ಸೋಮವಾರ, ಫೆಬ್ರವರಿ 24, 2020
19 °C

ನಾಳೆ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಮೊದಲ ಹಾಡು ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಚಿನ್‌ ರವಿ ನಿರ್ದೇಶನದ ರಕ್ಷಿತ್‌ ಶೆಟ್ಟಿ ನಟನೆಯ ‘ಅವನೇ ಶ್ರೀಮನ್ನಾರಾಯಣ‘ ಚಿತ್ರ ಸಾಕಷ್ಟು ಕುತೂಹಲ ಹೆಚ್ಚಿಸಿದೆ. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳದಲ್ಲಿ ಈ ಚಿತ್ರ ತೆರೆ ಕಾಣುತ್ತಿದೆ. ಈಗಾಗಲೇ, ಚಿತ್ರದ ಟ್ರೇಲರ್‌ ಬಿಡುಗಡೆಗೊಂಡಿದ್ದು ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಡಿಸೆಂಬರ್‌ 27ರಂದು ಈ ಚಿತ್ರ ಬಿಡುಗಡೆಯಾಗುತ್ತಿದೆ.

ಬಿಡುಗಡೆಯ ಪೂರ್ವ ಸಿದ್ಧತೆಯಲ್ಲಿ ತೊಡಗಿರುವ ಚಿತ್ರತಂಡ ಡಿಸೆಂಬರ್‌ 12ರಂದು ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಲಿದೆ. ನಾಗಾರ್ಜುನ ಶರ್ಮ ಬರೆದಿರುವ ಈ ‘ಹ್ಯಾಂಡ್ಸ್‌ ಅಪ್‌’ ಸಾಂಗ್‌ಗೆ ಅಜನೀಶ್‌ ಬಿ. ಲೋಕೇಶ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ನಾಲ್ಕೂ ಹಾಡುಗಳನ್ನು ನಾಗಾರ್ಜುನ ಶರ್ಮ ಅವರೇ ಬರೆದಿರುವುದು ವಿಶೇಷ.

‘ನಾರಾಯಣನ ಪಾತ್ರಕ್ಕೆ ತಕ್ಕಂತೆ ಈ ಹಾಡು ಹೊಸೆಯಲಾಗಿದೆ. ಇದರಲ್ಲಿ ರಕ್ಷಿತ್‌ ಶೆಟ್ಟಿ ಅವರ ಅಭಿನಯವೂ ಸೊಗಸಾಗಿದೆ’ ಎಂದು ಹೇಳಿದ್ದಾರೆ ನಾಗಾರ್ಜುನ ಶರ್ಮ.

ಹೀರೊಗಳ ಪ್ರವೇಶಕ್ಕೆ ಸೀಮಿತಗೊಳಿಸಿ ಹಾಡು ಬರೆಯುವುದು ಹೊಸದೇನಲ್ಲ. ಈ ಹಾಡಿನಲ್ಲಿಯೂ ರಕ್ಷಿತ್‌ ಶೆಟ್ಟಿ ಅವರ ಪೊಲೀಸ್‌ ಅಧಿಕಾರಿಯ ಪಾತ್ರಕ್ಕೆ ತಕ್ಕಂತೆ ಸೆಟ್‌ ಅಳವಡಿಸಿ ಚಿತ್ರೀಕರಿಸಲಾಗಿದೆಯಂತೆ. ಕಥೆಗೆ ಪೂರಕವಾಗಿ ಈ ಹಾಡು ಇದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು