ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಿ ತೆರೆಯ ದೃಶ್ಯವೈಭವ 'ಬಾಹುಬಲಿ‘ಗೆ ಐದು ವರ್ಷದ ಸಂಭ್ರಮ

Last Updated 10 ಜುಲೈ 2020, 16:05 IST
ಅಕ್ಷರ ಗಾತ್ರ

ಬಂಡವಾಳ, ಗಳಿಕೆ ಸೇರಿದಂತೆ ಹಲವು ವಿಭಾಗಗಳಲ್ಲಿ ದಾಖಲೆಗಳನ್ನು ಸೃಷ್ಟಿಸಿ, ಜಾಗತಿಕ ಸಿನಿಮಾ ಲೋಕವನ್ನೇ ತನ್ನತ್ತ ತಿರುಗುವಂತೆ ಮಾಡಿದ ರಾಜಮೌಳಿ ನಿರ್ದೇಶನದ ಸಿನಿಮಾ ‘ಬಾಹುಬಲಿ– ದಿ ಬಿಗಿನಿಂಗ್‌‘ ತೆರೆಗೆ ಬಂದು ಜುಲೈ10ಕ್ಕೆ ಐದು ವರ್ಷ.

ಪ್ರಭಾಸ್‌, ಅನುಷ್ಕಾಶೆಟ್ಟಿ, ರಾನಾ ದಗ್ಗುಬಾಟಿ, ತಮನ್ನಾ ಭಾಟಿಯಾ, ರಮ್ಯಕೃಷ್ಣ ಅವರ ಬಹುತಾರಾಗಣ, ಅದ್ಧೂರಿ ಸೆಟ್‌, ಆಧುನಿಕ ತಂತ್ರಜ್ಞಾನ, ಅನಿಮೇಷನ್‌‌ನೊಂದಿಗೆ ನಿರ್ಮಾಣವಾದ ‘ಬಾಹುಬಲಿ’ – ಭಾರತೀಯ ಸಿನಿಮಾ ಲೋಕದಲ್ಲಿ ಸಂಚಲವ ಮೂಡಿಸಿದ ಚಿತ್ರ.

ಎರಡು ಭಾಗಗಳಲ್ಲಿ ಈ ಚಿತ್ರ ತೆರೆಕಂಡಿತು. ಭಾಗ 1 ಬಿಡುಗಡೆಯಾಗಿದ್ದು ಜುಲೈ 10, 2015ರಂದು.ಟ್ರೇಲರ್‌ನಿಂದ ಹಿಡಿದು, ಸಿನಿಮಾ ತೆರೆಗೆ ಬರುವವರೆಗೂ ಅಭಿಮಾನಿಗಳನ್ನು ತುದಿಗಾಲ ಮೇಲೆ ನಿಲ್ಲಿಸಿದ ಬಾಹುಬಲಿ, ಸಿನಿಮಾ ರಿಲೀಸ್ ಆದ ನಂತರವೂ ಅದೇ ಜೋಷ್‌ ಮುಂದುವರಿಯುವಂತೆ ಮಾಡಿತು.

‘ಬಾಹುಬಲಿ’ ಸಿನಿಮಾ ಐದನೇ ವರ್ಷದ ಸಂಭ್ರಮವನ್ನು ಇಡೀ ಚಿತ್ರತಂಡಸಿನಿಮಾದ ಕೆಲವು ದೃಶ್ಯದ ತುಣುಕುಗಳನ್ನು ಕೊಲಾಜ್‌‌ ಮಾಡಿ, ವಿಶೇಷ ವಿಡಿಯೊ ತಯಾರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಆಚರಿಸುತ್ತಿದೆ. ಪ್ರಭಾಸ್, ರಾನಾ ದಗ್ಗುಬಾಟಿ, ಅನುಷ್ಕಾಶೆಟ್ಟಿ ಸೇರಿದಂತೆ ಹಲವು ನಟ–ನಟಿಯರು ಈ 2ನಿಮಿಷ 05 ಸೆಕೆಂಡ್‌ನ ವಿಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಅದಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಪ್ರಭಾಸ್ ಸಿನಿಮಾದ ಸ್ಥಿರ ಛಾಯಾಚಿತ್ರಗಳ ಜತೆಗೆ, ಶೂಟಿಂಗ್‌ ಸಮಯದಲ್ಲಿ ತೆಗೆದ ಮೇಕಿಂಗ್‌ ಚಿತ್ರಗಳನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ಒಂದು ತಂಡ ಸೃಷ್ಟಿಸಿದ ಮ್ಯಾಜಿಕ್‌ಗೆ ಐದು ವರ್ಷ’ ಎಂದು ಪ್ರಭಾಸ್ ಬರೆದುಕೊಂಡಿದ್ದಾರೆ.

‘ಐದು ವರ್ಷಗಳ ಹಿಂದೆ, ಈ ಕ್ಷಣದಲ್ಲಿ ನಾವು ಏನು ಮಾಡುತ್ತಿದ್ದೇವೆಂದು ಕೆಲವೇ ಜನರಿಗೆ ಮಾತ್ರ ತಿಳಿದಿತ್ತು. ಆದರೆ, ಅದೆಲ್ಲವನ್ನೂ ಗೆದ್ದು ಬಂದಿದ್ದೇವೆ. ಅದಕ್ಕೆ ಸಂತೋಷವಾಗಿದೆ’ ಎಂದು ಬಾಹುಬಲಿ ಸಿನಿಮಾದ ನಿರ್ಮಾಪಕ ಶೋಭು ಯಾರ್ಲಗಡ್ಡ ಟ್ವೀಟ್‌ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT