ಗುರುವಾರ , ಅಕ್ಟೋಬರ್ 21, 2021
29 °C

ಅ. 8ಕ್ಕೆ ‘ಬಾಬು ಮಾರ್ಲಿ’ ತೆರೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಬಾಬು ಮಾರ್ಲಿ’ ಚಿತ್ರ ಅಕ್ಟೋಬರ್‌ 8ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕ್ರೀಡಾ ವಿಷಯ ಆಧಾರಿತ ಚಿತ್ರವಿದು. 

ವಾಲಿಬಾಲ್ ಆಟಗಾರನೊಬ್ಬನ ಜೀವನದಲ್ಲಿ ನಡೆದ ಘಟನೆಗಳನ್ನಾಧರಿಸಿ ನಿರ್ಮಾಣವಾಗಿರುವ ಚಿತ್ರವಿದು.

ಅವಿನಾಶ್ ಸಂಪತ್ ಈ ಚಿತ್ರದ ನಾಯಕ. ವಾಲಿಬಾಲ್‌ ಆಟಗಾರ ಬಾಬು ಹೆಸರಿನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಬೆಡಗಿ ಮೀನಾಕ್ಷಿ ದೀಕ್ಷಿತ್ ನಾಯಕಿ.

ಬಾಬು ಕಾಲಕ್ರಮೇಣ ಮಾದಕದ್ರವ್ಯ ವ್ಯಸನಿಯಾಗುತ್ತಾನೆ. ನಂತರ ಅವನ ಜೀವನದ ಹಾದಿಯೇ ಬೇರೆಯಾಗುತ್ತದೆ. ಆನಂತರ ಸ್ನೇಹದ ಸುಳಿಯಲ್ಲಿ ಸಿಲುಕುವ ನಾಯಕ ಮೊದಲಿನಂತಾಗುತ್ತಾನೆ. ಆಟದಲ್ಲಿ ಉತ್ತಮ ಹೆಸರು ಗಳಿಸುತ್ತಾನೆ. ಇದೇ ಚಿತ್ರದ ಪ್ರಮುಖ ಕಥಾವಸ್ತು. ಬರೀ ಕ್ರೀಡೆ ಅಷ್ಟೇ ಅಲ್ಲ. ಪ್ರೇಮಕಥೆಯೂ ಈ ಚಿತ್ರದಲ್ಲಿದೆ. ಇದೊಂದು ಯುವಜನತೆಯ ಮನಸ್ಸಿಗೆ ಹೇಳಿ ಮಾಡಿಸಿದ ಕಥಾವಸ್ತು ಎಂದಿದೆ ಚಿತ್ರತಂಡ.

ಊಟಿ, ಬೆಂಗಳೂರಿನಲ್ಲಿ 45 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಮಾಹಿ ಜಿ.ವೈ.ಕೆ ಈ ಚಿತ್ರದ ನಿರ್ದೇಶಕರು. ಇವರೇ ಕಥೆ ಚಿತ್ರಕಥೆ ಬರೆದಿದ್ದಾರೆ. ಜಗನ್ಮೋಹನ್ ಫಿಲಂಸ್ ಲಾಂಛನದಲ್ಲಿ ಜಗನ್ಮೋಹನ ರಾವ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಕೃತಿಕಾ ಈ ಚಿತ್ರದ ಸಹ ನಿರ್ಮಾಪಕರು.

ತ್ರಿವೇಣಿ (ಟಗರು ಸರೋಜ), ಸಾರಿಕಾ, ಕಿಲ್ಲರ್ ವೆಂಕಟೇಶ್, ಅಶೋಕ್, ಶಿಲ್ಪ, ಪೂಜಾ ಈ ಚಿತ್ರದಲ್ಲಿದ್ದಾರೆ. ಐದು ಹಾಡುಗಳಿವೆ. ಎಂ.ಸಿ.ಬಿಜು, ರಾಹುಲ್ ಡಿಟೊ ಹಾಗೂ ಎಸ್ ಐ ಡಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರಖ್ಯಾತ್ ನಾರಾಯಣ್ ಛಾಯಾಗ್ರಹಣ, ಬಿಪಿನ್ ಪಾಲ್ ಸಾಮುಯಲ್, ವಿಷ್ಣು ಮಾನಿಕ್, ಜಾರ್ಜ್ ಸಂಕಲನ ಹಾಗೂ ನೀರ್ಜಾ ರಾಕಿಲ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ರಾಮಕೃಷ್ಣ ರಣಗಟ್ಟಿ ಸಂಭಾಷಣೆ ಬರೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.