ಭಾನುವಾರ, ಮೇ 22, 2022
22 °C

ಕೆಜಿಎಫ್ ಚಾಪ್ಟರ್‌ 2: ತಿರುಪತಿ, ಸಿಂಹಾಚಲಂ ದೇಗುಲಗಳಿಗೆ ಯಶ್ ಭೇಟಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೆಜಿಎಫ್ ಚಾಪ್ಟರ್‌ 2’ ಸಿನಿಮಾ ಬಿಡುಗಡೆಗೂ ಮುನ್ನ ಚಿತ್ರದ ಯಶಸ್ಸಿಗಾಗಿ ಪ್ರಾರ್ಥಿಸಲು ನಟ ಯಶ್ ಅವರು ಅನೇಕ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ.

ಆಂಧ್ರ ಪ್ರದೇಶ ಪ್ರವಾಸದ ವೇಳೆ ಅವರು ಸೋಮವಾರ ತಿರುಪತಿ ವೆಂಕಟೇಶ್ವರ ದೇಗುಲ ಹಾಗೂ ವಿಶಾಖಪಟ್ಟಣದ ಸಿಂಹಾಚಲಂ ದೇಗುಲಕ್ಕೆ ಬೇಟಿ ನೀಡಿದ್ದಾರೆ.

 

ಇದೇ 14ರಂದು ಸಿನಿಮಾ ತೆರೆಗೆ ಬರಲಿದ್ದು, ಅದ್ದೂರಿ ಬಿಡುಗಡೆಗೆ ಸಿದ್ಧತೆ ಭರದಿಂದ ಸಾಗಿದೆ. ಸಿನಿಮಾವು 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಏಪ್ರಿಲ್ 10ರಂದು ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇಗುಲಗಳಿಗೆ ಚಿತ್ರತಂಡ ಸಮೇತ ಭೇಟಿ ನೀಡಿದ್ದ ಯಶ್, ಚಿತ್ರದ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಲು ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದೇವೆ ಎಂದು ಹೇಳಿದ್ದರು.

ಕೆಜಿಎಫ್ ಚಾಪ್ಟರ್‌ 2 ಬಿಡುಗಡೆಯ ಕಾರಣ ಶಾಹಿದ್‌ ಕಪೂರ್‌ ನಟನೆಯ ‘ಜೆರ್ಸಿ’ ಬಿಡುಗಡೆ ದಿನಾಂಕವನ್ನು ಏಪ್ರಿಲ್ 22ಕ್ಕೆ ಮುಂದೂಡಲಾಗಿದೆ ಎಂದು ನಿರ್ಮಾಪಕ ಅಮನ್ ಗಿಲ್ ಸೋಮವಾರ ತಿಳಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು