ಶುಕ್ರವಾರ, ಫೆಬ್ರವರಿ 28, 2020
19 °C

‘ಭಾಗಿ 3’ ಪೋಸ್ಟರ್ ಬಂತು: ಯಾವ ದೇಶದ ವಿರುದ್ಧ ಯುದ್ಧ ಟೈಗರ್‌ ಶ್ರಾಫ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಟೈಗರ್‌ ಶ್ರಾಫ್ ಅಭಿನಯದ ‘ಭಾಗಿ 3’ ಚಿತ್ರದ ಮೊದಲ ಪೋಸ್ಟರ್ ಸೋಮವಾರ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ. ಅಹ್ಮದ್ ಖಾನ್ ನಿರ್ದೇಶನದ ಭಾಗಿ 3 ಚಲನಚಿತ್ರವು ಭಾಗಿ ಸರಣಿಯ ಮೂರನೇ ಚಿತ್ರ. ಹಿಂದಿನ ಚಿತ್ರಗಳಂತೆ ಈ ಚಿತ್ರದಲ್ಲಿಯೂ ಟೈಗರ್ ಶ್ರಾಫ್ ‘ರಾನಿ’ ಹೆಸರಿನ ಮುಖ್ಯಪಾತ್ರದಲ್ಲಿದ್ದಾರೆ.

‘ಭಾಗಿ 1’ರಲ್ಲಿ ನಾಯಕಿಯಾಗಿದ್ದ ಶ್ರದ್ಧಾ ಕಪೂರ್ ಈ ಚಿತ್ರದ ಮೂಲಕ ‘ಭಾಗಿ’ ಸರಣಿಯಲ್ಲಿ ಮತ್ತೆ ನಾಯಕಿಯಾಗುತ್ತಿದ್ದಾರೆ. ‘ಭಾಗಿ 3’ ಚಿತ್ರದ ಪೋಸ್ಟರ್‌ನಲ್ಲಿರುವ ‘ಈ ಬಾರಿ ದೇಶವೊಂದರ ವಿರುದ್ಧ’ ಎನ್ನುವ ಸಾಲು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಗುರುವಾರ (ಫೆ.6) ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ.

ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಚಿತ್ರದ ಪೋಸ್ಟರ್ ಶೇರ್ ಮಾಡಿರುವ ಟೈಗರ್ ಶ್ರಾಫ್, ‘ಶಕ್ತಿಶಾಲಿ ಶತ್ರುಗಳ ವಿರುದ್ಧ, ದೇಶವೊಂದರ ವಿರುದ್ಧ ದೊಡ್ಡ ಯುದ್ಧಕ್ಕಾಗಿ ರಾನಿ ಮತ್ತೆ ಬಂದಿದ್ದಾನೆ’ ಎಂದು ಬರೆದುಕೊಂಡಿದ್ದಾರೆ.

 
 
 
 
 
 
 
 
 
 
 
 
 

Against his strongest enemy, His greatest battle, Up against a nation, RONNIE is back! 💪🏻 #Baaghi3 trailer out on 6th Feb, Thursday. #sajidnadiadwala . . @shraddhakapoor @riteishd @khan_ahmedasas @wardakhannadiadwala @foxstarhindi @nadiadwalagrandson

Tiger Shroff (@tigerjackieshroff) ರಿಂದ ಹಂಚಲಾದ ಪೋಸ್ಟ್ ಅವರು ರಂದು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು