ಶುಕ್ರವಾರ, ಜನವರಿ 17, 2020
22 °C

ಆಟ ಬರುತ್ತಾ...ಹ್ಯಾಂಡ್ಸ್‌ ಅಪ್‌: ಅವನೇ ಶ್ರೀಮನ್ನಾರಾಯಣ ಚಿತ್ರದ ವಿಡಿಯೊ ಹಾಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಕ್ಷಿತ್‌ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಮೊದಲ ವಿಡಿಯೊ ಸಾಂಗ್ ‘ಹ್ಯಾಂಡ್ಸ್‌ ಅಪ್‌’ ಹಾಡು ಗುರುವಾರ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. 

ಯುಟ್ಯೂಬ್‌ ಪ್ರಿಮೀಯರ್‌ ಮೂಲಕ ವಿಡಿಯೊ ಸಾಂಗ್‌ ಅನ್ನು ಬಿಡುಗಡೆ ಮಾಡಲಾಗಿದೆ. ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು ಎಲ್ಲಾ ಹಾಡುಗಳನ್ನು ನಾಗಾರ್ಜುನ ಶರ್ಮಾ ಬರೆದಿದ್ದಾರೆ. ಅಜನೀಶ್‌ ಬಿ.ಲೋಕೇಶ್ ಅವರು ಸಂಗೀತ ಸಂಯೋಜಿಸಿದ್ದಾರೆ. ‘ಹ್ಯಾಂಡ್ಸ್‌ ಅಪ್‌’ ಹಾಡಿನಲ್ಲಿ ಪೊಲೀಸ್‌ ಪಾತ್ರದಾರಿಯಾಗಿರುವ ನಾರಾಯಣ ಕ್ಲಬ್‌ನಲ್ಲಿ ರೌಡಿಗಳ ಜೊತೆ ಕುಣಿಯುವುದನ್ನು ನೋಡಬಹುದು. ವಿಜಯ ಪ್ರಕಾಶ್ ಧ್ವನಿಯಲ್ಲಿ ಈ ಹಾಡು ಸೊಗಸಾಗಿ ಮೂಡಿ ಬಂದಿದೆ. 

ಬಿಡುಗಡೆಯಾಗಿ 30 ನಿಮಿಷಗಳಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಹ್ಯಾಂಡ್ಸ್‌ ಅಪ್‌ ಸಾಂಗ್‌ ಅನ್ನು ನೋಡಿದ್ದಾರೆ. 

ಸಚಿನ್‌ ರವಿ ನಿರ್ದೇಶನ ‘ಅವನೇ ಶ್ರೀಮನ್ನಾರಾಯಣ‘ ಚಿತ್ರ ಸಾಕಷ್ಟು ಕುತೂಹಲ ಹೆಚ್ಚಿಸಿದೆ. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳದಲ್ಲಿ ಈ ಚಿತ್ರ ತೆರೆ ಕಾಣುತ್ತಿದೆ. ಈಗಾಗಲೇ, ಚಿತ್ರದ ಟ್ರೇಲರ್‌ ಬಿಡುಗಡೆಗೊಂಡಿದ್ದು ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಡಿಸೆಂಬರ್‌ 27ರಂದು ಈ ಚಿತ್ರ ಬಿಡುಗಡೆಯಾಗುತ್ತಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು