ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭಾವನೆ ಬೇಡವೆಂದಿದ್ದ ಅವಿನಾಶ್

Last Updated 6 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ರಾಜ್ ಪಂಡಿತ್ ಅವರು ತಾವು ನಿರ್ದೇಶಿಸಿದ ‘ದೇವರಿಗೆ ಪಾಠ’ ಎಂಬ ಕಿರುಚಿತ್ರದಲ್ಲಿ ಹಿರಿಯ ನಟ ಅವಿನಾಶ್ ಅವರು ಇರಬೇಕು ಎಂದು ಬಯಸಿದರು. ಇದನ್ನು ಕೆಲವರ ಬಳಿ ಹೇಳಿಕೊಂಡರು ಕೂಡ. ರಾಜ್ ಅವರ ಮಾತು ಕೇಳಿದ ಹಲವರು ನಕ್ಕಿದ್ದರು.

ಆದರೆ, ಇತರರು ನಗುವಂತೆ ಆಗಿದೆ ಎಂಬುದನ್ನು ತಲೆಗೆ ಹಾಕಿಕೊಳ್ಳದ ರಾಜ್, ಅವಿನಾಶ್ ಅವರನ್ನು ನೇರವಾಗಿ ಭೇಟಿ ಮಾಡಿ, ‘ಈ ಕಿರುಚಿತ್ರದಲ್ಲಿ ನೀವು ಅಭಿನಯಿಸಬಹುದೇ’ ಎಂದು ಕೇಳಿದರು. ಇದಕ್ಕೆ ಅವಿನಾಶ್ ಒಪ್ಪಿಕೊಂಡರು. ಅಷ್ಟೇ ಅಲ್ಲ, ಕಿರುಚಿತ್ರದಲ್ಲಿ ಅಭಿನಯಿಸಿದ್ದಕ್ಕೆ ಸಂಭಾವನೆಯನ್ನು ಕೂಡ ಪಡೆಯಲಿಲ್ಲ.

ಈ ಅವಿನಾಶ್ ಅವರು ರಾಜ್‌ ನಿರ್ದೇಶನದ ‘ಮೌನಂ’ ಚಿತ್ರದಲ್ಲಿ ಕೂಡ ಬಹುಮುಖ್ಯ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ಈ ಚಿತ್ರವು ತೆರೆಗೆ ಬರಲು ಸಜ್ಜಾಗಿ ನಿಂತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡವು ಇದರ ಹಾಡುಗಳನ್ನು ನಟ ದರ್ಶನ್ ಅವರಿಂದ ಬಿಡುಗಡೆ ಮಾಡಿಸಿತು. ‘ಮೌನಂ ಚಿತ್ರದ ಕಥೆಯನ್ನು ನಾನು ಹಲವಾರು ನಿರ್ಮಾಪಕರಲ್ಲಿ ಹೇಳಿದ್ದೆ. ಆದರೆ, ಇದು ಬಹಳ ಸೂಕ್ಷ್ಮವಾದ ಕಥಾವಸ್ತುವನ್ನು ಹೊಂದಿದೆ. ಬೇರೆ ಯಾವುದಾದರೂ ಸಿನಿಮಾ ಮಾಡು ಎಂದು ಅವರು ನನಗೆ ಹೇಳಿದ್ದರು. ಕೊನೆಯಲ್ಲಿ ಶ್ರೀಹರಿ ಅವರು ಈ ಚಿತ್ರಕ್ಕೆ ಹಣ ಹೂಡಲು ಒಪ್ಪಿದರು’ ಎಂದರು ರಾಜ್.

ಈ ಚಿತ್ರವು ಫೆಬ್ರುವರಿ 21ರಂದು ತೆರೆಗೆ ಬರುವ ನಿರೀಕ್ಷೆ ಇದೆ. ‘ಮಗನನ್ನು ಬಹಳವಾಗಿ ಪ್ರೀತಿಸುವ ಅಪ್ಪನ ಪಾತ್ರ ಅವಿನಾಶ್ ಅವರದ್ದು. ಮಗ ಯುವತಿಯೊಬ್ಬಳನನ್ನು ಪ್ರೀತಿಸುತ್ತಾನೆ. ಮುಂದೆ, ಆ ಯುವತಿಯ ಮೇಲೆ ಯುವಕನ ತಂದೆಗೆ ಕಾಮನೆಗಳು ಹುಟ್ಟಿಕೊಳ್ಳುತ್ತವೆ. ಅದರ ನಂತರ ಏನಾಗುತ್ತದೆ ಎಂಬುದನ್ನು ಚಿತ್ರ ನೋಡಿ ತಿಳಿದುಕೊಳ್ಳಬೇಕು’ ಎಂದು ಚಿತ್ರತಂಡದ ಸದಸ್ಯರೊಬ್ಬರು ಕಥೆಯ ಒಂದು ಎಳೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT