ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವೆಂಜರ್ಸ್‌: ₹ 2,135 ಕೋಟಿ ಗಳಿಕೆ

Last Updated 27 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಅವೆಂಜರ್ಸ್‌; ಎಂಡ್‌ಗೇಮ್‌ ಚಿತ್ರ ಜಗತ್ತಿನಾದ್ಯಂತ ₹ 2,135 ಕೋಟಿಯಷ್ಟು ಗಳಿಕೆ ದಾಖಲಿಸಿದೆ. ಭಾರತದಲ್ಲಿ ಶುಕ್ರವಾರ ಬಿಡುಗಡೆಯಾಗಿದ್ದು ಮೊದಲ ದಿನವೇ ₹ 53.10 ಕೋಟಿ ಗಳಿಸಿದೆ.

ಮಾರ್ವೆಲ್‌ ಸ್ಟುಡಿಯೋ ನಿರ್ಮಾಣದ ಈ ಚಿತ್ರ ಶುಕ್ರವಾರ ಬಿಡುಗಡೆಯಾಗಿದೆ. ದೇಶದಲ್ಲಿ ಇಂಗ್ಲಿಷ್‌, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲೂ ಬಿಡುಗಡೆಯಾಗಿದೆ.

‘ಚಿತ್ರಕ್ಕೆ ಪ್ರೇಕ್ಷಕರಿಂದ ಅಭೂತ ಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.ಜನರು ಮಾರ್ವೆಲ್‌ ಪಾತ್ರಗಳನ್ನು ನೋಡಲು 11 ವರ್ಷಗಳಿಂದ ಕಾತರದಿಂದ ಕಾಯುತ್ತಿದ್ದರು. ಆ ಪಾತ್ರಗಳ ಬಗ್ಗೆ ಅತೀವ ಪ್ರೀತಿ ಹೊಂದಿರುವುದು ಸ್ಪಷ್ಟವಾಗಿದೆ’ ಎಂದು ಡಿಸ್ನಿ ಇಂಡಿಯಾದ ಸ್ಟುಡಿಯೊ ಎಂಟರ್‌ಟೈನ್‌ಮೆಂಟ್‌ನ ಮುಖ್ಯಸ್ಥ ವಿಕ್ರಂ ದುಗ್ಗಲ್‌ ತಿಳಿಸಿದರು.

3ಗಂಟೆ 1 ನಿಮಿಷ ಅವಧಿಯ ಸೂಪರ್‌ ಹೀರೋ ಪಾತ್ರವೊಂದರ ಸಾಹಸಗಳ ಚಿತ್ರಣ ಈ ಸಿನಿಮಾದಲ್ಲಿದೆ. ಆ್ಯಂಟನಿ ಮತ್ತು ಜೋ ರಸ್ಸೊ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮನೋರಂಜನಾ ಕ್ಷೇತ್ರದ ಇತ್ತೀಚಿನ ಇತಿಹಾಸದಲ್ಲಿ ಈ ಚಿತ್ರ ದೊಡ್ಡಘಟನೆಯಾಗಿ ದಾಖಲಾಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT