ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅವೆಂಜರ್ಸ್‌ ಎಂಡ್‌ಗೇಮ್‌’ಗೆ ಮುರುಗದಾಸ್‌ ಸಂಭಾಷಣೆ

Last Updated 18 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಸರ್ಕಾರ್‌, ಕತ್ತಿ, ತುಪಾಕಿ, ಘಜನಿಯಂತಹ ಚಿತ್ರಗಳಿಗೆ ಸಂಭಾಷಣೆ ಬರೆದಿರುವ ಎ.ಆರ್.ಮುರುಗದಾಸ್‌ ಮತ್ತೊಂದು ಬಹುಭಾಷಾ ಚಿತ್ರಕ್ಕಾಗಿ ಲೇಖನಿ ಎತ್ತಿಕೊಂಡಿದ್ದಾರೆ. ‘ಅವೇಂಜರ್ಸ್‌ ಎಂಡ್‌ಗೇಮ್‌’ನ ತಮಿಳು ಅವತರಣಿಕೆಯಲ್ಲಿ ಮುರುಗದಾಸ್‌ ಸಂಭಾಷಣೆ ಇರಲಿದೆ. ಇಂಗ್ಲಿಷ್‌, ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಏಪ್ರಿಲ್‌ 26ರಂದು ಏಕಕಾಲಕ್ಕೆ ‘ಅವೆಂಜರ್ಸ್‌..’ ತೆರೆಕಾಣಲಿದೆ.

ಅಮೆರಿಕದ ಮಾರ್ವೆಲ್‌ ಸ್ಟುಡಿಯೊಸ್‌ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಮಾರ್ವೆಲ್‌ನ ಚಿತ್ರಗಳಿಗೆ ಭಾರತದಲ್ಲಿ ದೊಡ್ಡ ಸಂಖ್ಯೆಯ ಪ್ರೇಕ್ಷಕರು ಇರುವ ಕಾರಣ ಇಲ್ಲಿನ ಮಾರುಕಟ್ಟೆಯನ್ನು ಈ ಮೂಲಕ ವಿಸ್ತರಿಸಿಕೊಳ್ಳಲು ಅದು ಯೋಜಿಸಿದೆ. ಕಳೆದ ವರ್ಷ ತೆರೆ ಕಂಡಿದ್ದ ‘ಅವೆಂಜರ್ಸ್‌: ಇನ್ಫಿನಿಟಿ’ ಭಾರತದಲ್ಲಿ ₹227 ಕೋಟಿ ಆದಾಯ ಮಾಡಿತ್ತು. ‘ಥಾನೋಸ್‌ ಫಾರ್‌ ಅವೆಂಜರ್ಸ್‌’ನ ತೆಲುಗು ಆವೃತ್ತಿಯಲ್ಲಿ ರಾನಾ ದಗ್ಗುಬಾಟಿ ಅವರನ್ನು ಕಂಠದಾನ ಕಲಾವಿದರಾಗಿ ಬಳಸಿಕೊಳ್ಳಲಾಗಿತ್ತು. ದಕ್ಷಿಣ ಮತ್ತು ಉತ್ತರ ಭಾರತದ ಚಿತ್ರರಂಗಗಳಿಗೆ ಸ್ಥಳೀಯ ಭಾಷೆಗಳ ಮೂಲಕ ಮಾರ್ವೆಲ್‌ ಸ್ಟುಡಿಯೊಸ್‌ ಲಗ್ಗೆಯಿಟ್ಟಿದೆ.

ಜಾಗತಿಕ ಮಟ್ಟದಲ್ಲಿ ಸೂಪರ್‌ ಹೀರೊ ಸಿನಿಮಾಗಳು ಮತ್ತು ಸರಣಿಗಳಿಗೆ ಹೆಸರಾದ ಮಾರ್ವೆಲ್‌ ಸ್ಟುಡಿಯೊಸ್‌ ಜೊತೆ ಕೆಲಸ ಮಾಡಲು ಸಿಕ್ಕಿದ ಅವಕಾಶದಿಂದ ಮುರುಗದಾಸ್ ಥ್ರಿಲ್‌ ಆಗಿದ್ದಾರಂತೆ. ‘ಎಂಡ್‌ಗೇಮ್‌’ನ್ನು ನೋಡಲು ಇಡೀ ದೇಶದ ಸಿನಿಮಾಸಕ್ತರು ಕಾತರದಿಂದ ಕಾಯುತ್ತಿದ್ದಾರೆ. ನನ್ನ ಮಗನಿಂದಾಗಿ ಈ ಅವಕಾಶ ನನಗೆ ಸಿಕ್ಕಿದೆ. ಚಿತ್ರಕತೆಗಾರ, ಸಂಭಾಷಣೆಕಾರ, ಚಿತ್ರ ನಿರ್ದೇಶಕನಾದ ನನಗೆ ಜಾಗತಿಕ ಮಟ್ಟದಲ್ಲಿ ಹೊಸ ವಿಳಾಸ ಸಿಕ್ಕಿದಂತಾಗಿದೆ. ‘ಎಂಡ್‌ಗೇಮ್‌ನ ತಮಿಳು ಆವೃತ್ತಿಗೆ ಸ್ಥಳೀಯ ಸೊಗಡಿನ ಸ್ಪರ್ಶ ನೀಡಲು ಯತ್ನಿಸಿದ್ದೇನೆ. ಇದು ಅಭಿಮಾನಿಗಳಿಗೆ ಇಷ್ಟವಾಗುವುದರಲ್ಲಿ ಸಂಶಯವಿಲ್ಲ’ ಎಂದು ಅವರು ಹೇಳಿಕೊಂಡಿದ್ದಾರೆ.

ತಮಿಳಿನಲ್ಲಿ ‘ಅವೆಂಜರ್ಸ್‌ ಎಂಡ್‌ಗೇಮ್‌’ ನೋಡುವ ಪ್ರೇಕ್ಷಕನ ಅಭಿಪ್ರಾಯ ಏನಿರುತ್ತದೋ ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT