ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಭಜರಂಗಿ 2' ಪೋಸ್ಟರ್ ಬಿಡುಗಡೆ; ಭಾವನಾ ಲುಕ್‌ಗೆ ಫಿದಾ ಆದ ಫ್ಯಾನ್ಸ್!

Last Updated 9 ಅಕ್ಟೋಬರ್ 2021, 5:59 IST
ಅಕ್ಷರ ಗಾತ್ರ

ಬೆಂಗಳೂರು: ಹರ್ಷ ನಿರ್ದೇಶನದ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅಭಿನಯದ 'ಭಜರಂಗಿ 2' ಸಿನಿಮಾದ ನಾಯಕಿಯ ಪೋಸ್ಟರ್ ಬಿಡುಗಡೆಯಾಗಿದ್ದು, ಭಾವನಾ ಮೆನನ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಮೈಕ್ರೊಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ ಕೂ ವೇದಿಕೆಯಲ್ಲಿ ಚಿನಿಮಿನಿಕಿ-ದಿ ಲೇಡಿ ಫೈರ್' ಎಂಬ ಅಡಿಬರಹದಲ್ಲಿ ನಾಯಕಿ ಭಾವನಾ ಮೆನನ್ ನ ಪೋಸ್ಟರ್ ಅನ್ನು ಸಿನೆಮಾ ತಂಡ ಹಂಚಿಕೊಂಡಿದೆ.

ದೊಡ್ಡ ಕ್ಯಾನ್ವಾಸ್‌ನಲ್ಲಿ 'ಭಜರಂಗಿ 2' ಸಿದ್ಧವಾಗಿದ್ದು, ಶಿವರಾಜ್‌ಕುಮಾರ್‌ ಮತ್ತು ಎ. ಹರ್ಷ ಕಾಂಬಿನೇಷನ್‌ನಲ್ಲಿ ಈ ಹಿಂದೆ ಮೂಡಿಬಂದಿದ್ದ 'ಭಜರಂಗಿ' ಚಿತ್ರದ ಸೀಕ್ವೆಲ್‌ ಆಗಿ ಈ ಸಿನಿಮಾ ಸಿದ್ಧವಾಗಿದೆ.

ಅದ್ದೂರಿ ಸೆಟ್‌ಗಳು, ಬಹು ತಾರಾಗಣ, ಭರ್ಜರಿ ಆ್ಯಕ್ಷನ್ ದೃಶ್ಯಗಳಿಂದಾಗಿ ಟೀಸರ್‌ ಮೂಲಕವೇ 'ಭಜರಂಗಿ 2' ಎಲ್ಲರ ಮನ ಗೆದ್ದಿತು. ಈಚಿತ್ರಕ್ಕೆ ಜಯಣ್ಣ-ಭೋಗೇಂದ್ರ ಬಂಡವಾಳ ಹೂಡಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

ಚಿತ್ರದಲ್ಲಿ ಶ್ರುತಿ, ಸೌರವ್ ಲೋಕೇಶ್, ಶಿವರಾಜ್.ಕೆ.ಆರ್.ಪೇಟೆ ಸೇರಿದಂತೆ ದೊಡ್ಡ ತಾರಾಬಳಗವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT