ ಪಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಚಲನಚಿತ್ರವೊಂದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ನಟ ಜಗ್ಗೇಶ್‌ಗೆ, ತಿ.ನರಸೀಪುರ ತಾಲ್ಲೂಕಿನ ಬನ್ನೂರು ಸಮೀಪದ ಅತ್ತಳ್ಳಿಯಲ್ಲಿ ದರ್ಶನ್‌ ಅಭಿಮಾನಿಗಳು ಮುತ್ತಿಗೆ ಹಾಕಿ ತೀವ್ರ ತರಾಟೆಗೆ ತೆಗೆದುಕೊಂಡರು. ‘ಡಿ ಬಾಸ್‌’ ಕ್ಷಮೆ ಕೋರುವಂತೆ ಪಟ್ಟು ಹಿಡಿದರು.

ದರ್ಶನ್‌ ಹಾಗೂ ಅವರ ಅಭಿಮಾನಿಗಳ ವಿರುದ್ಧ ಜಗ್ಗೇಶ್‌ ಮಾತನಾಡಿದ್ದ ಆಡಿಯೊವೊಂದು ಕೆಲ ದಿನಗಳ ಹಿಂದೆಯಷ್ಟೇ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದಕ್ಕೆ ದರ್ಶನ್‌ ಅಭಿಮಾನಿಗಳು ಕಟುವಾಗಿ ಪ್ರತಿಕ್ರಿಯಿಸಿದ್ದರು. ಆಗಲೇ ಜಗ್ಗೇಶ್‌ ಸ್ಪಷ್ಟನೆಯನ್ನು ಕೂಡ ನೀಡಿದ್ದರು.

ಚಿತ್ರೀಕರಣದಲ್ಲಿ ಜಗ್ಗೇಶ್‌ ಪಾಲ್ಗೊಂಡಿದ್ದಾರೆ ಎಂಬ ಮಾಹಿತಿ ತಿಳಿದ ದರ್ಶನ್‌ ಅಭಿಮಾನಿಗಳ ತಂಡ ಸ್ಥಳಕ್ಕೆ ತೆರಳಿ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಕ್ಷಮೆ ಕೋರುವಂತೆ ಪಟ್ಟು ಹಿಡಿದು, ಜಗ್ಗೇಶ್‌ ವಿರುದ್ಧ ಹರಿಹಾಯ್ದಿದ್ದಾರೆ. ಈ ದೃಶ್ಯಾವಳಿಗಳನ್ನು ಒಳಗೊಂಡ ವಿಡಿಯೊ ತುಣುಕು ಈ ಭಾಗದ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವಿಡಿಯೊ: ಜಗ್ಗೇಶ್ v/s ಡಿ'ಬಾಸ್ ಫ್ಯಾನ್ಸ್ - ಅಭಿಮಾನದ ಕಾಳಗ

ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಜಗ್ಗೇಶ್‌ ಸಿಟ್ಟಾಗಿ ಪ್ರತಿಕ್ರಿಯಿಸಿದ್ದಾರೆ. ‘ಆ ಧ್ವನಿ ನನ್ನದೇ ಅಲ್ಲ. ನಾನವನಲ್ಲ ಅಂದಿದ್ದಾರೆ. ನಾನ್ಯಾಕೆ ಕ್ಷಮೆ ಕೋರಬೇಕು ಎಂದು ವಾದಿಸಿದ್ದಾರೆ. ಅಭಿಮಾನಿಯೊಬ್ಬನಿಗೆ ಇದು ನಿಂದಲ್ಲ ಮ್ಯಾಟರ್‌’ ಎನ್ನುತ್ತಿದ್ದಂತೆ ಮುತ್ತಿಗೆ ಹಾಕಿದ್ದ ತಂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

‘ಅದು ನಂದೇ ಮ್ಯಾಟರ್. ಅಭಿಮಾನಿಗಳು ಅಂದರೇ ಏನ್‌ ತಿಳ್ಕೊಂಡಿಯಾ? ಹಿಂದೊಂದು–ಮುಂದೊಂದು ಮಾತಾಡ್ತೀಯಾ. ನೀನು ಮಾತನಾಡಿದವನ ಜೊತೆಗೆ ಮಾತನಾಡಿ, ನೀನೇ ಮಾತನಾಡಿದ್ದು ಎಂಬುದನ್ನು ಸ್ಪಷ್ಟಪಡಿಸಿಕೊಂಡಿದ್ದೀವಿ. ನಾಟಕ ಮಾಡಬೇಡ. ಮೊದಲು ಡಿ ಬಾಸ್‌ನ ಕ್ಷಮೆ ಕೋರು’ ಎಂದು ಅಭಿಮಾನಿಗಳು ಜಗ್ಗೇಶ್‌ಗೆ ದಬಾಯಿಸಿರುವುದು ವಿಡಿಯೊ ಕ್ಲಿಪ್ಪಿಂಗ್‌ನಲ್ಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು