ಮಂಗಳವಾರ, ಜೂನ್ 28, 2022
26 °C

ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ ಹೊಸ ಗೆಳತಿ ಭೇಟಿಯಾದ ಐರಾ ಯಶ್‌!

ಪ್ರಜಾವಾಣಿ Updated:

ಅಕ್ಷರ ಗಾತ್ರ : | |

Radhika Pandit

ರಾಕಿಂಗ್‌ ಸ್ಟಾರ್‌ ಯಶ್ ಮತ್ತು ರಾಧಿಕಾ ಪಂಡಿತ್‌ ಮಗಳು ಐರಾ ಯಶ್‌ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತ ನಡೆದಾಡುತ್ತಿರುವ ವಿಡಿಯೊ ಅಭಿಮಾನಿಗಳಿಗೆ ಕಚಗುಳಿ ನೀಡಿದೆ. ತನ್ನದೇ ನೆರಳು ನೋಡಿ ಯಾರನ್ನೊ ನೋಡಿದಂತೆ ಗಲಿಬಿಲಿಗೊಂಡ ಕ್ಷಣವನ್ನು ಮಧುರ ಮುಗ್ಧತೆಯೆಂದು ಅಭಿಮಾನಿಗಳು ಬಣ್ಣಿಸಿದ್ದಾರೆ.

ಕೊರೊನಾ ವೈರಸ್‌ ಮತ್ತು ಲಾಕ್‌ಡೌನ್‌ನಂತಹ ಸಂಕಷ್ಟದ ದಿನಗಳಲ್ಲಿ ಮನೆಯಲ್ಲೇ ಮಕ್ಕಳ ಜೊತೆ ಸಮಯ ಕಳೆಯುತ್ತಿರುವ ತಾರಾ ಜೋಡಿ ಮೊದಲ ಬಾರಿಗೆ ಮಗಳು ಐರಾ ನಡೆದಾಡುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ನಟಿ ರಾಧಿಕಾ ಪಂಡಿತ್‌ ಇನ್ಸ್‌ಟಾಗ್ರಾಮ್‌ನಲ್ಲಿ ಐರಾಳ ವಿಡಿಯೊ ಪೋಸ್ಟ್‌ ಮಾಡಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿ ಲೈಕ್‌ ಮತ್ತು ಕಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ಐರಾ ತನ್ನ ನೆರಳನ್ನು ನೋಡಿ ಹಾಯ್, ಹಾಯ್‌ ಎಂದು ಮಾತನಾಡಿಸುತ್ತ ತನಗೊಬ್ಬಳು ಹೊಸ ಗೆಳತಿ ಸಿಕ್ಕಂತೆ ಸಂಭ್ರಮ ವ್ಯಕ್ತ ಪಡಿಸಿದ್ದಾಳೆ.

'ಐರಾ ನಡೆದಾಡಲು ಆರಂಭಿಸಿದ ಕ್ಷಣಗಳ ವಿಡಿಯೊ ಇದು. ತನ್ನ ನೆರಳನ್ನು ನೋಡಿದ ತಕ್ಷಣ ಗಲಿಬಿಲಿಗೊಂಡಳೆಂದು ಅನಿಸುತ್ತದೆ. ಮಕ್ಕಳಲ್ಲಿರುವ ಅದ್ಭುತ ಗುಣವೆಂದರೆ ಎಲ್ಲರ ಬಗ್ಗೆಯೂ ಒಂದೇ ರೀತಿಯ ಮುಗ್ಧ ಭಾವನೆ ಹೊಂದಿರುತ್ತಾರೆ. ಮಕ್ಕಳು ಯಾರನ್ನೂ ಜಡ್ಜ್‌ ಮಾಡುವುದಿಲ್ಲ' ಎಂದು ರಾಧಿಕಾ ಪಂಡಿತ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು